ರಾಮಾಚಾರಿ ಧಾರಾವಾಹಿಯ ಈ ನಟಿಗೆ ಬಂತು ಬಿಗ್ ಆಫರ್​ ; ‘ವಸಂತಕಾಲದ ಹೂಗಳು’ ಚಿತ್ರಕ್ಕೆ ಈಕೆ ನಾಯಕಿ!

ಜನಪ್ರಿಯ “ರಾಮಾಚಾರಿ” ಧಾರವಾಹಿಯಲ್ಲಿ ನಾಯಕನ ತಂಗಿಯ ಪಾತ್ರದಲ್ಲಿ ಗುರುತಿಸಿಕೊಂಡಿರುವ ರಾಧಾ ಭಗವತಿ , ಈಗ ಸಚಿನ್ ಶೆಟ್ಟಿ ನಿರ್ದೇಶಿಸುತ್ತಿರುವ “ವಸಂತಕಾಲದ ಹೂಗಳು” ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಬಿಜಾಪುರ ಮೂಲದವರಾದ ರಾಧಾ ಭಗವತಿ ಅವರು, ಟೀನೇಜ್ ಪ್ರೇಮಕಥೆ ಹೊಂದಿರುವ ಈ ಚಿತ್ರದಲ್ಲಿ ಸುಮಾ ಎಂಬ ಹೆಸರಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ಚಿತ್ರದ ಹೆಸರೇ ನನಗೆ ಆಪ್ತವೆನಿಸಿತು. ಇನ್ನು ಕಥೆ ಕೇಳಿದಾಗಲಂತೂ ಮೂರ್ನಾಲ್ಕು ದಿನಗಳ ಕಾಲ ಆ ಗುಂಗಿನಲ್ಲೇ ಇದ್ದೆ. ಖಂಡಿತ ಚಿತ್ರ ನೋಡಿದವರಿಗೆಲ್ಲ ತಮ್ಮ ಕಾಲೇಜು ದಿನಗಳ ನೆನಪು ಮರುಕಳಿಸದೇ ಇರದು. ನಟನೆಗೆ ಹೆಚ್ಚು ಅವಕಾಶ ಇರುವಂತ ಪಾತ್ರ ಸಿಕ್ಕಿದ್ದಕ್ಕೆ ಖುಷಿಯಿದೆ. ಸಿನಿಪ್ರಿಯರ ಪ್ರತಿಕ್ರಿಯೆಗೆ ಕಾತರದಿಂದ ಎದುರು ನೋಡುತ್ತಿದ್ದೇನೆ’ ಎನ್ನುತ್ತಾರೆ ರಾಧಾ ಭಗವತಿ.

Be the first to comment

Leave a Reply

Your email address will not be published. Required fields are marked *

Translate »
error: Content is protected !!