Darshan: ಫೈಟರ್ ಗೆ ದರ್ಶನ್ ಬೆಂಬಲ

ವಿನೋದ್ ಪ್ರಭಾಕರ್ ನಟನೆಯ ‘ಫೈಟರ್’ ಸಿನಿಮಾ ಈ ಶುಕ್ರವಾರ ಬಿಡುಗಡೆ ಆಗುತ್ತಿದ್ದು, ಸಿನಿಮಾಕ್ಕೆ ನಟ ದರ್ಶನ್ ಬೆಂಬಲ ಸೂಚಿಸಿದ್ದಾರೆ.

ದರ್ಶನ್ ಅವರು ಟೈಗರ್ ಪ್ರಭಾಕರ್ ಅವರಿಗೆ ಬೆಂಬಲಿಸಿದಂತೆಯೇ ವಿನೋದ್ ಪ್ರಭಾಕರ್ ಅವರಿಗೂ ಬೆಂಬಲ ನೀಡಿ ಎಂದಿದ್ದಾರೆ.

ಸಿನಿಮಾಕ್ಕಾಗಿ ಬಿಡುವಿಲ್ಲದ ಪ್ರಚಾರದಲ್ಲಿ ವಿನೋದ್ ನಿರತರಾಗಿದ್ದಾರೆ. ವಿನೋದ್ ಪ್ರಭಾಕರ್ ಅವರ ಆಪ್ತ ಗೆಳೆಯ ನಟ ದರ್ಶನ್, ‘ಪೈಟರ್’ಗೆ ಬೆಂಬಲಿಸಿದ್ದು, ‘ಹೇಗೆ ಟೈಗರ್ ಪ್ರಭಾಕರ್ ಅವರನ್ನು ಫೈಟರ್​ ಇಂದ ಒಬ್ಬ ಸ್ಟಾರ್ ನಟನನ್ನಾಗಿ ಮಾಡಿದಿರೋ ಹಾಗೆಯೇ ನಮ್ಮ ಮರಿ ಟೈಗರ್​ಗೂ ಬೆಂಬಲಿಸಿ. ಇದೇ ಅಕ್ಟೋಬರ್ 6ರಂದು ತೆರೆಗೆ ಬರುತ್ತಿರುವ ‘ಫೈಟರ್’ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಿ. ಸಿನಿಮಾವನ್ನು ಹರಸಿ, ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ” ಎಂದಿದ್ದಾರೆ.

ವಿನೋದ್ ಪ್ರಭಾಕರ್ ಅವರು ದರ್ಶನ್ ಅವರ ಜೊತೆಗೆ ರಾಬರ್ಟ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಡೆಸಿದ್ದಾರೆ.

ಸಾಮಾಜಿಕ ಒಳಿತಿಗಾಗಿ ನಾಯಕ ಸಮಾಜದ ಸಮಸ್ಯೆಗಳ ವಿರುದ್ಧ ಯಾವ ರೀತಿ ಹೋರಾಡುತ್ತಾನೆ ಎನ್ನುವುದು ಫೈಟರ್ ಚಿತ್ರದ ಕಥೆ ಆಗಿದೆ. ಇದು ಟ್ರೈಲರ್ ನಲ್ಲೂ ಕಂಡು ಬಂದಿದೆ.

ಫೈಟರ್ ಚಿತ್ರದಲ್ಲಿ ಒಟ್ಟು ಐದು ಆಕ್ಷನ್ ದೃಶ್ಯಗಳಿವೆ. ಸಾಹಸ ದೃಶ್ಯ ಪ್ರಧಾನ ಆಗಿರುವ ಈ ಚಿತ್ರಕ್ಕೆ ಥ್ರಿಲ್ಲರ್ ಮಂಜು ಅವರು ಸಾಹಸ ದೃಶ್ಯ ಕಂಪೋಸ್ ಮಾಡಿದ್ದಾರೆ.

ಚಿತ್ರವನ್ನು ಚಿತ್ರದುರ್ಗ, ಪಾಂಡಿಚೇರಿ, ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ 65 ದಿನಗಳ ಕಾಲ ಚಿತ್ರಿಕರಣ ಮಾಡಲಾಗಿದೆ. ವಿನೋದ್ ಪ್ರಭಾಕರ್ ಅವರಿಗೆ ನಾಯಕಿಯಾಗಿ ಲೇಖಚಂದ್ರ ಹಾಗೂ ಪಾವನ ಗೌಡ ಅವರು ಕಾಣಿಸಿಕೊಂಡಿದ್ದಾರೆ. ನಾಯಕನ ತಾಯಿಯ ಪಾತ್ರದಲ್ಲಿ ಹಿರಿಯ ನಟಿ ನಿರೋಷ ಅವರು ನಟಿಸಿದ್ದಾರೆ.

ಗಿರಿಜಾ ಲೋಕೇಶ್, ಜಹಾಂಗೀರ್, ಚಲುವರಾಜ್, ಕುರಿ ಪ್ರತಾಪ್ ಸೇರಿದಂತೆ ಪ್ರಮುಖ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.

ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ಗುರುಕಿರಣ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಶೇಖರ್ ಚಂದ್ರು ಅವರು ಕ್ಯಾಮರಾ ಕೆಲಸ ಮಾಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!