ಸೆಪ್ಟೆಂಬರ್ 23ರಂದು ನಡೆದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಬಹು ನಿರೀಕ್ಷೆಯಂತೆ ನಿರ್ಮಾಪಕ ಸುರೇಶ್ ಆಯ್ಕೆಯಾಗಿದ್ದಾರೆ.
ಭಾನುವಾರ ನಡೆದ ಚುನಾವಣೆಯಲ್ಲಿ ಎನ್ ಎಂ ಸುರೇಶ್ ಅವರು 337 ಮತ ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾದರು. ಶಿಲ್ಪಾ ಶ್ರೀನಿವಾಸ್ ಅವರು 217, ವಿ ಎಚ್ ಸುರೇಶ್ 181, ಎ ಗಣೇಶ್ 204 ಮತ ಪಡೆದರು.
ಎನ್ ಎಂ ಸುರೇಶ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತ ಎಂದು ಬಿ ಸಿನಿಮಾಸ್ ಈ ಹಿಂದೆ ಬರೆದಿತ್ತು.
ಇದೇ ವೇಳೆ ಕಾರ್ಯದರ್ಶಿಯಾಗಿ ಬಾ ಮಾ ಗಿರೀಶ್, ಖಜಾಂಚಿಯಾಗಿ ಜಯಸಿಂಹ ಮಸೂರಿ, ಉಪಾಧ್ಯಕ್ಷರಾಗಿ ಪ್ರಮೀಳಾ ಜೋಷಾಯಿ ಆಯ್ಕೆ ಆದರು.
ಎಕ್ಸ್ ಕ್ಯೂಸ್ ಮೀ ಚಿತ್ರದ ನಿರ್ಮಾಣದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಸುರೇಶ್ ಅವರು ಹಲವಾರು ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಿದ್ದಾರೆ. ಈ ಹಿಂದೆ ಅವರು ವಾಣಿಜ್ಯ ಮಂಡಳಿಯಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಸುರೇಶ್ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇದ್ದು ಕನ್ನಡ ಚಿತ್ರರಂಗ ಅವರಿಂದ ಹೆಚ್ಚಿನ ಕೆಲಸವನ್ನು ನಿರೀಕ್ಷೆ ಮಾಡಿದೆ.
Be the first to comment