SIIMA Award 2023: ಕಾಂತಾರಕ್ಕೆ ಹತ್ತು ಪ್ರಶಸ್ತಿ!

ದುಬೈನಲ್ಲಿ ನಡೆದ ಸೈಮಾ ಅವಾರ್ಡ್ಸ್  ಕಾರ್ಯಕ್ರಮದಲ್ಲಿ ಕಾಂತಾರ ಸಿನಿಮಾ 10 ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

ಸೈಮಾ ಅವಾರ್ಡ್ಸ್ ನಲ್ಲಿ ಅತ್ಯುತ್ತಮ ನಟನೆಗೆ, ನಿರ್ದೇಶನಕ್ಕೆ ಹಾಗು ಪಾಥ್ ಬ್ರೇಕಿಂಗ್ ಸ್ಟೋರಿಗೆ ಸ್ಪೆಷಲ್ ಅಪ್ರಿಸಿಯೇಷನ್ ಅವಾರ್ಡ್ ಸೇರಿ ಒಟ್ಟು 3 ಪ್ರಶಸ್ತಿ ಗಳು ರಿಷಬ್ ಶೆಟ್ಟಿಗೆ ದೊರಕಿದೆ.

 “ಕಾಂತಾರ” ಚಿತ್ರಕ್ಕೆ ಬೆನ್ನೆಲುಬಾಗಿದ್ದ ದೈವ ನರ್ತಕರಾದ ಮುಖೇಶ್ ಲಕ್ಷ್ಮಣ್ ಅವರು ದುಬೈನಲ್ಲಿ ಸೈಮಾ ಪ್ರಶಸ್ತಿ ಸ್ವೀಕರಿಸಿದ್ದಾರೆ. ಎಲೆಮರೆಕಾಯಿಯಂತಿದ್ದ ದೈವ ನರ್ತಕ ಪ್ರತಿಷ್ಠಿತ “ಸೈಮಾ” ಪ್ರಶಸ್ತಿ ಪಡೆದಿದ್ದಾರೆ.

ಇದುವರೆಗೆ ಸೈಮಾ ಅವಾರ್ಡ್ಸ್‌ನಲ್ಲಿ ಅತಿ ಹೆಚ್ಚು ಅವಾರ್ಡ್‌ಗಳನ್ನು ಪಡೆದ ಚಿತ್ರ ಎಂಬ ಹೆಗ್ಗಳಿಕೆಗೆ ಕಾಂತಾರ ಪಾತ್ರವಾಗಿದೆ. ʼಕಾಂತಾರ 2ʼ ಚಿತ್ರ ಬರವಣಿಗೆ ಹಂತದಲ್ಲಿದ್ದು, ಪ್ರೇಕ್ಷಕರಲ್ಲಿ ಮತ್ತಷ್ಟು ನಿರೀಕ್ಷೆ ಹೆಚ್ಚು ಮಾಡಿದೆ.

ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ವಿಜಯ್ ಕಿರಗಂದೂರ್ ಅವರು ನಿರ್ಮಿಸಿ, ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಸಿನಿಮಾ “ಕಾಂತಾರ”, ಕಳೆದ ವರ್ಷ ಬಿಡುಗಡೆಯಾಗಿ ದೇಶದೆಲ್ಲೆಡೆ ಉತ್ತಮ ಪ್ರಶಂಸೆ ಗಳಿಸಿತ್ತು. ಳೆದ ವರ್ಷ ಬಿಡುಗಡೆಗೊಂಡ ಕಾಂತಾರ  ಸಿನಿಮಾದ ಅಲೆ ಇನ್ನೂ ಕಡಿಮೆಯಾಗಿಲ್ಲ.

ಕಾಂತಾರ ಪಡೆದ ಪ್ರಶಸ್ತಿಗಳು

1. ಅತ್ಯುತ್ತಮ ನಿರ್ದೇಶಕ-ರಿಷಬ್ ಶೆಟ್ಟಿ
2.ಅತ್ಯುತ್ತಮ ನಟ (ಕ್ರಿಟಿಕ್ಸ್)- ರಿಷಬ್ ಶೆಟ್ಟಿ
3.ವಿಶೇಷ ಮೆಚ್ಚುಗೆ ಪ್ರಶಸ್ತಿ (ಪಾಥ್ ಬ್ರೇಕಿಂಗ್ ಸ್ಟೋರಿ‌)-ರಿಷಬ್ ಶೆಟ್ಟಿ
4.ಅತ್ಯುತ್ತಮ ನಟಿ (ಕ್ರಿಟಿಕ್ಸ್)-ಸಪ್ತಮಿ ಗೌಡ
5.ಅತ್ಯುತ್ತಮ ಖಳನಟ- ಅಚ್ಯುತ್ ಕುಮಾರ್
6.ಅತ್ಯುತ್ತಮ ಸಂಗೀತ ನಿರ್ದೇಶಕ- ಅಜನೀಶ್ ಲೋಕನಾಥ್
7.ಅತ್ಯುತ್ತಮ ಗಾಯಕ-ವಿಜಯ್ ಪ್ರಕಾಶ್‌
8.ಅತ್ಯುತ್ತಮ ಗೀತೆ ರಚನೆಕಾರ-ಪ್ರಮೋದ್‌ ಮರವಂತೆ
9.ಅತ್ಯುತ್ತಮ ಹಾಸ್ಯ ನಟ- ಪ್ರಕಾಶ್‌ ತೂಮಿನಾಡು
10.ವಿಶೇಷ ಮೆಚ್ಚುಗೆ ಪ್ರಶಸ್ತಿ- ಮುಖೇಶ್ ಲಕ್ಷ್ಮಣ್

Be the first to comment

Leave a Reply

Your email address will not be published. Required fields are marked *

Translate »
error: Content is protected !!