Manvitha Kamath: ಹಾರರ್​ ಸಿನಿಮಾದಲ್ಲಿ ಮಾನ್ವಿತಾ!

 ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗದ ಫೇಮಸ್​ ನಟಿ ಮಾನ್ವಿತಾ ಕಾಮತ್ ಅವರು ಹಾರರ್​ ಸಿನಿಮಾದಲ್ಲಿ ನಟಿಸಿದ್ದಾರೆ.

‘ಕ್ಯಾಪ್ಚರ್’ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಹಾಗೂ ಮಾನ್ವಿತಾ ಕಾಮತ್​ ಅವರು ತಾಯಿ-ಮಗಳ ಪಾತ್ರ ಮಾಡಿದ್ದಾರೆ. ಮಾನ್ವಿತಾ ಕಾಮತ್ ಅವರು ಸ್ನೇಹಾ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಮಾನ್ವಿತಾ ಕಾಮತ್ ಅವರು ಒಂದು ಸಣ್ಣ ಗ್ಯಾಪ್​ನ ಬಳಿಕ ಪ್ರೇಕ್ಷಕರ ಎದುರು ಬರಲು ರೆಡಿ ಆಗಿದ್ದಾರೆ. ಇಷ್ಟು ವರ್ಷಗಳ ವೃತ್ತಿಜೀವನದಲ್ಲಿ ಮಾನ್ವಿತಾಅವರು ಹಾರರ್​ ಸಿನಿಮಾದಲ್ಲಿ ನಟಿಸಿರಲಿಲ್ಲ.

‘ಇದೇ ಮೊದಲ ಬಾರಿ ನಾನು ಹಾರರ್ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಆರಂಭದಲ್ಲಿ ಬಹಳ ಭಯ ಇತ್ತು. ಆದರೆ ಪಾತ್ರ ಚೆನ್ನಾಗಿದೆ ಎಂಬ ಕಾರಣದಿಂದ ಒಪ್ಪಿಕೊಂಡೆ. ಪ್ರಿಯಾಂಕಾ ಅವರ ಜೊತೆ ಕೆಲಸ ಮಾಡಿದ್ದುಇಷ್ಟವಾಯಿತು. ಗೋವಾದಲ್ಲಿ 15 ದಿನ ಚಿತ್ರೀಕರಣ ಮಾಡಿದ್ದೇವೆ. ಚಿತ್ರೀಕರಣ ಮುಗಿಸಿ ಮನೆಗೆ ಬಂದಾಗ  ದೃಷ್ಟಿ ಆಗಿತ್ತು ಎನಿಸುತ್ತದೆ. ಜ್ವರ ಕೂಡ ಬಂದಿತ್ತು.  ದೃಷ್ಟಿ ತೆಗಿಸಿಕೊಂಡ ಮೇಲೆ ಸರಿ ಆಯಿತು’ ಎಂದು ಮಾನ್ವಿತಾ ಹೇಳಿದ್ದಾರೆ.

ಈ ಚಿತ್ರದಲ್ಲಿಮಾನ್ವಿತಾ ಕಾಮತ್ ಅವರ ಲುಕ್ ಹೇಗಿದೆ ಎಂಬುದು ಶೀಘ್ರದಲ್ಲೇ ಬಹಿರಂಗ ಆಗಲಿದೆ. ರವಿರಾಜ್ ಅವರ ‘ಶ್ರೀದುರ್ಗಾ ಪರಮೇಶ್ವರಿ ಪ್ರೊಡಕ್ಷನ್ಸ್​’ ಬ್ಯಾನರ್​ ಮೂಲಕ ಈ ಚಿತ್ರ ನಿರ್ಮಾಣ ಆಗುತ್ತಿದೆ. ಬಹುತೇಕ ಚಿತ್ರೀಕರಣ ಮುಗಿದಿದೆ.   ‘ಮಮ್ಮಿ’ ಸಿನಿಮಾ ಮೂಲಕ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಿದ್ದ ನಿರ್ದೇಶಕ ಲೋಹಿತ್​ ಅವರು  ‘ಕ್ಯಾಪ್ಚರ್​’ ಸಿನಿಮಾಗೆ ಆಕ್ಷನ್​-ಕಟ್​ ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಪ್ರಿಯಾಂಕಾ ಉಪೇಂದ್ರ ಅವರ 60 ಎತ್ತರದ ಕಟೌಟ್​ ಅನಾವರಣ ಮಾಡುವ ಮೂಲಕ ಭರ್ಜರಿಯಾಗಿ ಟೈಟಲ್​ ರಿವೀಲ್​ ಮಾಡಲಾಗಿತ್ತು.

ಮಾನ್ವಿತಾ ಕಾಮತ್​ ನಟನೆಯ ‘ಶಿವ 143’ ಚಿತ್ರ ಬಿಡುಗಡೆಯಾಗಿ ವರ್ಷ ಕಳೆದಿದೆ. ಆ ಚಿತ್ರದ ಬಳಿಕ ‘ಕ್ಯಾಪ್ಚರ್’ ಮೂಲಕ ಅವರು ಜನರನ್ನು ರಂಜಿಸಲು ಬರುತ್ತಿದ್ದಾರೆ.

——-

Be the first to comment

Leave a Reply

Your email address will not be published. Required fields are marked *

Translate »
error: Content is protected !!