ವಿಭಿನ್ನ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ!

ಗೀತಾ ಆರ್ಟ್ಸ್‌ ನಿರ್ಮಿಸುತ್ತಿರುವ “ದಿ ಗರ್ಲ್‌ಫ್ರೆಂಡ್” ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರು ನಾಯಕಿಯಾಗಿ ವಿಭಿನ್ನ ಪಾತ್ರದಲ್ಲಿ ನಟಿಸಲಿದ್ದಾರೆ.

ಗೀತಾ ಆರ್ಟ್ಸ್ ತನ್ನ ಅಧಿಕೃತ ಎಕ್ಸ್ ಪೇಜ್‌ನಲ್ಲಿ ಚಿತ್ರದ ಘೋಷಣೆಯೊಂದಿಗೆ ಫಸ್ಟ್ ಲುಕ್ ಹಂಚಿಕೊಂಡಿದ್ದು, ರಶ್ಮಿಕಾ ಮಂದಣ್ಣ ಪಾತ್ರ ವಿಭಿನ್ನವಾಗಿ ಗಮನ ಸೆಳೆದಿದೆ.

‘ಜಗತ್ತು ದೊಡ್ಡ ದೊಡ್ಡ ಪ್ರೇಮಕಥೆಗಳಿಂದ ತುಂಬಿದೆ. ಆದರೆ ಇದುವರೆಗೆ ಕೇಳಿರದ ಅಥವಾ ನೋಡದ ಕೆಲವು ಪ್ರೇಮಕಥೆಗಳಿವೆ. ಮತ್ತು ‘ದಿ ಗರ್ಲ್‌ಫ್ರೆಂಡ್’ ಅಂತ ಒಂದು ಚಿತ್ರ ಎಂದು ಬ್ಯಾನರ್ ಪೋಸ್ಟ್‌ ಬಿಡುಗಡೆ ಮಾಡಿದೆ.

ಹಿರಿಯ ನಿರ್ಮಾಪಕ ಅಲ್ಲು ಅರವಿಂದ್ ಅವರ ನಿರ್ಮಾಣದ ಚಿತ್ರವನ್ನು ‘ಚಿ ಲಾ ಸೌ’ ಮತ್ತು ‘ಮನ್ಮಧುಡು 2’ ಚಿತ್ರಗಳ ಖ್ಯಾತಿಯ ರಾಹುಲ್ ರವೀಂದ್ರನ್ ಅವರ ಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.

ಚಿತ್ರಕ್ಕೆ ಮಾಸ್ ಮೂವಿ ಮೇಕರ್ಸ್ ಮತ್ತು ಧೀರಜ್ ಮೊಗಿಲಿನೇನಿ ಎಂಟರ್‌ಟೈನ್‌ಮೆಂಟ್ ನಿರ್ಮಾಣದಲ್ಲಿ ಜತೆಯಾಗಲಿದ್ದಾರೆ. ‘ಅನಿಮಲ್ ‘, ‘ಪುಷ್ಪಾ: ದಿ ರೂಲ್’ ರಶ್ಮಿಕಾ ಮಂದಣ್ಣ ಅವರ ಮುಂಬರುವ ಚಿತ್ರಗಳಾಗಿವೆ. ಪುಷ್ಪಾ 2 ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದು ಮುಂದಿನ ವರ್ಷ ಬಿಡುಗಡೆ ಆಗಲಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!