ಸೂಪರ್‌ಸ್ಟಾರ್ ರಜನಿಕಾಂತ್ 33 ವರ್ಷಗಳ ಬಳಿಕ ತಮ್ಮ ಸ್ನೇಹಿತ ಅಮಿತಾಬ್ ಬಚ್ಚನ್ ಜೊತೆಗೆ ತೆರೆ ಹಂಚಿಕೊಳ್ಳುವ ಸಿದ್ಧತೆಯಲ್ಲಿದ್ದಾರೆ.
ಈ ಕುರಿತು ರಜನಿಕಾಂತ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ನೀಡಿದ್ದಾರೆ. ’33 ವರ್ಷಗಳ ಬಳಿಕ ನನ್ನ ಸ್ನೇಹಿತನೊಂದಿಗೆ ಮತ್ತೆ ಕೆಲಸ ಮಾಡುತ್ತಿದ್ದೇನೆ. ಅಮಿತಾಬ್ ಬಚ್ಚನ್ ತಮ್ಮ ಮುಂದಿನ ಚಿತ್ರ ಲೈಕಾ ನಿರ್ಮಾಣದ ‘ತಲೈವರ್ 170’ರಲ್ಲಿ ನಟಿಸುತ್ತಿದ್ದಾರೆ. ಇದೊಂದು ಹೃದಯ ತುಂಬಿದ ಸಮಯವಾಗಲಿದೆ’ ಎಂದು ರಜನಿಕಾಂತ್ ಹರ್ಷ ವ್ಯಕ್ತಪಡಿಸಿದ್ದಾರೆ.
‘ತಲೈವರ್ 170’ ಚಿತ್ರಕ್ಕೆ ಲೈಕಾ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಿದೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಟಿ.ಜೆ.ಗ್ಯಾನವೆಲ್ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ರಾಣಾ ದುಗ್ಗುಬಾಟಿ ಮತ್ತು ಫಹಾದ್ ಫಸಲ್, ದುಶರಾ ವಿಜಯನ್, ರಿತಿಕ ಸಿಂಗ್, ಮಂಜು ವಾರಿಯರ್ ನಟಿಸುತ್ತಿದ್ದಾರೆ. ‘ಜೈಲರ್’ ಸಿನಿಮಾಗೆ ಸಂಗೀತ ಸಂಯೋಜಿಸಿದ್ದ ಅನಿರುದ್ದ್ ರವಿಚಂದ್ರನ್ ಸಂಗೀತ ಚಿತ್ರಕ್ಕಿರಲಿದೆ.
‘ಜೈಲರ್’ ಯಶಸ್ಸಿನ ಬಳಿಕ ಸೂಪರ್‌ಸ್ಟಾರ್ ರಜನಿಕಾಂತ್ ಮತ್ತೊಂದು ಚಿತ್ರ ಘೋಷಿಸಿದ್ದಾರೆ. ಜೈಲರ್’ ಕಲಾನಿಧಿ ಮಾರನ್ ಅವರ ಸನ್ ಪಿಕ್ಚರ್ಸ್ ನಿರ್ಮಾಣದಲ್ಲಿ ಮೂಡಿಬಂದ ಆಕ್ಷ್ಯನ್ ಕಾಮಿಡಿ ಚಿತ್ರ ಆಗಿದ್ದು ಇದು ಬಾಕ್ಸ್ ಆಫೀಸ್ನಲ್ಲಿ ಹಿಟ್ ಎನಿಸಿತು.
ಈಗ ರಜಿನಿಕಾಂತ್ ‘ಲಾಲ್ ಸಲಾಂ’ ಚಿತ್ರದಲ್ಲಿ ಮಿಂಚಲು ಅಣಿಯಾಗುತ್ತಿದ್ದಾರೆ. ಈ ಚಿತ್ರವನ್ನು ರಜನಿಕಾಂತ್ ಮಗಳು ಐಶ್ವರ್ಯ ರಜಿನಿಕಾಂತ್ ನಿರ್ದೇಶನ, ಲೈಕಾ ನಿರ್ಮಾಣದಡಿ ಸುಬಸ್ಕರನ್ ಅಲಿರಾಜ್ ನಿರ್ಮಿಸುತ್ತಿದ್ದಾರೆ. ಪ್ರಮುಖ ಪಾತ್ರದಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಇದ್ದಾರೆ.
Be the first to comment