PARISHUDHAM Movie Review :ಅನೈತಿಕ ಸಂಬಂಧಗಳ ಕಥೆ ‘ಪರಿಶುದ್ಧಂ’

ಚಿತ್ರ: ‘ಪರಿಶುದ್ಧಂ ‘

ನಿರ್ದೇಶನ: ಆರೋನ್ ಕಾರ್ತಿಕ್ ವೆಂಕಟೇಶ್
ನಿರ್ಮಾಣ: ಕುಮಾರ್ ರಾಥೋಡ್, ರೋಹನ್ ಕಿದಿಯೂರ್
ಪಾತ್ರವರ್ಗ: ರೇಖಾ, ದಿಶಾ ಪೂವಯ್ಯ, ಅರ್ಚನಾ, ಯತಿರಾಜ್ ಇತರರು

ರೇಟಿಂಗ್: 3/5

ಅನೈತಿಕ ಸಂಬಂಧಗಳು ಕೌಟಿಂಬಿಕ ವ್ಯವಸ್ಥೆಯನ್ನು ಹೇಗೆ ಹಾಳು ಮಾಡುತ್ತವೆ ಅನ್ನುವುದನ್ನು ನಿರೂಪಿಸುವ ಯತ್ನವನ್ನು ‘ಪರಿಶುದ್ಧಂ ‘ ಚಿತ್ರದಲ್ಲಿ ಮಾಡಲಾಗಿದೆ. ಚಿತ್ರದ ಮೂಲಕ ಒಂದು ರೀತಿಯಲ್ಲಿ ಅನೈತಿಕ ಸಂಬಂಧದ ದುಷ್ಪರಿಣಾಮದ ಬಗ್ಗೆ ನೀತಿ ಹೇಳುವ ಯತ್ನವನ್ನು ನಿರ್ದೇಶಕರು ಮಾಡಿದ್ದಾರೆ.

ಸಿನಿಮಾದ ಕಥೆ ಅಂಜಲಿ ಎನ್ನುವ ಮಾಯಾಂಗನೆ ನಟಿಯ ಸುತ್ತ ನಡೆಯುತ್ತದೆ. ಹೆಣ್ಣು ಎನ್ನುವುದು ಒಂದು ಶಕ್ತಿ. ಕಥೆಯ ಮೂಲಕ ಪ್ರಮುಖ ಪಾತ್ರಧಾರಿ ರೇಖಾ ನೈತಿಕ ಸಂಬಂಧಗಳ ವಿರುದ್ಧ ಸಿಡಿದೇಳುವ ರೋಚಕತೆಯನ್ನು ಬಿಂಬಿಸಲಾಗಿದೆ. ಮನೋವೈದ್ಯದ ಆಕೆ ತೆಗೆದುಕೊಳ್ಳುವ ನಿರ್ಧಾರ ಕಾನೂನು ವ್ಯವಸ್ಥೆ ಸಹಿಸಿಕೊಳ್ಳುವುದಿಲ್ಲ.

ಆಂಜಲಿಯ ವೈಯಾರಕ್ಕೆ ಸೋತು ಅನೇಕರು ಆಕೆಗಾಗಿ ಹಂಬಲಿಸುತ್ತಾರೆ. ಈ ನಡುವೆ ಸೈಕೋ ಶಾಮ್ ಎನ್ನುವ ಮನೋರೋಗಿ ಸರಣಿ ಕೊಲೆಗಳನ್ನು ಮಾಡಿ ಪೊಲೀಸರಿಗೆ ಸವಾಲಾಗಿ ಬೆಳೆಯುತ್ತಾನೆ. ಮುಂದೆ ಸೈಕೋ ಶ್ಯಾಮ್ ಪೋಲಿಸರಿಂದ ತಪ್ಪಿಸಿಕೊಂಡು ಹೋದ ಬಳಿಕ ಸರಣಿ ಕೊಲೆ ಮುಂದುವರೆಯುತ್ತದೆ. ಕೊಲೆಗಳನ್ನು ಮಾಡುವವರು ಯಾರು ಎನ್ನುವುದು ಸಿನಿಮಾದ ಸಸ್ಪೆನ್ಸ್ ಆಗಿದೆ.

ನಿರ್ದೇಶಕ ಆರೋನ್ ಕಾರ್ತಿಕ್ ವೆಂಕಟೇಶ್ ಸಿನಿಮಾದಲ್ಲಿ ನಿಗೂಢತೆಯನ್ನು ಕಾಯ್ದುಕೊಂಡು ದೃಶ್ಯಗಳನ್ನು ತೆರೆಯ ಮೇಲೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಸಿನಿಮಾದಲ್ಲಿ ಕೆಟ್ಟದಾಗಿ ಇರುವ ಸಂಭಾಷಣೆಗಳನ್ನು ಪ್ರೇಕ್ಷಕರು ಸಹಿಸಿಕೊಳ್ಳುವುದು ಹಿಂಸೆ ಅನಿಸುತ್ತದೆ.

ಮುಖ್ಯ ಪಾತ್ರದಲ್ಲಿ ನಡೆಸಿರುವ ಸ್ಪರ್ಶ ರೇಖಾ ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ದಿಶಾ ಪೂವಯ್ಯ, ಪೊಲೀಸ್ ಕಮಿಷನರ್ ಪಾತ್ರದಲ್ಲಿ ಯತಿರಾಜ್ ಗಮನ ಸೆಳೆಯುತ್ತಾರೆ. ನಟಿಯ ಪಾತ್ರದಲ್ಲಿ ಅರ್ಚನಾ ಲೀಲಾಜಾಲವಾಗಿ ನಟಿಸಿದ್ದಾರೆ.

ಹಿನ್ನಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದ್ದು ಪ್ರೇಕ್ಷಕರಿಗೆ ಹಿತ ಅನಿಸುತ್ತದೆ.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!