ಸಿದ್ಧಿ ಸೀರೆ ಮತ್ತು ರಾಗಿಣಿ ದ್ವಿವೇದಿ ಅಭಿನಯದ ಸಾರಿ ಕರ್ಮ ರಿಟರ್ನ್ಸ್ ಸಿನಿಮಾ ನಿರ್ದೇಶಿಸಿದ್ದ ಬ್ರಹ್ಮಾನಂದ ರೆಡ್ಡಿ (ಬ್ರಹ್ಮ) ಅವರು ವಸಿಷ್ಠ ಸಿಂಹ ಅವರೊಂದಿಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ.
ವಸಿಷ್ಠ ಸಿಂಹ ಅವರ ಜನ್ಮದಿನದಂದೇ ಸಿನಿಮಾದ ಘೋಷಣೆ ಮಾಡಲಾಗಿದೆ. ನಿರ್ದೇಶಕ ಬ್ರಹ್ಮ ತಮ್ಮ ಮುಂಬರುವ ಯೋಜನೆ ಕುರಿತು ಕೆಲ ವಿವರಗಳನ್ನು ಹಂಚಿಕೊಂಡಿದ್ದು, ಇದು ಕ್ರೈಮ್ ಥ್ರಿಲ್ಲರ್ ಎಂದು ಹೇಳಿದ್ದಾರೆ.
‘ಇನ್ನೂ ಹೆಸರಿಡದ ಈ ಚಿತ್ರವನ್ನು ಅನನ್ಯವಾಗಿಸುವುದು ಅದರ ಕಥೆ ಹೇಳುವ ವಿಭಿನ್ನ ಶೈಲಿ. ಈ ರೀತಿಯ ಚಿತ್ರಗಳು ಭಾರತೀಯ ಚಿತ್ರರಂಗದಲ್ಲಿ ಕಡಿಮೆ ಬಂದಿವೆ’ ಎಂದು ನಾಯಕನನ್ನು ಎರಡು ಶೇಡ್ಗಳಲ್ಲಿ ಚಿತ್ರಿಸಲು ಬ್ರಹ್ಮಾನಂದ ರೆಡ್ಡಿ (ಬ್ರಹ್ಮ) ಉದ್ದೇಶಿಸಿದ್ದಾರೆ.
ಈ ಚಿತ್ರಕ್ಕೆ ಕಲಾಸೃಷ್ಟಿ ಪ್ರೊಡಕ್ಷನ್ಸ್ ಬಂಡವಾಳ ಹೂಡಲಿದ್ದು,ಚಿತ್ರದ ಪಾತ್ರವೊಂದರಲ್ಲಿ ನಟಿಸುತ್ತಿರುವ ಅಫ್ಜಲ್, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿಯೂ ಬಡ್ತಿ ಪಡೆಯಲಿದ್ದಾರೆ. ಬೆಂಗಳೂರು, ಕೊಡಗು ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ.
ಚಿತ್ರಕ್ಕೆ ರಾಜೀವ್ ಗಣೇಶನ್ ಅವರ ಛಾಯಾಗ್ರಹಣ, ರಾಘವನ್ ಕಾರ್ತಿಕ್ ಅವರ ಸಂಗೀತ ಸಂಯೋಜನೆ ಇದೆ. ನವೆಂಬರ್ನಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.
ನಟ ವಸಿಷ್ಠ ಸಿಂಹ ಅವರು ‘Love… ಲಿ’ ಮತ್ತು ತೆಲುಗು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
Be the first to comment