ಫೈಟರ್ ತಂಡದಿಂದ ಭರ್ಜರಿ ಫೈಟಿಂಗ್ ಕಂಪೋಸ್!

ವಿನೋದ್ ಪ್ರಭಾಕರ್ ನಾಯಕ ನಟನಾಗಿ ನಟಿಸಿರುವ ಫೈಟರ್ ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣ ಭರ್ಜರಿಯಾಗಿ ಚಿತ್ರದುರ್ಗದ ಕೋಟೆಯಲ್ಲಿ ನಡೆದಿದೆ.

ಚಿತ್ರದ ಒಂದು ಆಕ್ಷನ್ ಸೀನ್ ಶೂಟ್ ಮಾಡಲು ಚಿತ್ರತಂಡ 5 ದಿನಗಳ ಕಾಲ ಚಿತ್ರದುರ್ಗದ ಕೋಟೆಯ ಒಳಗಡೆ ಶ್ರಮವಹಿಸಿ ಕೆಲಸ ಮಾಡಿದೆ. ಸಾಮಾನ್ಯವಾಗಿ ಕೋಟೆ ಒಳಗಡೆ ಆಕ್ಷನ್ ಸೀನ್ ಮಾಡಲು ಅನುಮತಿ ನೀಡುವುದಿಲ್ಲ. ಆದರೆ ನಿರ್ಮಾಪಕರು ಶ್ರಮಪಟ್ಟು ಪರ್ಮಿಷನ್ ಪಡೆದುಕೊಂಡು ಕೋಟೆಯ ಒಳಗಡೆ ಚಿತ್ರೀಕರಣ ಮಾಡುವ ಸಾಹಸಕ್ಕೆ ಮುಂದಾಗಿದ್ದಾರೆ.

ಫೈಟರ್ ಚಿತ್ರದಲ್ಲಿ ಒಟ್ಟು ಐದು ಆಕ್ಷನ್ ದೃಶ್ಯಗಳಿವೆ. ಸಾಹಸ ದೃಶ್ಯ ಪ್ರಧಾನ ಆಗಿರುವ ಈ ಚಿತ್ರದಲ್ಲಿ ಆಕ್ಷನ್ ಸೀನ್ ಒಂದಕ್ಕೆ ಕೋಟೆಯ ಒಳಗಡೆ ಚಿಮ್ಮಿ ಜಿಪ್, ಕ್ಯಾಮರಾ, ಕ್ರೇನ್ ಈ ರೀತಿಯ ದೊಡ್ಡ ಇಕ್ಯುಪ್ಮೆಂಟ್ ಎತ್ತಿಕೊಂಡು ಸಾಕಷ್ಟು ಶ್ರಮವಹಿಸಿ ಐದು ದಿನಗಳ ಕಾಲ ಚಿತ್ರಿಕರಣ ಮಾಡಲಾಗಿದೆ. ಥ್ರಿಲ್ಲರ್ ಮಂಜು ಅವರು ಸಾಹಸ ದೃಶ್ಯ ಕಂಪೋಸ್ ಮಾಡಿದ್ದು ಈ ಸಂದರ್ಭದಲ್ಲಿ ಕೆಲ ಫೈಟರ್ ಗಳಿಗೆ ಚಿಕ್ಕ ಪ್ರಮಾಣದ ಏಟು ಕೂಡ ಆಗಿದೆ. ಸಾಹಸ ದೃಶ್ಯದಲ್ಲಿ ವಿನೋದ್ ಪ್ರಭಾಕರ್ ಜೊತೆಗೆ ಶರತ್ ಲೋಹಿತಾಶ್ವ ಹಾಗೂ ಫೈಟರ್ಸ್ ಗಳು ಭಾಗವಹಿಸಿದ್ದರು.

ಫೈಟರ್ ಚಿತ್ರಕ್ಕೆ ನೂತನ್ ಉಮೇಶ್ ಅವರು ನಿರ್ದೇಶನ ಮಾಡಿದ್ದಾರೆ. ಆಕಾಶ್ ಎಂಟರ್ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಸೋಮಶೇಖರ್ ಕೊಟ್ಟಿಗೆನಹಳ್ಳಿ ಅವರು ಚಿತ್ರ ನಿರ್ಮಾಣ ಮಾಡಿದ್ದಾರೆ. ಸಾಮಾಜಿಕ ಒಳಿತಿಗಾಗಿ ನಾಯಕ ಸಮಾಜದ ಸಮಸ್ಯೆಗಳ ವಿರುದ್ಧ ಯಾವ ರೀತಿ ಹೋರಾಡುತ್ತಾನೆ ಎನ್ನುವುದು ಫೈಟರ್ ಚಿತ್ರದ ಕಥೆ ಆಗಿದೆ.

ಈಗಾಗಲೇ ಚಿತ್ರದ ಟೀಸರ್ ಬಿಡುಗಡೆ ಆಗಿದ್ದು, ಎರಡು ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಪಡೆಯುವ ಮೂಲಕ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೆಪ್ಟೆಂಬರ್ 13ರಂದು ಫೈಟರ್ ಚಿತ್ರದ ಡ್ಯುಯೆಟ್ ಹಾಡು ಬಿಡುಗಡೆ ಆಗುತ್ತಿದೆ ಎಂದು ನಿರ್ದೇಶಕ ನೂತನ್ ಉಮೇಶ್ ಹೇಳಿದ್ದಾರೆ.

ಅಕ್ಟೋಬರ್ ತಿಂಗಳಿನಲ್ಲಿ ಫೈಟರ್ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ. ಮುಂದಿನ ಕೆಲ ದಿನಗಳಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಆಗುವ ನಿರೀಕ್ಷೆ ಇದೆ.

ಚಿತ್ರವನ್ನು ಚಿತ್ರದುರ್ಗ ಅಲ್ಲದೆ ಪಾಂಡಿಚೇರಿ, ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ 65 ದಿನಗಳ ಕಾಲ ಚಿತ್ರಿಕರಣ ಮಾಡಲಾಗಿದೆ. ವಿನೋದ್ ಪ್ರಭಾಕರ್ ಅವರಿಗೆ ನಾಯಕಿಯಾಗಿ ಲೇಖಚಂದ್ರ ಹಾಗೂ ಪಾವನ ಗೌಡ ಅವರು ಕಾಣಿಸಿಕೊಂಡಿದ್ದಾರೆ. ನಾಯಕನ ತಾಯಿಯ ಪಾತ್ರದಲ್ಲಿ ಹಿರಿಯ ನಟಿ ನಿರೋಷ ಅವರು ನಟಿಸಿದ್ದಾರೆ.

ಗಿರಿಜಾ ಲೋಕೇಶ್, ಜಹಾಂಗೀರ್, ಚಲುವರಾಜ್, ಕುರಿ ಪ್ರತಾಪ್ ಸೇರಿದಂತೆ ಪ್ರಮುಖ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.

ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ಗುರುಕಿರಣ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಶೇಖರ್ ಚಂದ್ರು ಅವರು ಕ್ಯಾಮರಾ ಕೆಲಸ ಮಾಡಿದ್ದಾರೆ.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!