‘ಕನ್ನಡ ದೇಶದೊಳ್’ ಚಿತ್ರದ ಧ್ವನಿಸಾಂದ್ರಿಕೆ ಬಿಡುಗಡೆ.

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಅಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ ನಿವೃತ್ತ ನ್ಯಾಾಯಮೂರ್ತಿ ಸಂತೋಷ್ ಹೆಗ್ಡೆೆ, ಹಿರಿಯ ನಟಿ ಸುಮನ್ ನಗರ್‌ಕರ್, ಬಿಬಿಎಂಪಿಯ ನೂತನ ಮೇಯರ್ ಗಂಗಾಂಬಿಕೆ, ಚೈತನ್ಯ ವಿಶೇಷ ಚೇತನ ಶಾಲೆಯ ಮಕ್ಕಳ ಸಮ್ಮುಖದಲ್ಲಿ ಚಿತ್ರದ ಹಾಡುಗಳು ಲೋಕಾರ್ಪಣೆಯಾದವು.

ಇದೇ ವೇಳೆ ಮಾತನಾಡಿದ ನ್ಯಾ. ಸಂತೋಷ್ ಹೆಗ್ಡೆೆ ಹೊಸ ಪ್ರತಿಭೆಗಳ ಪ್ರಯತ್ನ ನಿರೀಕ್ಷೆ ಹುಟ್ಟಿಸಿದೆ. ಚಿತ್ರಕ್ಕೆೆ ಒಳ್ಳೆೆಯದಾಗಲಿ ಎಂದು ಶುಭ ಹಾರೈಸಿದರು. ನಟಿ ಸುಮನ್ ನಗರ್‌ಕರ್ ಮಾತನಾಡಿ, ಅಪ್ಪಟ ಕನ್ನಡದ ಹುಡುಗರು ಸೇರಿ ಮಾಡಿರುವ ಈ ಸಿನಿಮಾದ ಹಾಡುಗಳಲ್ಲಿ ಕನ್ನಡದ ಸೊಗಡು ಎದ್ದು ಕಾಣುತ್ತಿದೆ. ಎಲ್ಲಾ ಕನ್ನಡಿಗರು ಈ ಸಿನಿಮಾವನ್ನು ನೋಡಲಿ, ಕನ್ನಡದ ಪ್ರತಿಭೆಗಳ ಪ್ರಯತ್ನ ಗೆಲ್ಲಲಿ ಎಂದರು. ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಾತನಾಡಿ, ಇಂದಿನ ಮಕ್ಕಳು ಕನ್ನಡ ಮರೆತು ಇಂಗ್ಲೀಷ್ ಭಾಷೆಯ ಮೋಹಕ್ಕೆೆ ಒಳಗಾಗುತ್ತಿರುವ ಸಂದರ್ಭದಲ್ಲಿ, ಕನ್ನಡದ ಬಗ್ಗೆೆ ಜಾಗೃತಿ ಮತ್ತು ಕನ್ನಡ ಅಭಿಮಾನವನ್ನು ಮೂಡಿಸುವ ಚಿತ್ರತಂಡಕ್ಕೆೆ ಅಭಿನಂದನೆ. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.

ಇನ್ನು ‘ಕನ್ನಡ ದೇಶದೊಳ್’ ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು, ಕರ್ನಾಟಕದ ಸೊಗಡನ್ನು ಸಾರುವ ಉತ್ತರ ಕರ್ನಾಟಕ, ಕೊಡಗು ಮತ್ತು ಕೊಂಕಣಿ ಶೈಲಿಯ ಹಾಡುಗಳು ಚಿತ್ರದಲ್ಲಿರುವುದು ವಿಶೇಷ. ರಾಜೇಶ್ ಕೃಷ್ಣನ್, ಅನನ್ಯ ಭಟ್, ಸ್ವಪ್ನ ಮೊದಲಾದ ಗಾಯಕರು ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ತೆಲುಗು ಮೂಲದ ಸೋಲೋ ರಾಜ್ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಅವಿರಾಮ್ ಕಂಠೀರವ ನಿರ್ದೇಶನದ ಈ ಚಿತ್ರದ ಮುಖ್ಯ ತಾರಾಗಣದಲ್ಲಿ ಬಹುತೇಕ ಹೊಸ ಕಲಾವಿದರೇ ಅಭಿನಯಿಸಿದ್ದಾಾರೆ. ಚಿತ್ರದ ಬಗ್ಗೆೆ ಮಾತನಾಡಿರುವ ಅವಿರಾಮ್ ಕಂಠೀರವ, ಚಿತ್ರದಲ್ಲಿ ಪಾತ್ರಗಳಿಗಿಂತ ಕತೆಗೆ ಹೆಚ್ಚಿನ ಮಹತ್ವವಿದೆ. ಇದೊಂದು ಪಕ್ಕಾ ಕನ್ನಡ ಅಭಿಮಾನದ ಚಿತ್ರವಾಗಿದ್ದು, ಇಡೀ ಕರ್ನಾಟಕದ ಸೊಗಡನ್ನು ಸಿನಿಮಾದಲ್ಲಿ ಕಾಣಬಹುದು. ಕನ್ನಡದ ಪರ ಈ ಚಿತ್ರ ಹೊಸ ಧ್ವನಿಯಾಗಲಿದೆ. ಮುಂಬರುವ ನವೆಂಬರ್ 1ರಂದು ಸಿನಿಮಾವನ್ನು ಬಿಡುಗಡೆ ಮಾಡಲು ಯೋಜಿಸಿದ್ದೇವೆ ಎಂದರು.

This Article Has 1 Comment
  1. Pingback: DevOps outsourcing & advisory companies

Leave a Reply

Your email address will not be published. Required fields are marked *

Translate »
error: Content is protected !!