‘Love’ Movie Review : ಹಿಂದೂ ಮುಸ್ಲಿಂ ಸಂಘರ್ಷದ ‘ ಲವ್ ‘ ಸ್ಟೋರಿ

ಚಿತ್ರ: ಲವ್

ನಿರ್ದೇಶನ: ಮಹೇಶ ಸಿ ಅಮ್ಮಳ್ಳಿ ದೊಡ್ಡಿ
ನಿರ್ಮಾಣ: ದಿವಾಕರ್ ಎಸ್
ತಾರಾಗಣ: ಪ್ರಜಯ್ ಜಯರಾಮ್, ವೃಷ ಪಾಟೀಲ್, ಪ್ರಭಾಕರ್ ಕುಂದರ್ ಇತರರು
ರೇಟಿಂಗ್: 3.5/5

ಹಿಂದೂ ಯುವಕ ಹಾಗೂ ಮುಸ್ಲಿಂ ಯುವತಿಯ ಲವ್, ಸಂಘರ್ಷದ ಕಥೆಯಾಗಿ ಲವ್ ತೆರೆಯ ಮೇಲೆ ಮೂಡಿ ಬಂದಿದೆ.

ಬೆಂಗಳೂರಿನಲ್ಲಿ ಉದ್ಯೋಗ ಮಾಡಿಕೊಂಡಿರುವ ನಾಯಕನಿಗೆ ಮುಸ್ಲಿಂ ಯುವತಿ ಸಹಾಯ ಮಾಡುತ್ತಾಳೆ. ಒಂದೇ ಇವರಿಬ್ಬರೂ ಮದುವೆಯಾಗಲು ನಿರ್ಧರಿಸಿದಾಗ ಎರಡು ಕುಟುಂಬಗಳ ನಡುವೆ ಸಂಘರ್ಷ ಆರಂಭವಾಗುತ್ತದೆ. ಪೊಲೀಸರ ಸಲಹೆಯಂತೆ ಇಬ್ಬರು ಪ್ರೇಮಿಗಳು ದೂರ ಉಳಿಯಲು ನಿರ್ಧರಿಸುತ್ತಾರೆ. ಮುಂದೆ ನಾನು ಕಾರಣಗಳಿಂದ ನಾಯಕಿ ನಾಪತ್ತೆಯಾಗುತ್ತಾಳೆ. ಯುವಕನ ಮೇಲೆ ಕೆಂಗಣ್ಣು ಬೀರಿದ್ದ ನಾಯಕಿಯ ತಂದೆ ನಾಯಕನನ್ನು ಕೊಲೆ ಮಾಡುತ್ತಾನಾ? ನಾಯಕಿ ಯಾಕೆ ನಾಪತ್ತೆ ಆಗುತ್ತಾಳೆ ? ಈ ಎಲ್ಲ ಪ್ರಶ್ನೆಗಳಿಗೆ ಸಿನಿಮಾ ನೋಡಬೇಕಿದೆ.

ನಿರ್ದೇಶಕರು ಜಾತಿ, ಧರ್ಮದ ತಾರತಮ್ಯದ ಜೊತೆಗೆ ಪ್ರೀತಿಗಿರುವ ಶಕ್ತಿ, ಬದುಕಿಗೆ ಯಾವುದು ಮುಖ್ಯ ಎನ್ನುವುದನ್ನು ತೆರೆಯ ಮೇಲೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಸಂಬಂಧಗಳ ಬಗ್ಗೆಯೂ ಹೇಳುವ ಹೆತ್ತವನ್ನು ಮಾಡಿದ್ದಾರೆ. ಒಳ್ಳೆಯ ಕಥೆಯನ್ನು ತೆರೆಯ ಮೇಲೆ ತರುವಲ್ಲಿ ಶ್ರಮವಹಿಸಿದ್ದಾರೆ.

ನಾಯಕನಾಗಿ ನಟಿಸಿರುವ ಪ್ರಜಯ್ ಜಯರಾಮ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮುಸ್ಲಿಂ ಯುವತಿಯಾಗಿ ಕಾಣಿಸಿಕೊಂಡಿರುವ ವೃಷ ಪಾಟೀಲ್ ತಮ್ಮ ನಟನೆಯ ಮೂಲಕ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಿನಿಮಾದಲ್ಲಿ ಉಳಿದ ಕಲಾವಿದರು ಕೂಡ ಚಿತ್ರದ ಓಟಕ್ಕೆ ಪೂರಕವಾಗಿ ನಟಿಸಿದ್ದಾರೆ.

ಚಿತ್ರದ ಛಾಯಾಗ್ರಹಣ ಸುಂದರವಾಗಿ ಮೂಡಿಬಂದಿದೆ. ಚಿತ್ರದ ಕಥೆಗೆ ಪೂರಕವಾಗಿ ಸಂಗೀತ ಗಮನ ಸೆಳೆಯುತ್ತದೆ.

ಸಂಘರ್ಷಮಯ ಲವ್ ಕಹಾನಿಯನ್ನು ತೆರೆಯ ಮೇಲೆ ನೋಡಿ ಆನಂದಿಸಲು ಈ ಚಿತ್ರವನ್ನು ಪ್ರೇಕ್ಷಕರು ಆಯ್ಕೆ ಮಾಡಿಕೊಳ್ಳಬಹುದು.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!