Yash: ರಾವಣ ಪಾತ್ರದಲ್ಲಿ ಯಶ್?!

ರಾಕಿಂಗ್ ಸ್ಟಾರ್ ಯಶ್ ಅವರು ಬಾಲಿವುಡ್ ಸಿನಿಮಾದಲ್ಲಿ ರಾವಣನ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ.

ಈ ಹಿಂದೆ ಯಶ್ ರಾವಣನ ಪಾತ್ರ ರಿಜೆಕ್ಟ್ ಮಾಡಿದ್ದಾರೆ ಎಂಬ ಸುದ್ದಿಯಿತ್ತು. ಈ ಬಗ್ಗೆ ಅವರನ್ನು ಕೇಳಿದ್ದಾಗ ಬಾಲಿವುಡ್ ನ್ನೇ ಇಲ್ಲಿಗೆ ಕರೆಸಿಕೊಳ್ತೀವಿ ಎಂದಿದ್ದರು. ಈಗ ಯಶ್ ರಾವಣನ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಯಶ್ ಅವರು ರಾವಣನ ಪಾತ್ರ ಮಾಡಲು 20 ದಿನಗಳ ಕಾಲ್ ಶೀಟ್ ನೀಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಬಂದಿಲ್ಲ.

ಕೆಜಿಎಫ್ 2 ಸೂಪರ್ ಹಿಟ್ ಆದ ಬಳಿಕ ಯಶ್ ಯಾವುದೇ ಚಿತ್ರಗಳಲ್ಲಿ ನಟಿಸಿಲ್ಲ. ಯಶ್ ಅವರ ಮುಂದಿನ ಸಿನಿಮಾದ ಅಪ್ ಡೇಟ್ ಗಾಗಿ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.

ಕೆಜಿಎಫ್ 2 ಚಿತ್ರ ಸೂಪರ್ ಹಿಟ್ ಆದ ಬಳಿಕ ಯಶ್ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಕೆಜಿಎಫ್ 2 ಚಿತ್ರದಲ್ಲಿ ರವೀನಾ ಟಂಡನ್, ಸಂಜಯ್ ದತ್ ಸೇರಿದಂತೆ ಅನೇಕ ಖ್ಯಾತ ನಟರು ನಟಿಸಿದ್ದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!