Tara: ‘ಚಿಕ್ಕಿಯ ಮೂಗುತಿ’ ಶೀಘ್ರ ತೆರೆಗೆ

ಕಾದಂಬರಿ ಆಧಾರಿತ ‘ಚಿಕ್ಕಿಯ ಮೂಗುತಿ’ ಸಿನಿಮಾ ಶೀಘ್ರ ತೆರೆಗೆ ಬರಲಿದೆ.

ದೇವಿಕಾ ಜನಿತ್ರಿ ನಿರ್ದೇಶದ ಮೊದಲ ಸಿನಿಮಾ ಇದಾಗಿದೆ. ಚಿಕ್ಕಿಯ ಮೂಗುತಿ ಕಾದಂಬರಿ ಆಧಾರಿತ ಸಿನಿಮಾವಾಗಿದ್ದು  ದೇವಕಿ ಜನಿತ್ರಿ ಅವರೇ ಬರೆದಿದ್ದ ಕಾದಂಬರಿ ಈಗ ಚಿತ್ರವಾಗಿ ಮೂಡಿ ಬರುತ್ತಿದೆ. ದೇವಿಕಾ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

‘ಚಿಕ್ಕಿಯ ಮೂಗುತಿ’ ಹೆಸರೇ ಹೇಳುವ ಹಾಗೆ ಇದೊಂದು ಮಹಿಳಾ ಪ್ರಧಾನ ಸಿನಿಮಾ. ಹೆಣ್ಣು ಮಕ್ಕಳ ಹೋರಾಟ, ಶೋಷಣೆ ಬಗ್ಗೆ ಇರುವ ಚಿತ್ರ ಇದಾಗಿದೆ. ಹಿರಿಯ ನಟಿ ತಾರಾ ಅನುರಾಧಾ, ಶ್ವೇತಾ ಶ್ವೀವಾತ್ಸವ್, ಭವಾನಿ ಪ್ರಕಾಶ್, ಅವಿನಾಶ್, ತಬಲ ನಾಣಿ, ರಂಗಾಯಣ ರಘು, ಭರತ್ ಬೋಪಣ್ಣ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ.

ಸದ್ಯ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿಕ್ಕಿಯ ಮೂಗುತಿ ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆ ಇದೆ. 

ಟೀಸರ್ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ತಾರಾ, ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದಂತೆ ಈ ಸಿನಿಮಾದಲ್ಲೂ ಮಹಿಳೆಯರಿಗೂ ಮೀಸಲಾತಿ ಇದೆ. ಸಿನಿಮಾ ಉತ್ತಮವಾಗಿ ಮೂಡಿಬಂದಿದೆ’ ಎಂದು ಹೇಳಿದರು. 

ಚಿತ್ರಕ್ಕೆ ಪೂರ್ಣ ಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಮಾಡಿದ್ದು ವೆಂಕಟೇಶ್ ಆರ್ ಕ್ಯಾಮೆರಾ ವರ್ಕ್ ಜೊತೆಗೆ ಎಡಿಟಿಂಗ್ ಕೂಡ ಮಾಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!