ನಟ ರಾಕೇಶ್ ಅಡಿಗ ಇದುವರೆಗೂ 13 ಚಿತ್ರಗಳಲ್ಲಿ ನಟಿಸಿದ್ದು ಅದರ ಅನುಭವದ ಆಧಾರದ ಮೇಲೆಯೇ ‘ನೈಟ್ಔಟ್ ‘ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಟನಾಗಿ ನಾನೊಂದು ಉತ್ತಮ ಚಿತ್ರವನ್ನು ನಿರ್ದೇಶಿಸಬೇಕೆಂದು ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ.ನೈಟ್ ಔಟ್ನಲ್ಲಿ ರಾಕೇಶ್ರೊಂದಿಗೆ ಭರತ್ ಹಾಗೂ ಶೃತಿ ಗೊರಾಡಿಯಾ ಅವರು ಪರದೆಯನ್ನು ಹೊಂಚಿಕೊಂಡಿದ್ದಾರೆ. ಮೊನ್ನೆ ಹಮ್ಮಿಕೊಂಡಿದ್ದ ನೈಟ್ಔಟ್ನ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ನಟ ಕಂ ನಿರ್ದೇಶಕ ರಾಕೇಶ್ ಅಡಿಗ, ಚಿತ್ರರಂಗಕ್ಕೆ ಎಂಟ್ರಿ ಆದಾಗಿನಿಂದಲೂ ಒಂದು ಚಿತ್ರವನ್ನು ನಿರ್ದೇಶಿಸಬೇಕೆಂದುಕೊಂಡಿದ್ದೆ ಅದು ಈ ಚಿತ್ರದ ಮೂಲಕ ಈಡೇರಿದೆ. ಶಾಲಾ ಹಾಗೂ ಕಾಲೇಜು ದಿನಗಳಲ್ಲಿ ರಂಗಭೂಮಿ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದು ಕೂಡ ಈಗ ನೆರವಿಗೆ ಬಂದಿದೆ ಎಂದರು.ನೈಟ್ಔಟ್ ಚಿತ್ರದ ಟೈಟಲ್ಲೇ ಸೂಚಿಸುವಂತೆ ಇದೊಂದು ಜರ್ನಿಯ ಕಥೆ. ಅದು ಕೇವಲ 6 ಗಂಟೆಗಳಲ್ಲೇ ನಡೆಯುವ ಕಥೆ. ಇಬ್ಬರು ಬಾಲ್ಯದ ಗೆಳೆಯರು ಆಟೋದಲ್ಲಿ ರಾತ್ರಿ ಹೊತ್ತು ಪ್ರಯಾಣ ಮಾಡುವಾಗ ಅವರ ಫ್ಲಾಶ್ಬ್ಯಾಕ್ ತೆರೆದುಕೊಳ್ಳುತ್ತದೆ, ಆ ಸ್ನೇಹಿತರು ಎಲ್ಲಿಗೆ ಹೋದರೂ, ಏತಕ್ಕಾಗಿ ಭೇಟಿಯಾದರೂ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡುತ್ತಾದರೂ ಯಾವುದೇ ದೃಶ್ಯವನ್ನೂ ಮೊದಲೇ ಊಹಿಸಲು ಅಸಾಧ್ಯ ಎಂದು ಹೇಳಿದರು.ಈ ಚಿತ್ರದ ನಾಯಕ ಭರತ್ ಮಾತನಾಡಿ ಮೊದಲ ಚಿತ್ರದಲ್ಲೇ ಆಟೋ ಚಾಲಕನಾಗಿ ನಾನು ಕಾಣಿಸಿಕೊಂಡಿರುವುದು ನನ್ನ ಪಾತ್ರದ ವಿಶೇಷ. ಈವರೆಗೆ ಸಣ್ಣ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಕ್ಷಯ್ ಇಲ್ಲಿ ಗೆಳೆಯನಾಗಿ ಮುಖ್ಯ ಪಾತ್ರ ಮಾಡಿದ್ದಾರೆ. ಹಳ್ಳಿಯಿಂದ ಬೆಂಗಳೂರಿಗೆ ಓದಲು ಬರುವ ಹುಡುಗಿಯಾಗಿ ನಾಯಕಿ ಶೃತಿ ಗೊರಾಡಿಯಾ ಕಾಣಿಸಿಕೊಂಡಿದ್ದಾರೆ.
ಬೆಂಗಳೂರು, ಹೆಸರು ಘಟ್ಟ ಮತ್ತು ಕನಕಪುರ ರಸ್ತೆಗಳಲ್ಲಿ ನೈಟೌಟ್ ಚಿತ್ರಕ್ಕೆ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಅವುಗಳಿಗೆ ಸಮೀರ್ ಕುಲಕರ್ಣಿ ರಾಗ ತಾಳ ಒದಗಿಸಿದ್ದಾರೆ. ಚಿತ್ರದ ಛಾಯಗ್ರಹಣವನ್ನು ಅರುಣ್.ಕೆ. ಅಲೆಕ್ಸಾಂಡರ್ ನಿರ್ವಹಿಸಿದ್ದಾರೆ. ಚಿತ್ರದ ಸಂಕಲನವನ್ನು ರಿತ್ವಿಕ್, ನೃತ್ಯ ನಿರ್ದೇಶನವನ್ನು ಭಾರ್ಗವ ನಿರ್ವಹಿಸಿದ್ದಾರೆ. ಅಮೇರಿಕಾ ನಿವಾಸಿ ಹಾಗೂ ಕನ್ನಡಿಗರಾದ ನವೀನ್ ಕೃಷ್ಣ-ಲಕ್ಷೀ ನವೀನ್ ರಾಕೇಶ್ ಮೇಲಿನ ನಂಬಿಕೆಯಿಂದ ಚಿತ್ರಕ್ಕೆ ಹಣ ಹೂಡಿದ್ದಾರೆ. ಸದ್ಯ ಚಿತ್ರದ ಚಿತ್ರೀಕರಣೊತ್ತರ ಕೆಲಸಗಳು ನಡೆಯುತ್ತಿದ್ದು, ಬರುವ ಫೆಬ್ರವರಿಯಲ್ಲಿ ಚಿತ್ರವನ್ನು ಜನರಿಗೆ ತೋರಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಜೋಶ್ ನಿರ್ದೇಶಕ ರಾಕೇಶ್ ಅಡಿಗ ಅವರು ನಿರ್ದೇಶಿಸಿರುವ ನೈಟ್ಔಟ್ ಚಿತ್ರವು ಯಶಸ್ಸಾಗುವ ಮೂಲಕ ಚಿತ್ರರಂಗಕ್ಕೆ ಒಬ್ಬ ಉತ್ತಮ ಯುವ ನಿರ್ದೇಶಕ ದೊರೆಯುವಂತಾಗಲಿ.
Pingback: apa saja pekerjaan cpns
Pingback: realistic sex doll porn