Vijay: ಸಿನಿಮಾ ಫೀಲ್ಡ್‌ನಿಂದ ನಾಶ ಮಾಡಲು ಯತ್ನಿಸಿದರು ಎಂದ ನಟ

ಸಿನಿಮಾ ಫೀಲ್ಡ್‌ ನಿಂದಲೇ ನನ್ನನ್ನು ನಾಶ ಮಾಡಲು ಯತ್ನಿಸಿದರು ಎಂದು ನಾಯಕ ನಟ ದುನಿಯಾ ವಿಜಿ ಬೇಸರ ವ್ಯಕ್ತಪಡಿಸಿದ್ದಾರೆ.

ಟೈಗರ್ ಪ್ರಭಾಕರ್ ಪುತ್ರ ವಿನೋದ್ ಪ್ರಭಾಕರ್ ನಟನೆಯ ಸಿನಿಮಾ ಫೈಟರ್ ಕಾರ್ಯಕ್ರಮಕ್ಕೆ ವಿಜಯ್ ಅತಿಥಿಯಾಗಿ ಆಗಮಿಸಿದ್ದರು. ಸಿನಿಮಾದ ಕಾರ್ಯಕ್ರಮದಲ್ಲಿ ಆತಂಕದ ಸಂಗತಿಯೊಂದನ್ನು ಹಂಚಿಕೊಂಡ ಅವರು ತಮ್ಮನ್ನು ಅವಮಾನಿಸುವ ಜೊತೆಗೆ ನಾಶ ಮಾಡುವುದಕ್ಕೆ ಪ್ರಯತ್ನಿಸಿದರು ಎಂದು ಹೇಳಿಕೊಂಡಿದ್ದಾರೆ.

ಸಿನಿಮಾಕ್ಕೆ ಪ್ರವೇಶ ಮಾಡಿದಾಗ ನಾನು ಫೈಟರ್. ಆ ಕಾರಣಕ್ಕಾಗಿ ಅವಮಾನಕ್ಕೆ ಒಳಗಾದೆ. ಫೈಟರ್ ಆಗಿ ಅದೇನ್ ಮಾಡ್ತಾನೋ ನೋಡೋಣ ಅಂದರು. ಬಳಿಕ ಫೈಟರ್ ಒಬ್ಬ ನಟನಾದ ಎಂದು ನೋವು ಕೊಟ್ಟರು. ನಟನಾಗಿ ಬೆಳೆದಾಗ ನನ್ನನ್ನು ನಾಶ ಮಾಡಲು ಪ್ರಯತ್ನ ಪಟ್ಟರು. ಕೆಲವರು ಕೈ ಹಿಡಿದು ಬೆಳೆಸಿದರು ಎಂದು ವಿಜಯ್ ಭಾವುಕರಾಗಿ ಮಾತನಾಡಿದ್ದಾರೆ.

ಟೈಗರ್ ಪ್ರಭಾಕರ್ ಅವರನ್ನು, ಅವರ ಸಾಹಸ ದೃಶ್ಯಗಳನ್ನು ಇಷ್ಟ ಪಡುತ್ತಿದ್ದ ವಿಜಯ್, ಈ ಸಂದರ್ಭದಲ್ಲಿ ಪ್ರಭಾಕರ್ ಅವರನ್ನು ನೆನಪಿಸಿಕೊಂಡರು. ಪ್ರಭಾಕರ್ ಅವರು ಎದುರಿಗೆ ಬಂದರೆ ಹುಲಿ ಬಂದ ಹಾಗೆ ಇರುತ್ತಿತ್ತು ಎಂದರು.

ದುನಿಯಾ ವಿಜಯ್ ಸದ್ಯ ಭೀಮ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರದ ಮೇಕಿಂಗ್ ಕೆಲಸ ಭರದಿಂದ ನಡೆಯುತ್ತಿದೆ

Be the first to comment

Leave a Reply

Your email address will not be published. Required fields are marked *

Translate »
error: Content is protected !!