ಲೇಖಕ, ಕಾದಂಬರಿಗಾರನಾಗಿ ಎದುರಿಸುವ ಸವಾಲನ್ನು ಮುಂದಿಟ್ಟುಕೊಂಡು ನಿರ್ದೇಶಕ ಸುಹಾಸ್ ಕೃಷ್ಣ ಹೆಣೆದಿರುವ ಸಿನಿಮಾ ‘ಕದ್ದ ಚಿತ್ರ’. ಕೃತಿಚೌರ್ಯದ ಕುರಿತು ಇದುವರೆಗೆ ಕನ್ನಡದಲ್ಲಿ ಯಾವುದೇ ಸಿನಿಮಾ ಬಂದಿಲ್ಲದ ಕಾರಣ ಈ ಸಿನಿಮಾ ಹೊಸತನದ ಮೂಲಕ ಗಮನ ಸೆಳೆಯುತ್ತದೆ.
ಸಿನಿಮಾದಲ್ಲಿ ವಿಜಯ ರಾಘವೇಂದ್ರ ಬರಹಗಾರ ಆಗಿ ಕಾಣಿಸಿಕೊಂಡಿದ್ದಾರೆ. ವಿಜಯ ರಾಘವೇಂದ್ರ ಬರೆದ ಒಂದು ಪುಸ್ತಕ ಕದ್ದಿದ್ದು ಅಂತ ದೊಡ್ಡ ಸುದ್ದಿಯಾದ ಬಳಿಕ ತೆಗೆದುಕೊಳ್ಳುವ ಟ್ವಿಸ್ಟ್ ಸಿನಿಮಾದ ಕಥೆ ಆಗಿದೆ.
ವಿಜಯ ರಾಘವೇಂದ್ರ ಇಡೀ ಸಿನಿಮಾವನ್ನು ಆವರಿಸಿಕೊಂಡಿರುವುದು ಎದ್ದು ಕಾಣುತ್ತದೆ. ಮೊದಲ ಬಾರಿಗೆ ಇಂಥ ಪಾತ್ರದಲ್ಲಿ ವಿಜಯ ರಾಘವೇಂದ್ರ ಕಾಣಿಸಿಕೊಂಡಿದ್ದಾರೆ ಇದು ಅವರಿಗೆ ಬ್ರೇಕ್ ನೀಡುತ್ತದೆಯೇ ಎನ್ನುವುದು ಕಾದು ನೋಡಬೇಕಿದೆ. ನಾಯಕಿಯಾಗಿ ನಮ್ರತಾ ಸುರೇಂದ್ರನಾಥ್ ಗಮನ ಸೆಳೆಯುತ್ತಾರೆ.
ನಿರ್ದೇಶಕ ಸುಹಾಸ್ ಕೃಷ್ಣ ತಮ್ಮ ಚೊಚ್ಚಲ ಪ್ರಯತ್ನದಲ್ಲಿ ಎಕ್ಸ್‌ಪರಿಮೆಂಟ್ ಮಾಡಲು ಮುಂದಾಗಿದ್ದಾರೆ. ಚಿತ್ರಕತೆ ಇನ್ನಷ್ಟು ಚುರುಕಾಗಿದ್ದರೆ ಒಳ್ಳೆಯದಿತ್ತು ಎಂದು ಪ್ರೇಕ್ಷಕರಿಗೆ ಕೆಲವೊಮ್ಮೆ ಅನಿಸುತ್ತದೆ. ಹಿನ್ನೆಲೆ ಸಂಗೀತ ಹೈಲೈಟ್ ಆಗಿದ್ದು, ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತದೆ. ಕ್ರೇಜಿ ಮೈಂಡ್ಸ್ ಕ್ಯಾಮಾರಾ ವರ್ಕ್ ಅದ್ಭುತ ಎನಿಸುತ್ತದೆ.
ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಿಧನದ ಬಳಿಕ ‘ಕದ್ದ ಚಿತ್ರ’ ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಮೇಲೆ ಸ್ಪಂದನಾ ತುಂಬಾ ನಂಬಿಕೆ ಇಟ್ಟುಕೊಂಡಿದ್ದರು. ಈ ಕಾರಣದಿಂದ ವಿಜಯ ರಾಘವೇಂದ್ರ ಅವರಿಗೂ ಇದು ಭಾವನಾತ್ಮಕವಾಗಿ ಬಹುಮುಖ್ಯ ಚಿತ್ರ ಎನಿಸಿದೆ.
ಹಾಸ್ಯ ದೃಶ್ಯಗಳ ಕೊರತೆಯ ಜೊತೆಗೆ ಎಡಿಟಿಂಗ್ ಬಿಗಿ ಆಗಿದ್ದಲ್ಲಿ ಚಿತ್ರ ಇನ್ನಷ್ಟು ಚೆನ್ನಾಗಿರುತ್ತಿತ್ತು ಎಂದು ಪ್ರೇಕ್ಷಕನಿಗೆ ಅನಿಸಿದರೆ ಸುಳ್ಳಲ್ಲ.
____
Be the first to comment