Parmiala-dsouza Review :ಮರ್ಡರ್ ಮಿಸ್ಟ್ರಿ ಪರಿಮಳ ಡಿಸೋಜ

ಚಿತ್ರ: ಪರಿಮಳ ಡಿಸೋಜ

ನಿರ್ದೇಶನ: ಗಿರಿಧರ ಎಚ್ ಟಿ
ತಾರಾಗಣ: ಪೂಜ ರಾಮಚಂದ್ರ, ಕೋಮಲ ಬನವಾಸೆ, ಶ್ರೀನಿವಾಸ ಪ್ರಭು, ಭವ್ಯ

ರೇಟಿಂಗ್: 3

ಪರಿಮಳ ಡಿಸೋಜ ಕ್ರೈಂ ಥ್ರಿಲ್ಲರ್, ಅಮ್ಮ ಮಗನ ಪ್ರೀತಿಯ ಕಥೆಯಾಗಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವ ಯತ್ನ ಮಾಡಿದೆ. ಪರಿಮಳ ಡಿಸೋಜ ಕೊಲೆಯಿಂದ ಆರಂಭವಾಗುವ ಕಥೆ ಪೊಲೀಸರ ತನಿಖೆಯ ಮೂಲಕ ಮುಂದೆ ಸಾಗುತ್ತದೆ.

ಸಿನಿಮಾದ ನಿರ್ದೇಶಕರು ಕೊನೆಯವರೆಗೂ ಸಿನಿಮಾದ ಕಥೆ ಎಲ್ಲಿದೆ ಎನ್ನುವುದನ್ನು ಬಚ್ಚಿಟ್ಟಿದ್ದಾರೆ. ಹೀಗಾಗಿ ಪ್ರೇಕ್ಷಕರು ಇದು ಕ್ರೈಂ ಥ್ರಿಲ್ಲರ್ ಸಿನಿಮಾ ಇರಬಹುದೇ ಅಥವಾ ಅಮ್ಮ ಮಗನ ಪ್ರೀತಿಯ ಕಥೆಯೇ ಎನ್ನುವುದನ್ನು ಕೊನೆಗೆ ಅವರೇ ನಿರ್ಧರಿಸಬೇಕಾದ ರೀತಿ ಸಿನಿಮಾ ನಿರೂಪಣೆ ಮಾಡಲಾಗಿದೆ.

ಚಿತ್ರದಲ್ಲಿ ಒಂದಷ್ಟು ಬೆರಗಾಗುವ ಅಂಶಗಳು ಇವೆ. ಹೀರೋ ಹೀರೋಯಿನ್ ಡ್ಯುಯೆಟ್ ಹಾಡು ಹಾಡಿದರೆ ಅದನ್ನು ಪ್ರೇಕ್ಷಕ ಸಹಿಸಿಕೊಳ್ಳಬಹುದು. ಆದರೆ ಚಿತ್ರದಲ್ಲಿ ಕೇಸು ಪತ್ತೆಗೆ ಬಂದ ಕಾನ್ಸ್ಟೇಬಲ್ ರೋಮ್ಯಾಂಟಿಕ್ ಹಾಡಿಗೆ ಸ್ಟೆಪ್ ಹಾಕುವ ದೃಶ್ಯ ಇದೆ. ಚಿತ್ರದ ನಿರ್ಮಾಪಕರೇ ಆ ಪಾತ್ರದಲ್ಲಿ ನಟಿಸಿರುವುದು ಎನ್ನುವುದು ವಿಶೇಷ.

ಅಂತೆಯೇ ತಂಗಿ ಪಾತ್ರಕ್ಕೂ ಡ್ಯುಯೆಟ್ ಹಾಡಿಸಲಾಗಿದೆ. ಚಿತ್ರದ ಮುಕ್ಕಾಲು ಭಾಗ ಹೋಲಿಸಮ್ಮನ ಇಮ್ಯಾಜಿನೇಷನ್ ಆವರಿಸುತ್ತದೆ. ಇದೇನು ಎನ್ನುವುದನ್ನು ಚಿತ್ರ ನೋಡಿ ಅನುಭವಿಸಬೇಕು.

ಚಿತ್ರದ ಎಲ್ಲ ಪಾತ್ರಗಳು ತಮ್ಮ ಧ್ವನಿಯನ್ನು ಎತ್ತರಿಸಿ ಮಾತನಾಡಿವೆ. ಇದನ್ನು ಕಾಮಿಡಿ ಎಂದು ಪರಿಗಣಿಸಿದರೆ ನಗುವಿನ ಹೊಳೆ ಹರಿಯುವುದಕ್ಕೆ ತೊಂದರೆ ಇಲ್ಲ. ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಬರುವ ಪಾತ್ರ ಪ್ರೇಕ್ಷಕರ ಮನಸ್ಸನ್ನು ಕರಗಿಸಲು ಯಶಸ್ವಿ ಆದರೆ ಅದನ್ನು ಪಾಸಿಟಿವ್ ಎಂದು ಪರಿಗಣಿಸಬಹುದು.
_____

Be the first to comment

Leave a Reply

Your email address will not be published. Required fields are marked *

Translate »
error: Content is protected !!