ವಿನೋದ್ ಪ್ರಭಾಕರ್ ನಾಯಕ ನಟನೆಯ ಫೈಟರ್ ಚಿತ್ರ ಈ ವಾರ ಬಿಡುಗಡೆ ಆಗುತ್ತಿದ್ದು, ಚಿತ್ರತಂಡ ಅಬ್ಬರದ ಪ್ರಚಾರ ನಡೆಸಿದೆ.
ಬೆಂಗಳೂರಿನ ಮಂತ್ರಿ ಮಹಲ್ ನಲ್ಲಿ ನಡೆದ ಫೈಟರ್ ಉತ್ಸವದಲ್ಲಿ ಅಭಿಮಾನಿಗಳ ದಂಡು ಒಂದೆಡೆ ಸೇರಿತ್ತು. ಅಭಿಮಾನಿ ದಂಡು ಕೇಕೆ ಸಿಳ್ಳೆಗಳಿಂದ ಚಿತ್ರತಂಡವನ್ನು ಪ್ರೇರೇಪಿಸಿತು.
ಸ್ಯಾಂಡಲ್ ವುಡ್ ನ ಫೈಟರ್ ಗಳಾದ ನಟ ದುನಿಯಾ ವಿಜಯ್, ಶ್ರೀನಗರ ಕಿಟ್ಟಿ ಹಾಗೂ ಇನ್ನಿತರ ಸ್ಟಾರ್ ಗಳು ಅಭಿಮಾನಿಗಳ ಮುಂದೆ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಸಂಗೀತ ನಿರ್ದೇಶಕ ಗುರು ಕಿರಣ್, ನಟಿಯರಾದ ಪಾವನಾ ಗೌಡ, ಲೇಖಾ ಚಂದ್ರ, ವಿನೋದ್ ಪ್ರಭಾಕರ್, ನಿರ್ದೇಶಕ ನೂತನ್ ಉಮೇಶ್, ನಿರ್ಮಾಪಕ ಸೋಮಶೇಖರ್ ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.
ಒಬ್ಬ ಫೈಟರ್, ಸಾಹಸ ದೃಶ್ಯಗಳಲ್ಲಿ ಪಾಲ್ಗೊಳ್ಳುವ ನಟನ ಬದುಕು ಯಾವಾಗಲೂ ಸವಾಲಿನದೇ ಆಗಿರುತ್ತದೆ. ಅದಕ್ಕಾಗಿ ನಟ ದೊಡ್ಡ ತ್ಯಾಗವನ್ನೇ ಮಾಡಬೇಕಾಗಿರುತ್ತದೆ ಎಂದು ದುನಿಯಾ ವಿಜಯ್ ಈ ವೇಳೆ ಹೇಳಿದರು.
ದೇಹವನ್ನು ಹುರಿಗೊಳಿಸುವುದು. ಸಿನಿಮಾಗಾಗಿ ಪ್ಯಾಕ್ಸ್ ಮಾಡುವುದು ಸುಲಭವಲ್ಲ. ಅದು ನಿತ್ಯದ ಕಷ್ಟ. ನಟರಾದ ನಾವು ಅದನ್ನು ಅನುಭವಿಸುತ್ತೇವೆ. ಆದರೆ ಯಾರ ಜೊತೆಯೂ ಹೇಳಿಕೊಳ್ಳುವುದಿಲ್ಲ ಎಂದರು.
ವಿನೋದ್ ಪ್ರಭಾಕರ್ ಈ ವೇಳೆ ತಂದೆ ಪ್ರಭಾಕರ್ ಅವರ ಧ್ವನಿ ಮತ್ತು ಭಾವಭಂಗಿಯನ್ನು ಪ್ರದರ್ಶಿಸುವುದರ ಮೂಲಕ ಅಭಿಮಾನಿಗಳ ಗಮನ ಸೆಳೆದರು.
ಚಿತ್ರ ಈ ವಾರ ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಹೊಂದಲಾಗಿದೆ.
____ 

Be the first to comment