Pentagon: ಪೆಂಟಗನ್’ ಹಿಂದಿಯಲ್ಲಿ ರಿಲೀಸ್

ಬಿಗ್ ಬಾಸ್ ಮನೆಯ ಕೇಂದ್ರಬಿಂದು ಆಗಿರುವ ನಟಿ ತನಿಷಾ ಕುಪ್ಪಂಡ ಮತ್ತು ಇತರರು ನಟನೆಯ ‘ಪೆಂಟಗನ್’ ಸಿನಿಮಾ ಹಿಂದಿಯಲ್ಲಿ ಬಿಡುಗಡೆ ಆಗಿದೆ.

‘ಪೆಂಟಗನ್’ ಈಗ ಹಿಂದಿ ಭಾಷೆಯಲ್ಲಿ ‘ಪೆಂಟಗನ್- ಪಾಂಚ್ ಕಾ ಧಮ್’ ಎಂದು dollywood play ನಲ್ಲಿ ಪ್ರಸಾರವಾಗುತ್ತಿದೆ.

ಗುರು ದೇಶಪಾಂಡೆ  ನಿರ್ಮಾಣದಲ್ಲಿ ಈ ಸಿನಿಮಾ ಮೂಡಿ ಬಂದಿದೆ. ರಾಘು ಶಿವಮೊಗ್ಗ, ಆಕಾಶ್ ಶ್ರೀವತ್ಸ, ಚಂದ್ರ ಮೋಹನ್, ಕಿರಣ್ ಕುಮಾರ್ ಮತ್ತು ಗುರು ದೇಶಪಾಂಡೆ ತಲಾ ಒಂದೊಂದು ಕಥೆಯನ್ನು ನಿರ್ದೇಶನ ಮಾಡಿದ್ದಾರೆ. ಕಿಶೋರ್, ಪ್ರಕಾಶ್ ಬೆಳವಾಡಿ, ರವಿಶಂಕರ್ ಸೇರಿದಂತೆ ಹೆಸರಾಂತ ತಾರಾ ಬಳಗ ಸಿನಿಮಾದಲ್ಲಿದೆ.

ತನಿಷಾ ಪೆಂಟಗನ್ ಸಿನಿಮಾದ ಒಂದು ಕಥೆಯಲ್ಲಿ ಬೋಲ್ಡ್ ಆಗಿ ನಟಿಸಿದ್ದರು. ಸಿನಿಮಾ ರಿಲೀಸ್ ವೇಳೆ ಯುಟ್ಯೂಬರ್ ಒಬ್ಬನ ಮೇಲೆ ಆರೋಪ ಮಾಡಿದ್ದ ತನಿಷಾ, ನಂತರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ  ನಟನೊಬ್ಬನ ಮೇಲೆ ಗುರುತರ ಆರೋಪ ಮಾಡಿದ್ದರು.

ರಾಜಾಹುಲಿ  ಹಿಟ್ ಸಿನಿಮಾದಲ್ಲಿ ಯಶ್ ಗೆಳೆಯನ ಪಾತ್ರ ಮಾಡಿದ್ದ ನಟನೊಬ್ಬ ತನಿಷಾಗೆ ಬ್ಲೂಫಿಲ್ಮ್ ಮಾಡ್ತೀಯಾ ಎಂದು ಸೋಷಿಯಲ್ ಮೀಡಿಯಾ ಮೂಲಕ ಪ್ರಶ್ನೆ ಮಾಡಿದ್ದರಂತೆ. ಆ ನಟನ ಬಗ್ಗೆ ತನಿಷಾ ಪತ್ರಿಕಾಗೋಷ್ಠಿಯಲ್ಲೇ ಕಣ್ಣೀರಿಟ್ಟಿದ್ದರು.

ಪೆಂಟಗನ್ ಸಿನಿಮಾದ ಒಂದು ಕಥೆಯಲ್ಲಿ ತನಿಷಾ ಬೋಲ್ಡ್ ಆಗಿರುವ ಪಾತ್ರವನ್ನು ನಿರ್ವಹಿಸಿದ್ದಾರೆ. ಅದು ಡೇಟಿಂಗ್ ಆಪ್ ಕುರಿತಾದ ಕಥೆಯಾಗಿದ್ದರಿಂದ, ಪಾತ್ರವೇ ಡಿಮಾಂಡ್ ಮಾಡಿದ್ದರಿಂದ ಅಂಥದ್ದೊಂದು ಪಾತ್ರವನ್ನು ನಿರ್ವಹಿಸಿದ್ದೇನೆ ಎಂದಿದ್ದರು.

ಪೆಂಟಗನ್ ಸಿನಿಮಾದಲ್ಲಿ ಒಟ್ಟು ಐದು ಕಥೆಗಳಿವೆ. ಕನ್ನಡದ ಪ್ರೇಮ, ಸಾಮಾಜಿಕ ಸಂದೇಶ ಹಾಗೂ ಮನರಂಜನೆ ನೀಡುವ ಎಲ್ಲ ಅಂಶಗಳು ಇದ್ದರೂ, ಕೇವಲ ಒಂದೇ ಒಂದು ಕಥೆಯ ಬಗ್ಗೆ ಈ ರೀತಿ ಮಾತನಾಡುವುದು ಸರಿ ಅಲ್ಲ ಎನ್ನುವುದು ತನಿಷಾ ಮಾತಾಗಿತ್ತು. ಐದು ಪ್ರತಿಭಾವಂತ ನಿರ್ದೇಶಕರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಅವರು ನನ್ನಿಂದ ಕೆಟ್ಟ ರೀತಿಯಲ್ಲಿ ಪಾತ್ರ ಮಾಡಲು ಸಾಧ್ಯವಾ ಎನ್ನುವುದು ಅವರ ಪ್ರಶ್ನೆಯಾಗಿತ್ತು.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!