Parva: ಸಿನಿಮಾ ಆಗಲಿದೆ ಭೈರಪ್ಪ ಅವರ ಪರ್ವ

ಕನ್ನಡದ ಖ್ಯಾತ ಕಾದಂಬರಿಕಾರ ಎಸ್ ಎಲ್ ಭೈರಪ್ಪ ಅವರ ಪರ್ವ ಕಾದಂಬರಿ ಸಿನಿಮಾ ಆಗಲಿದೆ.

ಬಾಲಿವುಡ್ ನ ಖ್ಯಾತ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೊತ್ರಿ ಅವರು ಪರ್ವ ಕಾದಂಬರಿಯನ್ನು ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಬೆಂಗಳೂರಿನಲ್ಲಿ ಸಿನಿಮಾದ ಟೈಟಲ್ ಲಾಂಚ್ ಮಾಡಲಾಗಿದೆ.

ಈ ಬಗ್ಗೆ ಮಾತನಾಡಿರುವ ವಿವೇಕ್ ಅಗ್ನಿ ಹೋತ್ರಿ ಅವರು, ಒಂದು ವರ್ಷದ ಹಿಂದೆ ಪ್ರಕಾಶ್ ಬೆಳವಾಡಿ ಅವರು ನನಗೆ ಕರೆ ಮಾಡಿದ್ದರು. ಅವರು ಬೈರಪ್ಪನವರ ಜೊತೆಗೆ ಮಾತನಾಡುವಂತೆ ಆಗ ಹೇಳಿದ್ದರು. ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ನೋಡಿ ಅವರು ಪರ್ವ ಸಿನಿಮಾ ಮಾಡುವಂತೆ ಹೇಳಿದರು. ಈ ಸಿನಿಮಾ ಮೂರು ಭಾಗಗಳಲ್ಲಿ ಬರಲಿದೆ ಎಂದು ಹೇಳಿದರು.

ಪ್ರಕಾಶ್ ಬೆಳವಾಡಿ ಅವರು ಪರ್ವ ಕೃತಿಯನ್ನು ಆಧರಿಸಿದ ಇಂಗ್ಲೀಷ್ ನಾಟಕವನ್ನು ನಿರ್ದೇಶನ ಮಾಡಿದ್ದಾರೆ. ಇದು 8 ಗಂಟೆಯ ಅವಧಿಯನ್ನು ಹೊಂದಿದೆ.

ದಿ ಕಾಶ್ಮೀರ್ ಫೈಲ್ಸ್, ದಿ ವ್ಯಾಕ್ಸಿನ್ ವಾರ್ ಸಿನಿಮಾ ನಿರ್ದೇಶನ ಮಾಡಿರುವ ವಿವೇಕ್ ಅಗ್ನಿ ಹೋತ್ರಿ ಅವರು ಪರ್ವ ಸಿನಿಮಾವನ್ನು ನಿರ್ದೇಶನ ಮಾಡಲು ಹೊರಟಿರುವುದು ಕುತೂಹಲ ಮೂಡಿಸಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!