Jaggesh: ‘ತೋತಾಪುರಿ 2’ ಚಿತ್ರದ ಟ್ರೇಲರ್ ರಿಲೀಸ್

ನವರಸ ನಾಯಕ ಜಗ್ಗೇಶ್ ಅಭಿನಯದ ‘ತೋತಾಪುರಿ 2’ ಚಿತ್ರದ ಟ್ರೇಲರ್  ರಿಲೀಸ್ ಆಗಿದೆ.

ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಅವರು ಗೌರಿ ಗಣೇಶ ಹಬ್ಬದಂದು  ಟ್ರೈಲರ್  ರಿಲೀಸ್ ಮಾಡಿ ತಂಡಕ್ಕೆ ಶುಭಕೋರಿದ್ದಾರೆ. ಜಗ್ಗೇಶ್, ಧನಂಜಯ್, ಅದಿತಿ ಪ್ರಭುದೇವ ಮೊದಲಾದವರು ನಟಿಸಿದ್ದಾರೆ.

‘ತೋತಾಪುರಿ’ ಚಿತ್ರದಲ್ಲಿ ಈರೇಗೌಡ (ಜಗ್ಗೇಶ್) ಕೃಷಿಕ,  ಟೈಲರ್. ಆತನಿಗೆ ಶಕೀಲಾ (ಅದಿತಿ ಪ್ರಭುದೇವ) ಬಾನು ಮೇಲೆ ಪ್ರೀತಿ ಹುಟ್ಟುತ್ತದೆ. ಈ ಚಿತ್ರದ ಕೊನೆಯಲ್ಲಿ ಧನಂಜಯ್ ಕಾಣಿಸಿಕೊಂಡಿದ್ದರು. ಎರಡನೇ ಭಾಗದಲ್ಲಿ ಕಥೆ ಮುಂದುವರಿದಿದೆ. ಜಗ್ಗೇಶ್-ಅದಿತಿ ಪ್ರಭುದೇವ ರೀತಿಯೇ ಸುಮನ್ ರಂಗನಾಥ್-ಧನಂಜಯ್ ಅವರ ಪ್ರೇಮ ಕಥೆಯೂ ಸೀಕ್ವೆಲ್​ನಲ್ಲಿ ಹೈಲೈಟ್ ಆಗಲಿದೆ ಎಂಬುದು ಟ್ರೇಲರ್ ಮೂಲಕ ಗೊತ್ತಾಗಿದೆ.

ಇಂದು ಧರ್ಮದ ಹೆಸರಲ್ಲಿ ಕಿತ್ತಾಟ ನಡೆಯುತ್ತಿವೆ. ಅವುಗಳನ್ನು ಮೀರಿ ಬದುಕಬೇಕು. ಸಮಾಜದಲ್ಲಿ ಸಾಮರಸ್ಯ ತರಬೇಕು ಎನ್ನುವ ಸಂದೇಶವನ್ನು ‘ತೋತಾಪುರಿ’ ಸಿನಿಮಾ ವಿವರಿಸುತ್ತದೆ. ಇದರ ಜೊತೆಗೆ  ಡಬಲ್ ಮೀನಿಂಗ್ ಡೈಲಾಗ್​ಗಳನ್ನು ಟ್ರೇಲರ್​ನಲ್ಲಿ ತೋರಿಸಲಾಗಿದೆ.

ಸುರೇಶ್ ಆರ್ಟ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಮೋನಿ ಪ್ಲಿಕ್ಸ್ ಸ್ಟುಡಿಯೋಸ್ ಬ್ಯಾನರ್ ನಡಿ ಕೆ ಸುರೇಶ್ ನಿರ್ಮಾಣ ಮಾಡಿರುವ ಕಾಮಿಡಿ ಡ್ರಾಮಾ ಕಥಾಧಾರಿತ ಈ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಸೇರಿದಂತೆ ಅದಿತಿ ಪ್ರಭುದೇವ, ಡಾಲಿ ಧನಂಜಯ್, ಹಾಗೂ ಸುಮನ್ ರಂಗನಾಥ್ ತೆರೆ ಹಂಚಿಕೊಂಡಿದ್ದಾರೆ.

ವಿಜಯ್ ಪ್ರಸಾದ್ ನಿರ್ದೇಶನದ ನವರಸ ನಾಯಕ ಜಗ್ಗೇಶ್ ಅಭಿನಯದ ‘ತೋತಾಪುರಿ’ ಸಿನಿಮಾ ಕಳೆದ ವರ್ಷ ಸಿನಿಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದ್ದು, ಮುಂದುವರೆದ ಭಾಗ ʼತೋತಾಪುರಿ 2ʼ ತೆರೆ ಮೇಲೆ ಬರಲು ಸಜ್ಜಾಗಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!