ನ.10ಕ್ಕೆ ʻನಾ ಕೋಳಿಕ್ಕೆ ರಂಗʼ ರಿಲೀಸ್

ಮಾಸ್ಟರ್ ಆನಂದ್ ನಟನೆಯ ʻನಾ ಕೋಳಿಕ್ಕೆ ರಂಗʼ ನ. 10ಕ್ಕೆ ರಿಲೀಸ್ ಆಗಲಿದೆ.

ಸಿನಿಮಾದ ಶೀರ್ಷಿಕೆ ಹೇಳುವಂತೆ ಇದು ಕೋಳಿ ಹಾಗೂ ರಂಗನ ಕಥೆ ಆಗಿದೆ. ಈ ಚಿತ್ರ ಈಗ ತೆರೆಗೆ ಬರಲು ಸಜ್ಜಾಗಿದೆ.

ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಮಾಸ್ಟರ್ ಆನಂದ್, “ಕೊರೊನಾಗಿಂತ ಮೊದಲು ಚಿತ್ರ ಶುರುವಾಗಿತ್ತು. ಆ ನಂತರ ಸಮಸ್ಯೆ ಎದುರಾಯ್ತು. ಈಗ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದೆ. ‘ಮರೆಯೋದುಂಟೆ ಮೈಸೂರ ದೊರೆಯ’ ಎಂಬ ಹಾಡು ಈ ಚಿತ್ರದ ಹೈಲೆಟ್. ಮೈಸೂರು ದಸರಾ ಮತ್ತು‌ ಮಹಾರಾಜರ ಕುರಿತಾದ ಹಾಡು ಇದಾಗಿದೆ. ದಸರಾ ವೇಳೆ ರಿಲೀಸ್ ಮಾಡಲು ನಿರ್ಧರಿಸಿದ್ದೇವೆ” ಎಂದು ತಿಳಿಸಿದ್ದಾರೆ.

ಮಂಡ್ಯದಲ್ಲಿ ಶೇ. 90ರಷ್ಟು ಚಿತ್ರೀಕರಣ ಮಾಡಿದ್ದೇವೆ. ಸಂತೆ ಕಸಲಗೆರೆ ಎಂಬ ಊರಲ್ಲಿ ಶೂಟಿಂಗ್ ಆಗಿದ್ದು ವಿಶೇಷ. ಚಿತ್ರದಲ್ಲಿ ಮಂಡ್ಯ, ಮೈಸೂರಿನ ಭಾಷಾ ಸೊಗಡಿದೆ. ಭವ್ಯಾ ತಾಯಿ ಪಾತ್ರ ಮಾಡಿದ್ದಾರೆ. ಇದೊಂದು ರೀತಿ ಟ್ರಯಂಗಲ್ ಸ್ಟೋರಿ. ಆದರೆ ಲವ್ ಸ್ಟೋರಿ ಅಲ್ಲ. ಕೋಳಿ ರಂಗ ಮತ್ತು ಅಮ್ಮನ ವಾತ್ಸಲ್ಯದ ಕಥೆ ಎಂದಿದ್ದಾರೆ.

ರಾಜೇಶ್ವರಿ ನಾಯಕಿಯಾಗಿ ನಟಿಸಿದ್ದಾರೆ. ಕಾಮಿಡಿ ಕಿಲಾಡಿ ತಂಡ ನಟಿಸಿದೆ. ಸೋಮಶೇಖರ್ ನಿರ್ಮಾಣ, ರಾಜು ಎಮ್ಮಿಗನೂರು ಸಂಗೀತ, ಗೊರವಾಲೆ ಮಹೇಶ್ ನಿರ್ದೇಶಿಸಿದ್ದಾರೆ.

ಚಿತ್ರಕ್ಕೆ ಧನಪಾಲ್ ಮತ್ತು ಬೆಟ್ಟೇಗೌಡ ಅವರ ಛಾಯಾಗ್ರಹಣ ಇದೆ. ಚಿತ್ರದಲ್ಲಿ ಶೋಭರಾಜ್, ಹೊನ್ನವಳ್ಳಿ ಕೃಷ್ಣ, ಪುಂಗ, ಶಕೀಲಾ ಇತರರು ನಟಿಸಿದ್ದಾರೆ.
_____

Be the first to comment

Leave a Reply

Your email address will not be published. Required fields are marked *

Translate »
error: Content is protected !!