13: ಬಿಡುಗಡೆಯಾಯಿತು ’13’

ರಾಘವೇಂದ್ರ ರಾಜ್​ಕುಮಾರ್​, ಶ್ರುತಿ ನಟನೆಯ ’13’ ಸಿನಿಮಾ ಇಂದು ಬಿಡುಗಡೆ ಆಗಿದೆ.

ಭಾವೈಕ್ಯತೆಯ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. 13 ಕೋಟಿ ರೂಪಾಯಿ ದುಡ್ಡಿನ ಸುತ್ತ ಚಿತ್ರದ ಕಥೆ ಸಾಗುತ್ತದೆ.

ರಾಘವೇದ್ರ ರಾಜ್‌ಕುಮಾರ್ ಅವರು ’13’ ಸಿನಿಮಾದಲ್ಲಿ ಗುಜರಿ ಅಂಗಡಿ ಮಾಲೀಕ ಮೋಹನ್ ಕುಮಾರ್ ಹೆಸರಿನ ಪಾತ್ರ ಮಾಡಿದ್ದಾರೆ. ಹಿರಿಯ ನಟಿ ಶ್ರುತಿ ಅವರು ಸಾಯಿರಾ ಭಾನು ಎನ್ನುವ ಮುಸ್ಲಿಂ ಮಹಿಳೆಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಪ್ರಮೋದ್ ಶೆಟ್ಟಿ ಅವರು ‌ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದಾರೆ.

‘ಪಲ್ಲಕ್ಕಿ’ ಸಿನಿಮಾ ಖ್ಯಾತಿಯ ನಿರ್ದೇಶಕ ನರೇಂದ್ರ ಬಾಬು ಈ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ. ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಸಮಾಜಸೇವಕ ಅನಿಲ್ ಕುಮಾರ್ ಅರ್ಪಿಸುವ ಈ ಸಿನಿಮಾವನ್ನು ‘ಯುವಿ ಪ್ರೊಡಕ್ಷನ್ಸ್’ ಬ್ಯಾನರ್​ ಮೂಲಕ ಮಂಜುನಾಥ್ ಗೌಡ, ಕೆ. ಸಂಪತ್ ಕುಮಾರ್, ಹೆಚ್.ಎಸ್. ಮಂಜುನಾಥ್, ಸಿ. ಕೇಶವಮೂರ್ತಿ ನಿರ್ಮಿಸಿದ್ದಾರೆ.

ಸಿನಿಮಾದಲ್ಲಿ ಐಟಂ ಸಾಂಗ್, ಮದ್ಯಪಾನದ ದೃಶ್ಯಗಳು ಇರುವುದರಿಂದ ಈ ಚಿತ್ರಕ್ಕೆ ‘ಯು/ಎ’ ಪ್ರಮಾಣ ಪತ್ರ ನೀಡಲಾಗಿದೆ. ಶೋಗನ್‌ಬಾಬು ಸಂಗೀತ ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ಮೂರು ಹಾಡುಗಳಿವೆ.

ಅಜಯ್ ಮಂಜು ಛಾಯಾಗ್ರಹಣ, ಗಿರೀಶ್ ಕುಮಾರ್ ಸಂಕಲನ ಕೆಲಸ ನಿಭಾಯಿಸಿದ್ದಾರೆ. ಮದನ್ ಹರಿಣಿ, ಶಶಿಕುಮಾರ್ ಡ್ಯಾನ್ಸ್​ ಕೊರಿಯೋಗ್ರಫಿ ಮಾಡಿದ್ದಾರೆ. ಜಯಸಿಂಹ ಸಂಭಾಷಣೆ ಬರೆದಿದ್ದಾರೆ.

‘ಕಾಮಿಡಿ ಕಿಲಾಡಿಗಳು’ ಲೋಕೇಶ್, ವಿನಯ ಸೂರ್ಯ, ದಿಲೀಪ್ ಪೈ ಮುಂತಾದವರು ಅಭಿನಯಿಸಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!