Fighter: ಫೈಟರ್ ಟ್ರೈಲರ್ ರಿಲೀಸ್

ವಿನೋದ್ ಪ್ರಭಾಕರ್ ನಾಯಕ ನಟನಾಗಿ ನಟಿಸಿರುವ ಫೈಟರ್ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ.

ಅಕ್ಟೋಬರ್ 6 ರಂದು ರಾಜ್ಯಾದಂತ ಬಿಡುಗಡೆಯಾಗಲಿದೆ. ಚಿತ್ರವನ್ನುನೂತನ್ ಉಮೇಶ್ ಅವರು ನಿರ್ದೇಶನ ಮಾಡಿದ್ದಾರೆ. ಆಕಾಶ್ ಎಂಟರ್ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಸೋಮಶೇಖರ್ ಕೊಟ್ಟಿಗೆನಹಳ್ಳಿ ಅವರು ಚಿತ್ರ ನಿರ್ಮಾಣ ಮಾಡಿದ್ದಾರೆ.

ಸಾಮಾಜಿಕ ಒಳಿತಿಗಾಗಿ ನಾಯಕ ಸಮಾಜದ ಸಮಸ್ಯೆಗಳ ವಿರುದ್ಧ ಯಾವ ರೀತಿ ಹೋರಾಡುತ್ತಾನೆ ಎನ್ನುವುದು ಫೈಟರ್ ಚಿತ್ರದ ಕಥೆ ಆಗಿದೆ. ಇದು ಟ್ರೈಲರ್ ನಲ್ಲೂ ಕಂಡು ಬಂದಿದೆ.

ಫೈಟರ್ ಚಿತ್ರದಲ್ಲಿ ಒಟ್ಟು ಐದು ಆಕ್ಷನ್ ದೃಶ್ಯಗಳಿವೆ. ಸಾಹಸ ದೃಶ್ಯ ಪ್ರಧಾನ ಆಗಿರುವ ಈ ಚಿತ್ರಕ್ಕೆ ಥ್ರಿಲ್ಲರ್ ಮಂಜು ಅವರು ಸಾಹಸ ದೃಶ್ಯ ಕಂಪೋಸ್ ಮಾಡಿದ್ದಾರೆ.

ಸೆಪ್ಟೆಂಬರ್ 13ರಂದು ಫೈಟರ್ ಚಿತ್ರದ ಡ್ಯುಯೆಟ್ ಹಾಡು ಬಿಡುಗಡೆ ಆಗಿದ್ದು ಜನರ ಉತ್ತಮ ಸ್ಪಂದನೆ ದೊರೆತಿದೆ.

ಚಿತ್ರವನ್ನು ಚಿತ್ರದುರ್ಗ, ಪಾಂಡಿಚೇರಿ, ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ 65 ದಿನಗಳ ಕಾಲ ಚಿತ್ರಿಕರಣ ಮಾಡಲಾಗಿದೆ. ವಿನೋದ್ ಪ್ರಭಾಕರ್ ಅವರಿಗೆ ನಾಯಕಿಯಾಗಿ ಲೇಖಚಂದ್ರ ಹಾಗೂ ಪಾವನ ಗೌಡ ಅವರು ಕಾಣಿಸಿಕೊಂಡಿದ್ದಾರೆ. ನಾಯಕನ ತಾಯಿಯ ಪಾತ್ರದಲ್ಲಿ ಹಿರಿಯ ನಟಿ ನಿರೋಷ ಅವರು ನಟಿಸಿದ್ದಾರೆ.

ಗಿರಿಜಾ ಲೋಕೇಶ್, ಜಹಾಂಗೀರ್, ಚಲುವರಾಜ್, ಕುರಿ ಪ್ರತಾಪ್ ಸೇರಿದಂತೆ ಪ್ರಮುಖ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.

ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ಗುರುಕಿರಣ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಶೇಖರ್ ಚಂದ್ರು ಅವರು ಕ್ಯಾಮರಾ ಕೆಲಸ ಮಾಡಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!