ಜಗ್ಗೇಶ್ ಅವರ ಆಶೀರ್ವಾದದೊಂದಿಗೆ ಶುರುವಾದ ‘ನವರಸ ನಟನ ಅಕಾಡೆಮಿ’ ಇದೀಗ ಐದು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಕಳೆದ ಐದು ವರ್ಷಗಳಲ್ಲಿ ನೂರಕ್ಕೂ ಹೆಚ್ಚು ಬ್ಯಾಚ್ ವಿದ್ಯಾರ್ಥಿಗಳಿಗೆ ನಟನೆ, ನಿರ್ದೇಶನ, ಡಾನ್ಸಿಂಗ್, ಫೈಟಿಂಗ್, ಮೂಖಾಭಿನಯ, ಮೇಕಪ್, ಸಂಕಲನ ಮತ್ತು ಡಬ್ಬಿಂಗ್ ಸೇರಿದಂತೆ ಚಿತ್ರೀಕರಣದ ಅನುಭವ, ಪೋಸ್ಟ್ ಪ್ರೊಡಕ್ಷನ್ ಮೊದಲಾದ ಕುರಿತು ತರಗತಿ ನೀಡುತ್ತಾ ಬಂದಿದೆ.
ನವೆಂಬರ್ ೧೦ರಿಂದ ಹೊಸ ಬ್ಯಾಚ್ ಶುರುವಾಗುತ್ತಿದೆ. ಹಿರಿಯ ನಿರ್ದೇಶಕ ಶಿವಮಣಿ ಪ್ರಾಂಶುಪಾಲರಾಗಿರುವ ಈ ಸಂಸ್ಥೆ, ಈ ಬಾರಿ ಸಾಕಷ್ಟು ಮಾರ್ಪಾಡು ಮಾಡಿಕೊಂಡಿದ್ದು, ಹೊಸ ಬ್ಯಾಚ್‌ಗಳ ವಿದ್ಯಾರ್ಥಿಗಳಿಗೆ ಅವೆಲ್ಲವೂ ಲಭ್ಯವಾಗಲಿದೆ.
ನಾಲ್ಕು ಮತ್ತು ಆರು ತಿಂಗಳ ನಟನೆ, ನಿರ್ದೇಶನದ ಕೋರ್ಸ್ ಹಾಗೂ ವಾರಾಂತ್ಯದ ತರಗತಿಗಳು ಅಕಾಡೆಮಿಯಲ್ಲಿ ನಡೆಯಲಿದೆ.
ಕಳೆದ ಎರಡು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ನೃತ್ಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ‘ನವರಸ ನಟನ ಅಕಾಡೆಮಿ’ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಮಾಲೂರು ಶ್ರೀನಿವಾಸ್ ಸಹ ವಿದ್ಯಾರ್ಥಿಗಳಿಗೆ ನೃತ್ಯ ಹಾಗೂ ಇನ್ನಿತರೆ ಪಟ್ಟುಗಳನ್ನು ಕಲಿಸಿಕೊಡಲಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ‘ನವರಸ ನಟನ ಅಕಾಡೆಮಿ’ ಸಂಸ್ಥೆಯಲ್ಲಿ ತರಬೇತಿ ಪಡೆದ ಅನೇಕ ವಿದ್ಯಾರ್ಥಿಗಳು ಇಂದು ಸಾಕಷ್ಟು ಸಿನಿಮಾ, ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗೆಯೇ ಕೆಲವರು ಸ್ವತಂತ್ರ ನಿರ್ದೇಶಕರಾಗಿ, ಕಲಾವಿದರಾಗಿ ಗುರುತಿಸಿಕೊಳ್ಳುತ್ತಿರೋದು ಈ ಸಂಸ್ಥೆಯ ಹೆಚ್ಚುಗಾರಿಕೆ.
ಪ್ರಾಂಶುಪಾಲರಾದ ಶಿವಮಣಿ ಸೇರಿದಂತೆ ಕನ್ನಡದ ಹಲವಾರು ಖ್ಯಾತ ನಿರ್ದೇಶಕರು, ನಟರು, ತಂತ್ರಜ್ಞರಿಂದ ನಟನೆ, ನಿರ್ದೇಶನ, ಡೈಲಾಗ್ ಡೆಲಿವರಿ ಹಾಗೂ ಕ್ಯಾಮೆರಾ ಎದುರಿಸುವ ಪರಿ ಇತ್ಯಾದಿಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟು ಅವರಿಂದಲೇ ಕಿರುಚಿತ್ರವೊಂದನ್ನು ತಯಾರು ಮಾಡಿಸಿ ಅರ್ಹತಾ ಪತ್ರ ವಿತರಣೆ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಬೀಳ್ಕೊಡುತ್ತದೆ ನವರಸ ನಟನ ಅಕಾಡೆಮಿ.
ಐದು ವರ್ಷ ಯಶಸ್ವಿಯಾಗಿ ಮುಗಿಸಿರುವ ಖುಷಿಯಲ್ಲಿದ್ದಾರೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮಾಲೂರು ಶ್ರೀನಿವಾಸ್.
ಮಹಿಳೆಯರಿಗಾಗಿ ವಿಶೇಷ ರಿಯಾಯಿತಿ ಸೌಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ: ನವರಸ ನಟನ ಅಕಾಡೆಮಿ, ಮೊ. ಸಂಖ್ಯೆ; 98802 19666 / 98804 19666 ಸಂಪರ್ಕಿಸಬಹುದು.
Be the first to comment