RONNIE Movie : ಅ.27ಕ್ಕೆ ‘ರೋನಿ’ ಚಿತ್ರ ರಾಜ್ಯಾದ್ಯಂತ ಬಿಡುಗಡೆ

ವಿಭಿನ್ನ ಕಥಾಹಂದರ ಹೊಂದಿರುವ ’ರೋನಿ’ ಚಿತ್ರದ ಟ್ರೇಲರ್ ಹಾಗೂ ಹಾಡು ಬಿಡುಗಡೆ ಕಾರ್ಯಕ್ರಮ ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನಡೆಯಿತು. ಮುಂಬೈನಲ್ಲಿ ಡಬ್ಬಿಂಗ್ ಹಕ್ಕುಗಳನ್ನು ಖರೀದಿಸುತ್ತಿದ್ದ ಹಿರಿಯ ಸಿನಿಪಂಡಿತ ಎಂ.ರಮೇಶ್ ಹಾಗೂ ಪವನ್‌ಕುಮಾರ್ ಮೊದಲಬಾರಿ ಕನ್ನಡ ಚಿತ್ರಕ್ಕೆ ಲಕ್ಷೀ ಗಣಪತಿ ಸ್ಟುಡಿಯೋಸ್ ಮತ್ತು ರೋಶಿಕಾ ಎಂಟರ್‌ಪ್ರೈಸಸ್ ಮೂಲಕ ಬಂಡವಾಳ ಹೂಡಿದ್ದಾರೆ. ’ದ ಹಂಟರ್’ ಎಂಬುದಾಗಿ ಅಡಿಬರಹದಲ್ಲಿ ಹೇಳಲಾಗಿದೆ.

ಕಥೆ,ಚಿತ್ರಕಥೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಕಿರಣ್.ಆರ್.ಕೆ ಹೇಳುವಂತೆ ಸಿನಿಮಾವು ಥ್ರಿಲ್ಲರ್, ಸೆಸ್ಪೆನ್ಸ್ ಹಾಗೂ ತಿರುವುಗಳಿಂದ ಕೂಡಿದೆ. ಉನ್ನತ ಮಟ್ಟದ ಕೇಸ್ ನಡೆಯುವ ಕಥೆಯಲ್ಲಿ ಶ್ರೀಮಂತ ಹುಡುಗಿ ಮನೆಯಲ್ಲಿರುವ ಮೂವತ್ತು ಕೋಟಿ ದರೋಡೆ ಆಗುತ್ತದೆ. ಇದನ್ನು ತನಿಖೆ ನಡೆಸಲು ಎಸಿಪಿ ಅಧಿಕಾರಿಯೊಬ್ಬರು ನೇಮಕಗೊಳ್ಳುತ್ತಾರೆ. ಅವರಿಂದ ಇದನ್ನು ಹುಡುಕಲಾಗದ ಪರಿಸ್ಥಿತಿ ಒದಗಿ ಬಂದು ವರ್ಗಾವಣೆಗೊಳ್ಳುತ್ತಾರೆ. ನಂತರ ಕೇಸ್ ಸಿಸಿಬಿ ಅಧಿಕಾರಿಗೆ ಬರುತ್ತದೆ. ಇದರ ಮಧ್ಯೆ ಎರಡು ಕೊಲೆಗಳು ನಡೆಯುತ್ತದೆ. ಎರಡಕ್ಕೂ ಒಂದೇ ಸಾಮ್ಯತೆ ಇರುತ್ತದೆ. ಕೊಲೆ ಮಾಡಿದವರು ಯಾರು? ಇದಕ್ಕೆ ಸಂಬಂದವೇನು? ಈಕೆಗೆ ನ್ಯಾಯ ಸಿಗುತ್ತದಾ? ನಾಲ್ಕು ಪಾತ್ರಗಳು ಇರಲಿದ್ದು ರೋನಿ ಯಾರು ಎನ್ನುವುದು ಕ್ಲೈಮಾಕ್ಸ್‌ದಲ್ಲಿ ತಿಳಿಯುತ್ತದೆ ಅಂತ ಚಿಕ್ಕದಾಗಿ ಮಾಹಿತಿ ನೀಡಿದರು.

ನಾಯಕ ಧರ್ಮಕೀರ್ತಿರಾಜ್ ಮಾತನಾಡಿ ಕುಂಗುಫು ಚಂದ್ರು ಅದ್ಬುತವಾಗಿ ಸಾಹಸ ಮಾಡಿಸಿದ್ದಾರೆ. ಇತ್ತೀಚೆಗೆ ನನ್ನ ಚಿತ್ರಗಳು ಹಾಗೆ ಬಂದು ಹೋಗುತ್ತಿದೆ. ಪ್ರಚಾರದ ಕೊರತೆ ಇರಬಹುದು. ನಾವುಗಳು ಯಾವುದೇ ನಿರ್ಮಾಪಕರಿಗೆ ತೊಂದರೆ ಕೊಡುತ್ತಿಲ್ಲ. ಜನ ಚಿತ್ರ ನೋಡಿ ಚೆನ್ನಾಗಿದೆ ಅಂತ ಹೇಳಿದರೂ, ಒಮ್ಮೋಮ್ಮೆ ಈ ರೀತಿ ಆಗುತ್ತದೆ. ಇದರಲ್ಲಿ ಎಲ್ಲರ ಶ್ರಮ ಬೇರೆ ತರಹ ಇದೆ.

ಚಿರಂಜೀವಿಸರ್ಜಾ ಅವರ ಸಿನಿಮಾವು ಅದೇ ದಿನದಂದು ತೆರೆಗೆ ಬರುತ್ತಿದೆ. ಅವರಿಗೆ ಗೌರವ ಸೂಚಿಸಲು ಯಾವುದೇ ಚಿತ್ರಗಳು ಬಾರದೆ ಇದ್ದರೆ ಚೆನ್ನಾಗಿರುತ್ತಿತ್ತು ಎಂದರು.
ಬಾಂಬೆ ಮೂಲದ ರುತ್ವಿಪಟೇಲ್ ನಾಯಕಿ. ಮತ್ತೋಂದು ಮುಖ್ಯ ಪಾತ್ರದಲ್ಲಿ ತಿಲಕ್, ವರ್ಧನ್, ಸಾಹಿತಿ ಕಿನ್ನಾಳ್‌ರಾಜ್, ಸಂಗೀತ ಸಂಯೋಜಕ ಆಕಾಶ್‌ಪರ್ವ, ಕಲರಿಸ್ಟ್ ಕಿಶೋರ್ ಹಾಜರಿದ್ದು ಅನುಭವಗಳನ್ನು ಹಂಚಿಕೊಂಡರು. ಅಕ್ಟೋಬರ್ ತಿಂಗಳಲ್ಲಿ ತೆರೆಗೆ ತರಲು ಯೋಜನೆ ರೂಪಿಸಲಾಗಿದೆ ಎನ್ನುತ್ತಾರೆ ವಿತರಕ ಕಮ್ಮರ್.ತಾರಾಗಣದಲ್ಲಿ ಕೀರ್ತಿರಾಜ್, ರಘುಪಾಂಡೇಶ್ವರ್, ಬಲರಾಜವಾಡಿ, ರತನ್‌ಕರತಮಾಡ ಮುಂತಾದವರು ನಟಿಸಿದ್ದಾರೆ. ಹಾಗೂ ಲಿಯೋ ಎನ್ನುವ ನಾಯಿ ಸಹ ಪ್ರಮುಖ ಪಾತ್ರ ನಿರ್ವಹಿಸಿದೆ. ಛಾಯಾಗ್ರಹಣ ವೀನಸ್‌ನಾಗರಾಜಮೂರ್ತಿ, ಸಂಕಲನ ವೆಂಕಿ.ಯುಡಿವಿ, ತಾಂತ್ರಿಕ ಮುಖ್ಯಸ್ಥ ಧರಂ.ಕೆ.ಸವ್‌ಲಾನಿ ಅವರದಾಗಿದೆ. ಬೆಂಗಳೂರು, ಮಂಗಳೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಸಿದ್ದಗೊಂಡಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!