‘ಗೋಲ್ಡನ್ ಸ್ಟಾರ್’ ಗಣೇಶ್ ನಟನೆಯ ‘ಬಾನದಾರಿಯಲ್ಲಿ’ ಚಿತ್ರ ಸೆ.28ರಂದು ಬಿಡುಗಡೆ ಆಗಲಿದೆ.
ಸೆಪ್ಟೆಂಬರ್ 28 ರಂದು ಟಾಲಿವುಡ್ ಸ್ಟಾರ್ ಪ್ರಭಾಸ್ ಅಭಿನಯದ ಸಲಾರ್ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆಚಿತ್ರದ ದಿನಾಂಕ ಮುಂದೂಡಿಕೆಯಾಗಿದೆ. ಇದರ ಲಾಭ ಪಡೆಯಲು ಮುಂದಾಗಿರುವ ಬಾನದಾರಿಯಲ್ಲಿ ಚಿತ್ರತಂಡ ಸೆ.28ರಂದು ಚಿತ್ರ ಬಿಡುಗಡೆಗೆ ಮುಂದಾಗಿದೆ.
ಬಾನದಾರಿಯಲ್ಲಿ ಗಣೇಶ್ ಕ್ರಿಕೆಟಿಗನಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯರಾಗಿ ರುಕ್ಮಿಣಿ ವಸಂತ್ ಮತ್ತು ರೀಷ್ಮಾ ನಾಣಯ್ಯ ನಟಿಸಿದ್ದಾರೆ.
ಈ ಚಿತ್ರ ಪ್ರೀತಂ ಗುಬ್ಬಿ ಅವರ ಜೊತೆ ಗಣೇಶ್ ಅವರ ನಾಲ್ಕನೇ ಚಿತ್ರವಾಗಿದೆ. ಪ್ರೀತಂ ಈ ಹಿಂದೆ ಮುಂಗಾರು ಮಳೆ ಸಿನಿಮಾದಲ್ಲಿ ಸಹ-ಬರಹಗಾರರಾಗಿ ಕೆಲಸ ಮಾಡಿದ್ದರು. ಬಳಿಕ ಅವರು ಗಣೇಶ್ ಅವರೊಂದಿಗೆ ಮಳೆಯಲಿ ಜೊತೆಯಲಿ, ದಿಲ್ ರಂಗೀಲಾ, ಮತ್ತು 99 ಚಿತ್ರಗಳನ್ನು ನಿರ್ದೇಶಿಸಿದ್ದರು.
ರೊಮ್ಯಾಂಟಿಕ್ ಚಿತ್ರವಾದ ಬಾನದಾರಿಯಲ್ಲಿ ಸಿನಿಮಾದ ಕಥೆಯನ್ನು ಸಿನಿಮಾಟೋಗ್ರಾಫರ್ ಪ್ರೀತಾ ಜಯರಾಮನ್ ಬರೆದಿದ್ದಾರೆ. ಪ್ರೀತಂ ಚಿತ್ರಕಥೆ ಇದೆ. ಅರ್ಜುನ್ ಜನ್ಯ ಅವರ ಸಂಗೀತ, ಅಭಿಲಾಷ್ ಕಲತಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ.
___

Be the first to comment