ನಿರ್ದೇಶಕ ವಿಜಯ್ ಕುಮಾರ್ ಪುತ್ರ ಅಥರ್ವ್ ನಾಯಕನಾಗಿ ನಟಿಸಿರುವ “ಟೇಲ್ಸ್ ಆಫ್ ಮಹಾನಗರ” ಚಿತ್ರ ಸೆ. 15 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಅಥರ್ವ್ ಹಾಗೂ ನಿರ್ದೇಶಕ ಕಿರಣ್ ಈ ಚಿತ್ರದ ಕಥೆ ಸಿದ್ದ ಮಾಡಿಕೊಂಡು ನಿರ್ಮಾಪಕರ ಹುಡುಕಾಟದಲ್ಲಿದ್ದರು. ಕಥೆ ಇಷ್ಟವಾಗಿ ನಾನೇ ನಿರ್ಮಾಣಕ್ಕೆ ಮುಂದಾದೆ. ಕಿಚ್ಚ ಸುದೀಪ್ ಈ ಚಿತ್ರದ ಟೀಸರ್ ಗೆ ಧ್ವನಿ ನೀಡಿ ಪ್ರೋತ್ಸಾಹಿಸಿದ್ದಾರೆ. ಧರ್ಮೇಂದ್ರ ಎಂ ರಾವ್ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಟ್ರೇಲರ್ ಬಿಡುಗಡೆಯಾಗಿದ್ದು,ಜನಮನ್ನಣೆ ಪಡೆಯುತ್ತಿದೆ. ಚಿತ್ರ ಸೆಪ್ಟೆಂಬರ್ 15 ತೆರೆಗೆ ಬರುತ್ತಿದೆ ಎಂದು ನಿರ್ಮಾಪಕ ಗೆಜ್ಜೆನಾದ ವಿಜಯ್ ಕುಮಾರ್ ಹೇಳಿದ್ದಾರೆ.
ಈ ಚಿತ್ರದ ಮೊದಲಾರ್ಧ ಮೂರು ಬೇರೆ ಕಥೆಗಳ ಸುತ್ತ ಸಾಗುತ್ತದೆ. ದ್ವಿತೀಯಾರ್ಧದಲ್ಲಿ ಮೂರು ಕಥೆಗಳು ಒಂದೇ ಆಗುತ್ತದೆ. ನಾನು ಅಪ್ಪನ ಕೈಯಲ್ಲಿ ದುಡ್ಡು ಹಾಕಿಸುವುದು ಬೇಡ. ನಾನೇ ನಿರ್ಮಾಪಕರನ್ನು ಹುಡುಕುತ್ತೇನೆ ಅಂದಿದ್ದೆ. ಆದರೆ ಅದು ಆಗಲಿಲ್ಲ ಅಪ್ಪನೇ ನಿರ್ಮಾಪಕರಾದರು ಎಂದು ಅಥರ್ವ್ ತಿಳಿಸಿದ್ದಾರೆ.
ನಾನು ಎಂಜಿನಿಯರ್ ವಿದ್ಯಾರ್ಥಿ ಆಗಿದ್ದು, ಸಿನಿಮಾ ಮಾಡುವುದು ನನ್ನ ಕನಸು ಆಗಿತ್ತು. ಅದು ಈಗ ಈಡೇರಿದೆ ಎಂದು ನಿರ್ದೇಶಕ ಕಿರಣ್ ವೆನಿಯಲ್ ಹೇಳಿದ್ದಾರೆ.
ನಾಯಕಿ ಆಗಿ ರೆಮೋಲ ಕಾಣಿಸಿಕೊಂಡಿದ್ದಾರೆ. ಆರ್ ಜೆ ಅನೂಪ ಹಾಗೂ ನಾಗರಾಜ್ ನಟಿಸಿದ್ದಾರೆ.
ಸಂಕಲನ ಪ್ರದೀಪ್ ಗೋಪಾಲ್, ಸಂಗೀತ ನಿರ್ದೇಶನ ಸಿದ್ದಾರ್ಥ್ ಪರಾಶರ್ ಅವರದ್ದು ಆಗಿದೆ.
Be the first to comment