ನಿರ್ದೇಶಕ ಪರಶುರಾಂ ಅವರು ಈ ಚಿತ್ರವನ್ನು ಥ್ರಿಲ್ಲರ್ ರೀತಿಯಲ್ಲಿ ಹೇಳಲು ಹೊರಟಿದ್ದಾರೆ. ಮೊನ್ನೆ ಈ ಚಿತ್ರದ ಫಸ್ಟ್ಲುಕ್ ಹಾಗೂ ಟೀಸರ್ ಅನಾವರಣವನ್ನು ಮಾಡಲಾಯಿತು. ಅನಾಮಿಕ ವ್ಯಕ್ತಿಯೊಬ್ಬ ಈ ದೇಶಕ್ಕೆ ಬೇಕಾಗಿರುವ ಇಮ್ಮೋರ್ಟಲ್ ಐಡಿಯಾಗಳು ಲಾಕ್ ಆಗಿರುವ ಬಗ್ಗೆ ಈ ದೇಶದ ಮಣ್ಣಲ್ಲಿ ಮುಚ್ಚಿ ಹೋಗಿರುವ ಅನೇಕ ಕಥೆಗಳಲ್ಲಿ ತುಂಬಾ ಅವಶ್ಯಕತೆಯಿರುವ ಒಂದು ಘಟನೆಯನ್ನು ಈ ಚಿತ್ರದಲ್ಲಿ ಹೇಳಲಾಗಿದೆ.
ನಿರ್ದೇಶಕ ಪರಶುರಾಂ ಮಾತಾನಡಿ, ಲಾಕ್ ಏನೆಂದರೆ ಏನೋ ಒಂದು ವಸ್ತು ಅಥವಾ ವ್ಯಕ್ತಿ ಬಂಧಿಯಾದ ಎನ್ನುತ್ತಾರೆ, ಭದ್ರತೆಗಾಗಿ ಲಾಕ್ ಬಳಸುತ್ತೇವೆ, ಹೀಗೆ ಲಾಕ್ಗೆ ಹಲವು ಅರ್ಥಗಳಿವೆ. ಈ ಚಿತ್ರದಲ್ಲಿ ಕೂಡ ಒಂದು ಡಿಫರೆಂಟ್ ಕಾನ್ಸೆಪ್ಟ್ ಇದೆ.ಸುಭಾಷ್ ಚಂದ್ರಬೋಸ್ ಅವರು ಅಂದುಕೊಂಡಿದ್ದ ಸಾಮಾಜಿಕ ಸಂದೇಶವನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇವೆ. ಚಿತ್ರದಲ್ಲಿ ಶೇ.15 ರಷ್ಟು ನೇತಾಜಿಯವರ ಕಾನ್ಸೆಪ್ಟ್ ಇದ್ದರೆ ಶೇ.85 ರಷ್ಟು ಕಮರ್ಷಿಯಲ್ ಕಥೆ ಇದೆ ಎಂದು ಹೇಳಿದರು.
ಚಿತ್ರಕ್ಕೆ ಹಿನ್ನೆಲೆ ಸಂಗೀತ ಒದಗಿಸಿರುವ ವಿ.ರಾಘವೇಂದ್ರ ಮಾತನಾಡಿ, ಲಾಕ್ ಚಿತ್ರಕ್ಕೆ ಹಿನ್ನಲೆ ಸಂಗೀತವೇ ಜೀವಾಳ, ಥ್ರಿಲ್ಲರ್ ಹಾದಿಯಲ್ಲಿ ಸಾಗುವ ಈ ಚಿತ್ರದಲ್ಲಿ ಒಂದು ವಸ್ತುವನ್ನು ಹುಡುಕಿಕೊಂಡು ಹಲವಾರು ಪಾತ್ರಗಳು ಬರುತ್ತವೆ, ಅವರು ಹುಡುಕುವ ವಸ್ತು ಯಾವುದು, ಅದು ಎಲ್ಲಿರುತ್ತದೆ ಎಂಬುದೇ ಚಿತ್ರದ ಸಸ್ಪೆನ್ಸ್.ಇಡೀ ಸಿನಿಮಾದಲ್ಲಿ ಒಂದು ವಾಯ್ಸ್ ಓವರ್ ಕ್ಯಾರಿ ಆಗುತ್ತದೆ ಎಂದು ಹೇಳಿದರು.
ಹಿರಿಯ ನಟ ಎಂ.ಕೆ.ಮಠ ಮಾತನಾಡಿ, ನೂರಾರು ವರ್ಷಗಳ ಹಿಂದೆ ಗತಿಸಿಹೋದ ಈ ಮಣ್ಣಿನಲ್ಲಿ ಹುದುಗಿಹೋಗಿರುವ ಕಥೆಯನ್ನು ಹುಡುಕುವ ಪ್ರಯತ್ನವೇ ಈ ಚಿತ್ರದ ಕಥೆಯಾಗಿದೆ. ನಾನು ಕೂಡ ಲಾಕ್ನಲ್ಲಿ ಸಿಕ್ಕಿ ಹಾಕಿಕೊಂಡಿದ್ದೇನೆ. ಹೆಚ್ಚೇನೂ ಹೇಳಲಾರೆ ಎಂದು ಸುಮ್ಮನಾದರು.ಮತ್ತೊಬ್ಬ ನಟ ಅಭಿಲಾಷ್ ಮಾತನಾಡಿ, ನಾನು ಆಡಿಷನ್ ಮೂಲಕ ಈ ಚಿತ್ರಕ್ಕೆ ಸೆಲೆಕ್ಟ್ ಆದರೆ. ನಾನು ಕೂಡ ಹುಡುಕಾಟದಲ್ಲಿರುತ್ತೇನೆ ಎಂದು ಹೇಳಿದರು. ಅಶೋಕ್ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹಾಕಿ ನಿರ್ಮಾಣ ಮಾಡಿದ್ದಾರೆ.ಹಿರಿಯ ನಟ ಶಶಿಕುಮಾರ್ ಈ ಚಿತ್ರದಲ್ಲಿ ನೇತಾಜಿ ಸುಭಾಷ್ ಚಂದ್ರಬೋಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವಿನಾಶ್, ಶರತ್ ಲೋಹಿತಾಶ್ವ, ಎಂ.ಕೆ.ಮಠ ಹಾಗೂ ಯುವ ಕಲಾವಿದರಾದ ಅಭಿಲಾಷ್,ಸೌಂದರ್ಯ, ರಮೇಶ್ ರಾಜ್ ಹಿರೇಮಠ ಉಳಿದ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
Pingback: 주소모아