ಮಹೇಶ್ ಸಿ ಅಮ್ಮಳ್ಳಿ ದೊಡ್ಡಿ ನಿರ್ದೇಶನದ ಲವ್ ಚಿತ್ರದ ಎರಡನೇ ಟ್ರೈಲರ್ ಅಕ್ಟೋಬರ್ 2ರಂದು ಬಿಡುಗಡೆ ಆಗಲಿದೆ.
ಅನ್ಯಕೋಮಿನ ಜೋಡಿ ಪ್ರೀತಿ ಮಾಡಿದಾಗ ನಡೆಯುವ ಘಟನೆಯನ್ನು ಇಟ್ಟುಕೊಂಡು ಈ ಚಿತ್ರವನ್ನು ಚಿತ್ರಕರಿಸಲಾಗಿದೆ. ಅಕ್ಟೋಬರ್ 6ರಂದು ಚಿತ್ರ ತೆರೆಗೆ ಬರಲಿದೆ
ಹೊಸದಾಗಿ ಬಿಡುಗಡೆ ಆಗುವ ಟ್ರೈಲರ್ ನಲ್ಲಿ ನಾಯಕಿಯ ಪರಿಚಯ ಹಾಗೂ ಒಂದಷ್ಟು ಲವ್ ಕಂಟೆಂಟ್ ಹೇಳುವ ಯತ್ನ ಮಾಡಲಾಗಿದೆ ಎಂದು ನಿರ್ದೇಶಕರು ಹೇಳಿದ್ದಾರೆ.
ಚಿತ್ರವನ್ನು ಶ್ರೀ ಕಾಲಭೈರವೇಶ್ವರ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ದಿವಾಕರ್ ಅವರು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಅಮಿತ್ ನಾಯಕನಾಗಿ ನಟಿಸಿದ್ದು, ವೃಷಾ ಪಾಟೀಲ್ ಅವರು ಮುಸ್ಲಿಂ ಯುವತಿಯಾಗಿ ಕಾಣಿಸಿಕೊಂಡಿದ್ದಾರೆ.
ನೈಜ ಘಟನೆಯನ್ನು ಇಟ್ಟುಕೊಂಡು ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಈಗಾಗಲೇ ರಿಲೀಸ್ ಆಗಿರುವ ಹಾಡು, ಟ್ರೈಲರ್ ಗೆ ಉತ್ತಮ ಪ್ರತಿಕ್ರಿಯೆ ವ್ಯರ್ಥವಾಗಿದೆ ಎಂದು ನಿರ್ದೇಶಕರು ಹೇಳಿದ್ದಾರೆ.
ಚಿತ್ರದಲ್ಲಿ ಪ್ರಭಾಕರ ಕುಂದರ್ ಬ್ರಹ್ಮಾವರ, ಸತೀಶ್ ಕಾಂತಾರ, ಉಮೇಶ್ ಶ್ರೀಕಾಂತ್ ತೇಲಿ, ರಾಧಿಕಾ ಭಟ್, ಪ್ರಸಾದ್ ಭಟ್, ರಜತ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ.
ಚಿತ್ರಕ್ಕೆ ಸಿದ್ದಾರ್ಥ್ ಅವರ ಛಾಯಾಗ್ರಹಣ ಇದೆ. ಲೋಕೇಶ್ ಪುಟ್ಟೇಗೌಡ ಸಂಕಲನ ಮಾಡಿದ್ದಾರೆ. ರೋಸಿತ್ ವಿಜಯನ್, ಶ್ರೀ ಸಾಯಿ ಕಿರಣ್ ಸಂಗೀತ, ಶಿವಪ್ರಸಾದ್ ಅವರ ಹಿನ್ನೆಲೆ ಸಂಗೀತ ಇದೆ.
ಚಿತ್ರವನ್ನು ಉಡುಪಿ, ಕೋಟ, ಕುಂದಾಪುರ, ಬಾಗಲಕೋಟೆ, ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಅಕ್ಟೋಬರ್ 6ಕ್ಕೆ ತೆರೆಗೆ ಬರುತ್ತಿರುವ ಚಿತ್ರವನ್ನು ಬಿ ಕೆ ಗಂಗಾಧರ್ ಬಿಡುಗಡೆ ಮಾಡುತ್ತಿದ್ದಾರೆ.
____





Be the first to comment