pavithra lokesh: ಟಿವಿಯಲ್ಲಿ ಬರಲಿದೆ ಮಳ್ಳಿ ಪೆಳ್ಳಿ

ಜನಪ್ರಿಯ ಟಿವಿ ಚಾನೆಲ್ ಸ್ಟಾರ್ ಮಾದಲ್ಲಿ ಮಳ್ಳಿ ಪೆಳ್ಳಿ ಸಿನಿಮಾ ಇದೇ ಭಾನುವಾರ ಮಧ್ಯಾಹ್ನ 1 ಗಂಟೆಗೆ ಪ್ರಸಾರವಾಗಲಿದೆ.

ಹಿರಿಯ ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ನಟನೆಯ ಫ್ಯಾಮಿಲಿ ಎಂಟರ್ಟೈನರ್ ಮಳ್ಳಿ ಪೆಳ್ಳಿ ಚಿತ್ರವನ್ನು ಎಂಎಸ್ ರಾಜು ನಿರ್ದೇಶಿಸಿದ್ದಾರೆ. ಜನಪ್ರಿಯ OTT ಚಾನೆಲ್ ಆಹಾದಲ್ಲಿ ಇದು ಈಗಾಗಲೇ ಸ್ಟ್ರೀಮ್ ಆಗುತ್ತಿದೆ.

ನರೇಶ್ ಮತ್ತು ಪವಿತ್ರಾ ಲೋಕೇಶ್ ಕಳೆದ ಕೆಲವು ವರ್ಷಗಳಿಂದ ಲಿವಿಂಗ್ ಟು ಗೆದರ್ ರಿಲೇಶನ್ ಶಿಪ್ ನಲ್ಲಿ ಇದ್ದಾರೆ. ನರೇಶ್ ತಮ್ಮ ಜೀವನದಲ್ಲಿ ನಡೆದ ಕೆಲವು ನೈಜ ಘಟನೆಗಳಿಂದ ಸ್ಪೂರ್ತಿ ಪಡೆದು ‘ಮಲ್ಲಿ ಪೆಳ್ಳಿ’ ಸಿನಿಮಾ ಮಾಡಿದ್ದಾರೆ.

ವಿಜಯ ಕೃಷ್ಣ ಮೂವೀಸ್ ಅಡಿಯಲ್ಲಿ ನರೇಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನರೇಶ್ ಜೊತೆಗೆ ಪವಿತ್ರಾ ಲೋಕೇಶ್, ಜಯಸುಧಾ, ಶರತ್ ಬಾಬು, ವನಿತಾ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಷನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮೂರಿ, ಮಧು ಮುಂತಾದವರು ನಟಿಸಿದ್ದಾರೆ.

ಚಿತ್ರಕ್ಕೆ ಸುರೇಶ್ ಬೊಬ್ಬಿಲಿ ಮತ್ತು ಅರುಳ್ ದೇವ್ ಸಂಗೀತ ಸಂಯೋಜಿಸಿದ್ದಾರೆ. ಇತ್ತೀಚೆಗೆ ನಿಧನರಾದ ಹಿರಿಯ ನಟ ಶರತ್ ಬಾಬು ಕೊನೆಯ ಬಾರಿಗೆ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!