ನಿರ್ದೇಶಕ: ನಾಗೇಶ್‌ಕುಮಾರ್. ಎನ್
ನಿರ್ಮಾಪಕ : .ಡಿ.ಎಂ. ನರಸೇಗೌಡ
ಸಂಗೀತ : ಆರವ್ ಋಷಿಕ್
ಛಾಯಾಗ್ರಹಕ : ಆನಂದ್ ದಿಂಡವಾರ್
ತಾರಾಗಣ : ಚಂದ್ರಶೇಖರ್ , ಸಹನಾ , ಪ್ರಕೃತಿ , ನಮ್ರತಾ ಮಲ್ಲ , ಮಿಮಿಕ್ರಿ ಗೋಪಿ ಹಾಗೂ ಮುಂತಾದವರು…
ರೇಟಿಂಗ್ 3.5/5
ಭೂಗತ ಲೋಕಕ್ಕೆ ಒಮ್ಮೆ ಪ್ರವೇಶ ಮಾಡಿದರೆ ಮುಗೀತು , ಮತ್ತೆ ಹಿಂತಿರುಗಿ ಬರುವ ದಾರಿಯೇ ಇರುವುದಿಲ್ಲ. 90ರ ಕಾಲಘಟ್ಟದಲ್ಲಿ ರೌಡಿಗಳ ಹಾವಳಿ ಹೆಚ್ಚಾಗಿದ್ದು , ಸುಖ ಸಂಸಾರದಿಂದ ನೆಮ್ಮದಿ ಬದುಕನ್ನು ನಡೆಸಬೇಕೆಂದು ಆಸೆ ಪಡುವ ಯುವಕನೊಬ್ಬನ ಬದುಕಿನಲ್ಲಿ ಎದುರಾಗುವ ಹೆಣ್ಣಿನ ಪ್ರೀತಿ ಪಾಶ , ರೌಡಿಗಳ ಹಾವಳಿ , ಜೀವ ಉಳಿಸಿಕೊಳ್ಳಲು ಲಾಂಗ್ ಹಿಡಿಯುವ ಹುಡುಗನೊಬ್ಬನ ನೈಜ ಘಟನೆ ಆಧಾರಿತ ಚಿತ್ರ “ಡಾನ್ ಕುಮಾರ”.
ಇಡೀ ಬೆಂಗಳೂರನ್ನೇ ತನ್ನ ಕಂಟ್ರೋಲ್ ನಲ್ಲಿ ಇಟ್ಟುಕೊಂಡು ವೈರಿಗಳ ಎದೆಗೆ ಗುಂಡನ ಹಾರಿಸಿ ಸಾಮ್ರಾಜ್ಯ ಕಟ್ಟಿಕೊಂಡಿರುತ್ತಾನೆ. ಇನ್ನುಳಿದ ರೌಡಿಗಳಿಗೆ ಯಾರ್ ಈ ಕುಮಾರ ಎಂಬ ಪ್ರಶ್ನೆಗೆ ಫ್ಲಾಶ್ ಬ್ಯಾಕ್ ತೆರೆದುಕೊಳ್ಳುತ್ತದೆ. ಬಾಲ್ಯದಿಂದಲೂ ನೇರ ಪ್ರಾಮಾಣಿಕವಾಗಿರುವ ಮುಗ್ಧ ಹುಡುಗ ನಾನಾ ಕಾರಣಕ್ಕೆ ತಂದೆ , ತಾಯಿ , ಶಾಲೆಯ ಪ್ರಿನ್ಸಿಪಾಲ್ ಹಾಗೂ ಹುಡುಗರ ಜೊತೆ ಗಲಾಟೆಯಿಂದ ಒದೆ ತಿಂದು ಕೋಪಗೊಂಡು ಯಾಕೆ ನನಗೆ ಈ ಶಿಕ್ಷೆ , ಶ್ರೀಮಂತರಿಗೆ ಒಂದು ರೀತಿ , ಬಡವರಿಗೆ ಒಂದು ರೀತಿ ನ್ಯಾಯ ಸರಿನಾ ಎಂದು ದೇವಸ್ಥಾನದಲ್ಲಿ ದೇವರ ಮುಂದೆ ಕೇಳಿಕೊಳ್ಳುತ್ತಾನೆ.
ಅರ್ಚಕರು ಹೇಳುವ ಮಾತುಗಳು ಆತನಲ್ಲಿ ಧೈರ್ಯ ಮೂಡುತ್ತದೆ. ಬೆಳೆದು ದೊಡ್ಡವನಾಗುವ ಕುಮಾರ (ಚಂದ್ರಶೇಖರ್) ಮನೆಯವರ ಆಸೆಯಂತೆ ಕಾಲೇಜ್ಗೆ ಸೇರಿ ಯಾವುದೇ ಗಲಾಟೆಗೆ ಹೋಗದಂತೆ ಉತ್ತಮವಾಗಿ ಓದಿ ಒಳ್ಳೆ ಕೆಲಸ ಪಡೆದು ಕುಟುಂಬವನ್ನು ಸಾಕುವ ಕನಸನ್ನು ಹೊಂದಿರುತ್ತಾನೆ. ಆದರೆ ತನ್ನ ಕಾಲೇಜಿನ ವಿದ್ಯಾರ್ಥಿನಿ ಸ್ನೇಹ (ಸಹನ ಮಲತ್ಕೆರ್) ಕುಮಾರ ಬುದ್ಧಿವಂತಿಕೆಯ ಮಾತಿಗೆ ಮನಸೋತು ಇಷ್ಟಪಡುತ್ತಾಳೆ.
ಇವರಿಬ್ಬರ ಮಾತುಕತೆಯನ್ನು ಗಮನಿಸುವ ರೌಡಿ ಗ್ಯಾಂಗ್ ಸ್ನೇಹ ನನ್ನ ಪ್ರೇಯಸಿ ಅವಳ ಜೊತೆ ಸೇರಿ ಬೇಡ ಎಂದು ಕುಮಾರನಿಗೆ ಹೊಡೆಯುತ್ತಾರೆ. ಇದರ ನಡುವೆ ಅದೇ ಕಾಲೇಜಿನ ವಿದ್ಯಾರ್ಥಿನಿ ಭವ್ಯ (ಪ್ರಕೃತಿ ಕೌಸ್ತುಭ) ಕೂಡ ಮೌನವಾಗಿ ಕುಮಾರ್ ನನ್ನ ಇಷ್ಟ ಪಡುತ್ತಾಳೆ. ಇವರಿಬ್ಬರ ಓಡಾಟ , ಪ್ರೇಮ ಇಡೀ ಕಾಲೇಜುಗೆ ಹರಡುತ್ತದೆ. ಹುಡುಗಿಯರನ್ನು ಕಾಮದ ವಸ್ತುವಂತೆ ನೋಡುವ ರೌಡಿಗಳ ಕಣ್ಣು ಭವ್ಯ ಮೇಲೆ ಬೀಳುತ್ತದೆ. ಅವಳನ್ನ ಬಲತ್ಕಾರ ಮಾಡಲು ಮುಂದಾಗುವ ರೌಡಿಗಳಿಂದ ರಕ್ಷಿಸಲು ಹೋಗುವ ಕುಮಾರ ಕೊಲೆ ಮಾಡುವ ಸಂದರ್ಭ ಎದುರಾಗುತ್ತದೆ. ಮುಂದೆನಾಗುತ್ತೆ ಅನ್ನೊದು ನೀವು ಚಿತ್ರ ನೋಡಲೇಬೇಕು.
ನೈಜ ಘಟನೆಗಳ ಆಧಾರವಾಗಿಟ್ಟುಕೊಂಡು ಈ ಚಿತ್ರಕ್ಕೆ ಕಥೆ , ಚಿತ್ರಕಥೆ , ಸಂಭಾಷಣೆ , ಸಾಹಿತ್ಯ ಬರೆದು ನಿರ್ದೇಶನ ಮಾಡಿರುವ ಎನ್. ನಾಗೇಶ್ ಕುಮಾರ್. ಲವ್, ರೋಮ್ಯಾನ್ಸ್ , ತಂದೆ , ತಾಯಿ ಸೆಂಟಿಮೆಂಟ್ ಎಲ್ಲವು ಬೆಸಿದಿದ್ದಾರೆ.
ಈ ಚಿತ್ರದ ಮೇಕಿಂಗ್ ಸೇರಿದಂತೆ ಬಹಳಷ್ಟು ಅಂಶಗಳನ್ನ ಇನ್ನು ಅಚ್ಚುಕಟ್ಟಾಗಿ ಮಾಡಬಹುದಿತ್ತು ನಿರ್ದೇಶಕರು. ಮೊದಲ ಪ್ರಯತ್ನವಾಗಿದ್ದು , ಕ್ಲೈಮ್ಯಾಕ್ಸ್ ಗೆ ಬೇರೆದೇ ರೂಪ ಕೊಟ್ಟಿದ್ದಾರೆ. ರಿಯಲ್ ಸ್ಟೋರಿ, ರಿಯಲ್ ಡಾನ್ ಎನ್ನುವ ಅಡಬರಹವಿರುವ ಈ ಚಿತ್ರವನ್ನು ಮಗನ ಸಲುವಾಗಿ ತಂದೆ ಡಿ.ಎಂ.ನರಸೇಗೌಡರು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿರುವ ಚಂದ್ರಶೇಖರ್ , ನಾಯಕಿಯರಾಗಿ ಕಾಣಿಸಿಕೊಂಡಿರುವ ಸಹನಾ ಮತ್ತು ಪ್ರಕೃತಿ ಹಾಗೂ ರಾಜಕೀಯ ಮುಖಂಡರಾಗಿ ಮಿಮಿಕ್ರಿ ಗೋಪಿ , ಐಟಂ ಹಾಡಿನಲ್ಲಿ ನಮೃತಾ ಮಲ್ಲ ಸೇರಿದಂತೆ ಹಲವಾರು ಪ್ರತಿಭೆಗಳು ಈ ಚಿತ್ರದಲ್ಲಿ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಕೊಡುವ ಪ್ರಯತ್ನವನ್ನು ಮಾಡಿದ್ದಾರೆ.
ಉಳಿದಂತೆ ಆರವ್‌ಋಷಿಕ್ ಸಂಗೀತ , ಆನಂದ್ ದಿಂಡವಾರ್ ಛಾಯಾಗ್ರಹಣ, ಧನುಕುಮಾರ್ ನೃತ್ಯ, ಶ್ರೀನಿವಾಸ.ಪಿ.ಬಾಬು ಸಂಕಲನ ಮಾಡಿದ್ದಾರೆ. ಒಟ್ಟಾರೆ ರೌಡಿಸಂ , ಆಕ್ಷನ್ ತುಂಬಿಕೊಂಡಿರುವ ಈ ಚಿತ್ರ ಪ್ರೇಕ್ಷಕರ ಮುಂದೆ ಬಂದಿದೆ.
Be the first to comment