ಖ್ಯಾತ ಕ್ರಿಕೆಟಿಗ ಮುತ್ತಯ್ಯ ಮುರುಳೀಧರನ್ ಅವರ ಜೀವನಕಥೆ ಆಧಾರಿತ ‘800’ ಸಿನಿಮಾ ಅ.6ರಂದು ತೆರೆಗೆ ಬರಲಿದೆ.
ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿದೆ. ತಮಿಳು, ಹಿಂದಿ, ತೆಲುಗು ಭಾಷೆಗಳಲ್ಲಿ ಚಿತ್ರ ತೆರೆಗೆ ಬರುತ್ತಿದೆ.
ಎಂ.ಎಸ್.ಶ್ರೀಪತಿ ಕಥೆ ಬರೆದು ನಿರ್ದೇಶಿಸಿರುವ ಚಿತ್ರವನ್ನು ಶ್ರೀದೇವಿ ಮೂವೀಸ್ ನಿರ್ಮಾಣ ಮಾಡಿದೆ. ಬಾಲಿವುಡ್ ನಟ ಮಧುರ್ ಮಿತ್ತಲ್ ಅವರು ಮುರುಳೀಧರನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
‘ತಮಿಳಿನ ನಿರ್ದೇಶಕ ವೆಂಕಟ್ ಪ್ರಭು ನನ್ನ ಪತ್ನಿಗೆ ಪರಿಚಯ. ಅವರು ನನ್ನ ಜೀವನಚರಿತ್ರೆಯನ್ನು ಸಿನಿಮಾ ಮಾಡುವ ಪ್ರಸ್ತಾಪ ಮುಂದಿಟ್ಟರು. ನಾನು ಮೊದಲಿಗೆ ಒಪ್ಪಿಕೊಳ್ಳಲಿಲ್ಲ. ಇದರಿಂದ ನಾನು ಶ್ರೀಲಂಕಾದಲ್ಲಿ ನಡೆಸುತ್ತಿರುವ ಟ್ರಸ್ಟ್‌ಗೆ ಸಹಾಯವಾಗಬಹುದೆಂದು ಜೊತೆಗಿದ್ದವರು ನನ್ನನ್ನು ಒಪ್ಪಿಸಿದರು. ವಿಜಯ್ ಸೇತುಪತಿ ಈ ಚಿತ್ರ ಮಾಡಬೇಕಿತ್ತು. ಆದರೆ ಮುಂದೆ ನಿರ್ದೇಶಕರು ಬದಲಾದರು. ಜೊತೆಗೆ ನಿರ್ಮಾಣ ಸಂಸ್ಥೆ ಬದಲಾಯಿತು. ಮುಂದೆ ಚಿತ್ರೀಕರಣದ ವೇಳೆ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಪ್ರಾರಂಭವಾಯಿತು. ಆದರೆ ಎಲ್ಲ ಅಡೆತಡೆಗಳನ್ನು ದಾಟಿ ಅಂತಿಮವಾಗಿ ಚಿತ್ರ ತೆರೆಗೆ ಬರುತ್ತಿರುವುದು ಸಂತೋಷದ ವಿಷಯವಾಗಿದೆ’ ಎಂದರು ಮುರುಳೀಧರನ್ ಹೇಳಿದ್ದಾರೆ.
‘ಮುರುಳೀಧರನ್ ಅವರು ನಗುಮುಖದ ಗೆಳೆಯ. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 800 ವಿಕೆಟ್ ಪಡೆದು ಸಾಧನೆಗೈದಿದ್ದಾರೆ. ಅವರು ಕ್ರಿಕೆಟ್‌ನ ಆಚೆಗೆ ಅತ್ಯುತ್ತಮ ವ್ಯಕ್ತಿ ಕೂಡ ಆಗಿದ್ದಾರೆ. ಅವರ ಜೀವನ ಆಧಾರಿತ ಸಿನಿಮಾ ಯಶಸ್ವಿಯಾಗಲಿ’ ಎಂದು ಸಮಕಾಲೀನ ಕ್ರಿಕೆಟಿಗ ಅನಿಲ್ ಕುಂಬ್ಳೆ ಶುಭ ಹಾರೈಸಿದ್ದಾರೆ.
___
Be the first to comment