ರೋಹಿತ್ ಮುಖ್ಯ ಪಾತ್ರದಲ್ಲಿ ನಟಿಸಿರುವ ರಕ್ತಾಕ್ಷ ಚಿತ್ರದ ಜವಾರಿ ಹಾಡು ಸೆಪ್ಟೆಂಬರ್ 28ರಂದು ಸಂಜೆ 7.45 ಕ್ಕೆ ಆನಂದ್ ಆಡಿಯೋದಲ್ಲಿ ಬಿಡುಗಡೆ ಆಗಲಿದೆ.
ಇದು ಉತ್ತರ ಕರ್ನಾಟಕ ಶೈಲಿಯ ಡ್ಯಾನ್ಸ್ ನಂಬರ್ ಸಾಂಗ್ ಆಗಿದೆ. ಸುದೀಪ್ ವೆಂಕಟರಾಮಯ್ಯ ಜವಾರಿ ಸಾಂಗ್ ಗೆ ಸಾಹಿತ್ಯ ಬರೆದಿದ್ದಾರೆ. ಸುಪ್ರಿಯಾ ರಾಮ್ ಧ್ವನಿ ನೀಡಿದ್ದಾರೆ.
ಈ ಹಿಂದೆ ಚಿತ್ರದ ಟೀಸರ್ ಬಿಡುಗಡೆ ಆಗಿದ್ದು ರೋಹಿತ್ ಹಾಗೂ ಪ್ರಮೋದ್ ಶೆಟ್ಟಿ ಅವರ ಒಡೆದಾಟದ ದೃಶ್ಯಗಳು ಗಮನ ಸೆಳೆದಿದ್ದವು. ಈಗ ಉತ್ತರ ಕರ್ನಾಟಕ ಭಾಗದ ಜವಾರಿ ಹಾಡಿನ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
ಉತ್ತರ ಕರ್ನಾಟಕದ ಪ್ರತಿಭೆ ಆಗಿರುವ ರೋಹಿತ್ ಅವರು ಮಾಡೆಲ್ ಆಗಿ ಗುರುತಿಸಿಕೊಂಡಿದ್ದಾರೆ. ರಕ್ತಾಕ್ಷ ಚಿತ್ರವನ್ನು ಇವರೇ ನಿರ್ಮಿಸಿದ್ದು ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದೆ.
ರೋಹಿತ್ ಅವರು ಕನ್ನಡದ ಸಲ್ಮಾನ್ ಖಾನ್ ಎಂದು ಕರೆಸಿಕೊಂಡು ಸುದ್ದಿಯಾಗಿದ್ದಾರೆ. ಈ ಚಿತ್ರದಲ್ಲಿ ರೂಪದರ್ಶಿಗಳು ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ವಿಭಿನ್ನ ಬಗೆಯ ಹಾಡು, ವಿನೂತನ ಡ್ಯಾನ್ಸ್ ಇದೆ.
ಶೀಘ್ರವಾಗಿ ಬಿಡುಗಡೆ ಆಗಲಿರುವ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯನ್ನು ಚಿತ್ರ ಪ್ರೇಮಿಗಳು ಹೊಂದಿದ್ದಾರೆ.
ರಕ್ತಾಕ್ಷ ರಿವೆಂಜ್ ಬೇಸ್ಡ್ ಥ್ರಿಲ್ಲರ್ ಚಿತ್ರ ಆಗಿದೆ. ಚಿತ್ರಕ್ಕೆ ವಾಸುದೇವ ಎಸ್ ಎನ್ ನಿರ್ದೇಶನ ಮಾಡಿದ್ದಾರೆ. ರೋಹಿತ್ ಅವರು ಸಾಯಿ ಪ್ರೊಡಕ್ಷನ್ಸ್ ಮೂಲಕ ರಕ್ತಾಕ್ಷ ಚಿತ್ರದಲ್ಲಿ ಯುವ ಪ್ರತಿಭೆಗಳಿಗೆ ಅವಕಾಶವನ್ನು ಕಲ್ಪಿಸಿದ್ದಾರೆ.
ಚಿತ್ರವನ್ನು ಬೆಂಗಳೂರು ಸುತ್ತಮುತ್ತ 45 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು ಸುಜಿತ್ ವೆಂಕಟರಾಮಯ್ಯ ಅವರ ಸಾಹಿತ್ಯಕ್ಕೆ ಧೀರೇಂದ್ರ ಡಾಸ್ ಅವರ ಸಂಗೀತ ಸಂಯೋಜನೆ ಇದೆ. ವಸಿಷ್ಠ ಸಿಂಹ ಹಾಡಿರುವ ಟೈಟಲ್ ಸಾಂಗ್ ಅತಿ ಹೆಚ್ಚಿನ ವೀಕ್ಷಣೆಯನ್ನು ಪಡೆದಿದೆ.
ಚಿತ್ರದಲ್ಲಿ ರೂಪ ರಾಯಪ್ಪ, ಅರ್ಚನಾ ಕೊಟ್ಟಿಗೆ, ರಚನಾ ದಶರತ್ ನಾಯಕಿಯರಾಗಿ ನಟಿಸಿದ್ದಾರೆ. ಪ್ರಭು, ವಿಶ್ವ, ಬದರಿ ನಾರಾಯಣ, ಗುರುದೇವ ನಾಗರಾಜ್ ಇತರರು ಪ್ರಮುಖ ಪಾತ್ರದಲ್ಲಿ ನಡೆಸಿದ್ದಾರೆ. ವಿಲನ್ ಆಗಿ ಪ್ರಮೋದ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.
____
Be the first to comment