ಸ್ಯಾಂಡಲ್ ವುಡ್ ನ ತಾರೆಯರಾದ ಭುವನ್ ಹಾಗೂ ಹರ್ಷಿಕಾ ಹಸೆಮಣೆ ಏರಲು ಸಜ್ಜಾಗಿದ್ದು, ಇದೇ ಆಗಸ್ಟ್ 24ರಂದು ಅಮ್ಮತಿ ಕೊಡವ ಸಮಾಜದಲ್ಲಿ ಗುರುಹಿರಿಯರು , ಸಂಬಂಧಿಕರು , ಸ್ನೇಹಿತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸುಮಾರು 11 ವರ್ಷಗಳಿಂದ ತಮ್ಮ ಪ್ರೀತಿಯನ್ನು ಗುಟ್ಟಾಗಿಟ್ಟಿದ್ದ ಈ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ. ಆಗಸ್ಟ್ 23 ಮತ್ತು 24 ರಂದು ಕೂರ್ಗಿ ಸಂಪ್ರದಾಯದಂತೆ ಇವರ ಮದುವೆ ಕಾರ್ಯಕ್ರಮ ನಡೆಯಲಿದೆ, ಈ ವಿಷಯವನ್ನು ಮಾಧ್ಯಮ ಸ್ನೇಹಿತರ ಜೊತೆ ಹಂಚಿಕೊಳ್ಳಲು ಪತ್ರಿಕಾ ಗೋಷಿ ಕರೆದಿದ್ದು , ಬಹಳ ಮುಕ್ತ ಮನಸ್ಸಿನಿಂದ ಭುವನ್ ತನ್ನ ಬದುಕಿನ ಹಾಗೂ ಸಿನಿ ಪಯಣದ ವಿಚಾರವನ್ನು ಸುಧೀರ್ಘವಾಗಿ ಹಂಚಿಕೊಂಡರು. ಅದೇ ರೀತಿ ನಟಿ ಹರ್ಷಿಕ ಕೂಡ ಮಾತನಾಡುತ್ತಾ ತನ್ನ ಆರಂಭ ದಿನದಿಂದಲೂ ಚಿತ್ರರಂಗದಲ್ಲಿ ತನ್ನನ್ನು ಬೆಳೆಸುತ್ತಾ ಬಂದಿರುವ ಮಾಧ್ಯಮದವರ ಆಶೀರ್ವಾದವನ್ನು ಕೇಳಿ, ಮದುವೆಗೆ ಬರಲು ಆಮಂತ್ರಣವನ್ನು ನೀಡಿ , ತನ್ನ ಹಾಗೂ ಭುವನ್ ಕೆಲವು ಪ್ರೇಮ ಪ್ರಸಂಗಗಳನ್ನು ನೆನಪಿಸಿಕೊಳ್ಳುತ್ತಾ ಬಹಳ ಖುಷಿಯಿಂದ ಹೇಳುತ್ತಾ , ನಮ್ಮ ಕೊಡುವ ಸಮಾಜದ ಪದ್ಧತಿಯಂತೆ ಮದುವೆ ಆಗುತ್ತಿದ್ದೇವೆ. ಅದರಲ್ಲೂ ಸಿನಿಮಾ ನಟ ನಟಿಯರಾದ ನಾವಿಬ್ಬರೂ ಮದುವೆಯಾಗುತ್ತಿರುವುದು ಮತ್ತೊಂದು ವಿಶೇಷ ಎಂದು ಹೇಳುತ್ತಾ , ಮುಂದೆಯೂ ನಾನು ಸಿನಿಮಾ ಮಾಡುತ್ತೇನೆ ಎನ್ನುತ್ತಾ , ನಮ್ಮ ಮದುವೆಗೆ ಸಿನಿಮಾ ಕ್ಷೇತ್ರದವರು, ರಾಜಕೀಯ ಕ್ಷೇತ್ರದವರು, ಮಾಧ್ಯಮ ಮಿತ್ರರು ಸೇರಿದಂತೆ ಎಲ್ಲರನ್ನೂ ಕರೆದಿದ್ದೇವೆ. ನಾವು ಹೆಚ್ಚು ಹಣ ಸಂಪಾದನೆ ಮಾಡಿದ್ದರು ಜನರನ್ನು ಸಂಪಾದನೆ ಮಾಡಿದ್ದೇವೆ ಎಂದು ಹೇಳುತ್ತಾ , ನಮ್ಮ ಮದುವೆಗೆ ಎಲ್ಲರೂ ತಪ್ಪದೇ ಬನ್ನಿ ಎಂದು ಕರೆಯುವ ಜೊತೆಗೆ ತಮ್ಮ ನೂತನ ಬ್ಯಾನರ್ ಹಾಗೂ ಹೊಸ ಚಿತ್ರದ ಪೋಸ್ಟರ್ ಬಿಡುಗಡೆಯನ್ನು ಸಹ ಮಾಡಿದರು.
ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಜೋಡಿ ಭುವನಂ ಎಂಟರ್‌ಟೈನ್‌ಮೆಂಟ್ ಎಂಬ ಹೊಸ ಪ್ರೊಡಕ್ಷನ್ ಹೌಸ್ ಶುರು ಮಾಡಿದ್ದು, ಅದರ ಪ್ರಥಮ ಕಾಣಿಕೆಯಾಗಿ “ಭುವನಂ ಶ್ರೇಷ್ಠಮ್ ಗಚ್ಚಾಮಿ” ಚಿತ್ರವನ್ನು ನಿರ್ಮಿಸಲಿದ್ದಾರೆ. ಈ ಚಿತ್ರದ ಮೂಲಕ ನಟಿ ಹರ್ಷಿಕಾ ಪೂಣಚ್ಚ ಅವರು ನಿರ್ಮಾಪಕಿಯಾಗಿ ಬಡ್ತಿ ಪಡೆಯುತ್ತಿದ್ದಾರೆ.
“ಭುವನಂ ಶ್ರೇಷ್ಠಮ್ ಗಚ್ಚಾಮಿ” ಚಿತ್ರದ ನೂತನ ಪೋಸ್ಟರ್ ಬಿಡುಗಡೆ ಮಾಡುವುದರೊಂದಿಗೆ ಚಿತ್ರದ ಕುರಿತಂತೆ ನಾಯಕ, ನಿರ್ದೇಶಕ ಭವನ್ ಪೊನ್ನಣ್ಣ ಮಾಹಿತಿ ಹಂಚಿಕೊಂಡರು. ಬಾಕ್ಸಿಂಗ್ ಕುರಿತಾದ ಕತೆ ಹೊಂದಿರುವ ಈ ಚಿತ್ರದಲ್ಲಿ ಕನಸಿನ ಬೆನ್ನೇರಿ ಹೊರಟ ಹುಡುಗನಾಗಿ ಭುವನ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿರುತ್ತಾರೆ. ಈಗಾಗಲೇ ಚಿತ್ರದ ಸ್ಕ್ರಿಪ್ಟ್ ಕೆಲಸ ಮುಗಿದಿದ್ದು, ಸೆಟ್ಟೇರುವುದಷ್ಟೇ ಬಾಕಿಯಿದೆ. ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿಯನ್ನೂ ಭುವನ್ ಪೊನ್ನಣ್ಣ ಅವರೇ ಹೊತ್ತಿದ್ದಾರೆ. ಸದ್ಯ ಮದುವೆಯ ಸಂಭ್ರಮದಲ್ಲಿರುವ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಚಿತ್ರ ಆರಂಭಿಸುವ ವಿಚಾರವನ್ನು ಕೈಗೆತ್ತಿಕೊಳ್ಳಲಿದೆ. ಈ ಮುಗ್ಧ ಮನಸ್ಸಿನ ಜೋಡಿಗೆ ಶುಭವಾಗಲಿ ಎಂದು ಹಾರೈಸೋಣ.
Be the first to comment