‘ಮೈನಸ್ ತ್ರಿ ಪ್ಲಸ್ ಒನ್’ ಚಿತ್ರವು ತನ್ನ ವಿಭಿನ್ನ ಪೋಸ್ಟರ್ ಹಾಗೂ ಟೀಸರ್ ನಿಂದ ಗಮನ ಸೆಳೆದಿತ್ತು. ಈ ಚಿತ್ರದಲ್ಲಿ ‘ತಿಥಿ’ ಖ್ಯಾತಿಯ ಅಭಿ ನಾಯಕನಾಗಿದ್ದು, ಅದೇ ಚಿತ್ರದಲ್ಲಿ ನಟಿಸಿದ್ದ ಸೆಂಚೂರಿ ಗೌಡ ಈ ಚಿತ್ರದಲ್ಲಿಯೂ ಪ್ರಮುಖ ಪಾತ್ರವನ್ನು ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಎ. ಟಿ ರವೀಶ್ ಸಂಗೀತ ನೀಡಿದ್ದಾರೆ.
ಇದೊಂದು ಗ್ರಾಮೀಣ ಭಾಗದಲ್ಲಿ ನಡೆಯುವ, ಮನಸ್ಸಿಗೆ ಸಂಬಂಧಿಸಿದ ಚಿತ್ರವಾಗಿದ್ದು, ನಿರ್ದೇಶಕ ರಮೇಶ್ ಯಾದವ್ ಈ ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದಾರೆ. ಹಿರಿಯ ನಟ ರಾಮಕೃಷ್ಣ ಇಲ್ಲಿ ನಾಯಕಿಯ ತಂದೆಯ ಪಾತ್ರವನ್ನು ಮಾಡಿದ್ದಾರೆ. ಅವರಂತೆ ಪದ್ಮಾವಾಸಂತಿ ತಾಯಿಯ ಪಾತ್ರವನ್ನು ಮಾಡಿದ್ದು, ಸಸ್ಯ ಇದೇ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.’ಎಲ್ಲರ ಮನದಲ್ಲೂ ಒಳ್ಳೆಯ ಮತ್ತು ಕಟ್ಟ ಭಾವನೆಗಳು ಇರುತ್ತವೆ. ಆಸೆ ಪಟ್ಟ ವಸ್ತು ಬೇಗನೇ ಸಿಗುವುದಿಲ್ಲ ಎಂದು ತಿಳಿದ ಮೇಲೆ ನಾವು ಕೆಟ್ಟದಾಗಿ ವರ್ತಿಸುತ್ತೇವೆ. ಚಿತ್ರದ ನಾಯಕನಿಗೂ ಮೂರು ಕೆಟ್ಟ ಆಲೋಚನೆಗಳು ಬರುತ್ತವೆ. ತಾನು ಪ್ರೀತಿಸಿದ ಹುಡುಗಿ ಸಿಗದೇ ಇದ್ದಾಗ , ಅವಳನ್ನು ಪಡೆಯಲು ಕೆಟ್ಟ ದಾರಿ ಹುಡುಕುತ್ತಾನೆ. ಅದೇ ಅವನ ಮೈನಸ್ ಪಾಯಿಂಟ್.
Be the first to comment