Toby: ಸೆ.22ಕ್ಕೆ ಮಲಯಾಳಂ ‘ಟೋಬಿ’ ರಿಲೀಸ್

ರಾಜ್ ಬಿ ಶೆಟ್ಟಿ ನಟನೆಯ ‘ಟೋಬಿ’ ಮಲಯಾಳಂನಲ್ಲಿ ಸೆ.22ಕ್ಕೆ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿದೆ.

ಸ್ಯಾಂಡಲ್‌ವುಡ್ ಅಂಗಳದಲ್ಲಿ ‘ಟೋಬಿ’ ಸಿನಿಮಾ ಗೆದ್ದು ಬೀಗಿದೆ. ಈಗ ಮಲಯಾಳಂ ಭಾಷೆಯಲ್ಲೂ ಕೂಡ ಟೋಬಿ ಸಿನಿಮಾ ರಿಲೀಸ್ ಆಗುತ್ತಿದೆ. ಆಗಸ್ಟ್ 25ರಂದು ನೈಜ ಕಥೆಯನ್ನ ಆಧರಿಸಿದ ‘ಟೋಬಿ’ ಸಿನಿಮಾ ತೆರೆ ಕಂಡಿತ್ತು. ರಾಜ್- ಚೈತ್ರಾ ಆಚಾರ್ ಕಾಂಬೋ ಮೋಡಿ ಮಾಡಿ  ಸಿನಿಮಾ ಗೆದ್ದು ಬೀಗಿದೆ. ಮಾಲಿವುಡ್‌ನಲ್ಲಿ ಅಬ್ಬರಿಸಲು ಸಿನಿಮಾ ಸಜ್ಜಾಗಿದೆ.

ರಾಜ್ ಬಿ ಶೆಟ್ಟಿ ಮಾತು ಬಾರದ ವ್ಯಕ್ತಿಯಾಗಿ ಸಿನಿಮಾದಲ್ಲಿ ಜೀವ ತುಂಬಿದ್ದಾರೆ. ಸಿನಿಮಾದಲ್ಲಿ ಅವರಿಗೆ ಡೈಲಾಗ್ ಇಲ್ಲ, ಆದರೆ ಅವರ ನಟನೆಯೇ ಮಾತನಾಡುವಂತೆ ಮಾಡಿದೆ. ನಾಯಕಿ ಚೈತ್ರಾ ಆಚಾರ್ ಅವರು ಉತ್ತಮವಾಗಿ ನಟಿಸಿ ಗಮನ ಸೆಳೆದಿದ್ದಾರೆ.

ಕನ್ನಡದಲ್ಲಿ ಹಿಟ್ ಎನಿಸಿರುವ ಈ ಚಿತ್ರ ಮಲಯಾಳಂನಲ್ಲಿ ಯಾವ ರೀತಿ ಪ್ರತಿಕ್ರಿಯೆ ಪಡೆಯುತ್ತದೆ ಎಂದು ಕಾದು ನೋಡಬೇಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!