ವಿನಯ್ ರಾಜ್ಕುಮಾರ್ ನಟನೆಯ ಗ್ರಾಮಾಯಣ ಚಿತ್ರದಲ್ಲಿ ಲೂಸ್ ಮಾದ ಯೋಗಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.
ಈಗಾಗಲೇ ನಾಯಕಿಯಾಗಿ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಆಯ್ಕೆಯಾಗಿದ್ದಾರೆ. ದೇವನೂರು ಚಂದ್ರು ಅವರ ಚೊಚ್ಚಲ ನಿರ್ದೇಶನದ ಗ್ರಾಮಾಯಣ ಸಿನಿಮಾ ಅಕ್ಟೋಬರ್ 6 ರಂದು ದೇವನೂರಿನಲ್ಲಿ ಚಿತ್ರೀಕರಣ ಪ್ರಾರಂಭಿಸಲಿದೆ.
ಯೋಗಿ ಅವರನ್ನು ಖಳನಾಯಕ ಅಥವಾ ಪೋಷಕ ಪಾತ್ರದಲ್ಲಿ ನಿರ್ದಿಷ್ಟ ಪಾತ್ರಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಅವರು ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಯೋಗಿ ಅವರು ಗ್ರಾಮಾಯಣದ ಸಂಪೂರ್ಣ ಸ್ಕ್ರಿಪ್ಟ್ ನ್ನು ತಿಳಿದಿದ್ದಾರೆ. ಅವರ ಪಾತ್ರದ ಬಗ್ಗೆ ಅವರಿಗೆ ಮೆಚ್ಚುಗೆ ಇದೆ ಎಂದು ದೇವನೂರು ಚಂದ್ರು ಹೇಳಿದ್ದಾರೆ.
ಗ್ರಾಮೀಣ ಭಾಗದ ಹಿನ್ನೆಲೆಯಲ್ಲಿ ನಡೆಯುವ ಕಥೆಯಲ್ಲಿ ವಿನಯ್ ಹಳ್ಳಿ ಯುವಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಖ್ಯಾತ ನಟರಾದ ಅಪರ್ಣಾ ಮತ್ತು ಗೋಪಾಲಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರಕ್ಕೆ ಲಹರಿ ಫಿಲಂಸ್ನ ಜಿ ಮನೋಹರನ್ ಮತ್ತು ವೀನಸ್ ಎಂಟರ್ಟೈನರ್ಸ್ ನ ಕೆಪಿ ಶ್ರೀಕಾಂತ್ ಬೆಂಬಲ ನೀಡಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆಯನ್ನು ನಿರ್ವಹಿಸುತ್ತಿದ್ದಾರೆ.
ಯಶ್ವಿನಿ ಅಂಚನ್ ಛಾಯಾಗ್ರಹಣ, ಶಿವಕುಮಾರ್ ಕಲಾ ನಿರ್ದೇಶನ ಮಾಡಲಿದ್ದಾರೆ.
____


Be the first to comment