ವೈದ್ಯ ಪದ್ಧತಿಯಾದ ನಾಟಿ ವೈದ್ಯದ ಪ್ರಚಲಿತತೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದೆ. ಈ ಪದ್ಧತಿಯಿಂದ ಎಂತಹ ಕಾಯಿಲೆಯನ್ನು ಬೇಕಾದರೂ ಗುಣಪಡಿಸಬಹುದು ಎಂದು ತೋರಿಸುವ ಸಲುವಾಗಿ ಮತ್ತು ಅಲೋಪಥಿ ವೈದ್ಯ ವ್ಯವಸ್ಥೆ ಹೇಗೆ ನಾಟಿ ವೈದ್ಯ ಪದ್ಧತಿಯನ್ನು ಅಳಿವಿನಂಚಿಗೆ ತಳ್ಳುತ್ತಿದೆ ಎಂಬ ವಿವರಗಳನ್ನು ಇಟ್ಟುಕೊಂಡು ‘ಮಧುರ ಕಾವ್ಯ’ ಎಂಬ ಸಿನಿಮಾ ಮಾಡಿದ್ದಾರೆ ಮಧುಸೂದನ್ ಕ್ಯಾತನಹಳ್ಳಿ.
ಒಂದು ಊರು ಅಲ್ಲಿನ ಬಡ ಜನರಿಗೆ ಸಹಜವಾಗಿ ಉಂಟಾಗುವ ಕಾಯಿಲೆಗಳು. ಇದು ಅಸಹಾಯಕತೆ ಹಂತದಲ್ಲಿ ಇರುವಾಗ ಕಾಣಿಸಿಕೊಳ್ಳುವ ಯಶೋದಾ (ಅವ್ವ) ನಾಟಿ ವೈದ್ಯೆಯಾದ ತನ್ನ ಕೈಗುಣದಿಂದಾಗಿ ಹಲವು ಕಾಯಿಲೆಗಳನ್ನು ಗುಣಪಡಿಸುತ್ತಿರುತ್ತಾರೆ. ಇವರ ಖ್ಯಾತಿ ಹಳ್ಳಿಯಿಂದ ದೊಡ್ಡ ದೊಡ್ಡ ನಗರಗಳಿಗೂ ಹಬ್ಬಿರುತ್ತದೆ. ದಾರಿ ತಪ್ಪಿ ಬರುವ ಮಾವೀರನೂ ಆಕೆಗೆ ಮಗನಾಗುತ್ತಾನೆ. ಆದರೆ ವ್ಯವಸ್ಥೆ ಆಕೆಯನ್ನು ಮುಗಿಸಲು ಯತ್ನಿಸಿದಾಗ ಸಮಾಜಕ್ಕೆ ನೆರವಾಗುವ ಸಂಕಲ್ಪ ಮಾಡುವ ಮಾವೀರ ಅದಕ್ಕಾಗಿ ವಿಭಿನ್ನ ದಾರಿ ಕಂಡುಕೊಳ್ಳುತ್ತಾನೆ..
ಆ ಊರಿನ ಸರ್ಕಾರಿ ಆಸ್ಪತ್ರೆ ಮತ್ತು ಇತರ ಕಡೆಗಳಿಂದ ರೋಗಿಗಳೇ ನಾಪತ್ತೆಯಾಗುತ್ತಾರೆ. ಆತ ಕಾಡಿನಲ್ಲಿ ಆಶ್ರಮ ಕಟ್ಟಿಕೊಳ್ಳುತ್ತಾನೆ. ಆಗ ವ್ಯವಸ್ಥೆ ವಿರುದ್ಧ ಹೋರಾಡುವ ಗುಂಪೊಂದು ಆತನಿಗೆ ನೆರವಾಗಿ ನಿಲ್ಲುತ್ತದೆ.
ಮಾವೀರ ವೀರತ್ವದ ಗುಣಗಳನ್ನು ಹೊಂದಿದವನು. ಆದರೆ ಆತ ಅಮಾಯಕ ಮತ್ತು ಅನಾಥ. ಸಿಕ್ಕಿರುವ ಮಾತೆಗೆ ಮಗುವಾಗಲು ಯತ್ನಿಸುತ್ತಾನೆ ಮತ್ತು ಚಿಕಿತ್ಸಾ ಕಾಯಕದಲ್ಲಿ ಆಕೆಗೆ ನೆರವಾಗುತ್ತಾನೆ.
ಯಶೋದಾ ಚಿಕಿತ್ಸೆ ಪ್ರಸಿದ್ಧಿ ಪಡೆಯುವಾಗ ವ್ಯವಸ್ಥೆಯಲ್ಲಿ ಅನ್ಯ ಮಾರ್ಗದಿಂದ ಸುಲಿಗೆ ಮಾಡಿ ಲಾಭ ಪಡೆಯುವ ಮಂತ್ರಿಗೆ ಅಡ್ಡಿಯಾಗುತ್ತದೆ. ಆತ ಸಂಚು ರೂಪಿಸುತ್ತಾನೆ. ಜನರು ಸಾಯುತ್ತಾರೆ. ಇದು ಯಶೋದಾ ಮಾತೆಗೆ ಕಳಂಕ.
ಆಕೆ ಹತಾಶಳಾಗಿ ಚಿಕಿತ್ಸೆ ಬಿಡುವ ಸಂದರ್ಭದಲ್ಲಿ ಬೇರೆ ಬೇರೆ ರೀತಿಯ ಘಟನೆಗಳು ನಡೆಯುತ್ತವೆ. ಅಪಹರಿಸಲ್ಪಡುವ ಮಂತ್ರಿ ಮತ್ತು ಆತನ ಸಹಾಯಕರಿಗೆ ಕಾಡಿನಲ್ಲಿ ಬುದ್ಧಿ ಕಲಿಸಲಾಗುತ್ತದೆ. ಮುಂದೆ ಅಪ್ಪ ಮಗನಿಗೆ ಜಯವಾಗುತ್ತದೆ.
ಸಿನಿಮಾದಲ್ಲಿ ನಟಿರುವ ಎಲ್ಲಾ ಕಲಾವಿದರಿಗೂ ಇದು ಮೊದಲ ಪ್ರಯತ್ನ. ಹಾಗಾಗಿ ಅವರಿಂದ ಅದ್ಭುತವಾದ ಅಭಿನಯವನ್ನು ನಿರೀಕ್ಷೆ ಮಾಡುವಂತಿಲ್ಲ. ಜತೆಗೆ ಪ್ರೇಕ್ಷಕ ಮಾಮೂಲಿ ಸಿನಿಮಾದಲ್ಲಿ ನೋಡುವ ಲವ್ ಸ್ಟೋರಿಯೂ ಚಿತ್ರದಲ್ಲಿ ಇಲ್ಲ. ಸತೀಶ್ ಮೌರ್ಯ ಅವರ ಸಂಗೀತ ಗಮನಸೆಳೆಯುತ್ತದೆ.
ನಾಟಿ ವೈದ್ಯ ಪದ್ಧತಿಯ ಬಗ್ಗೆ ಒಲವಿ ಇರುವವರು ಒಮ್ಮೆ ಈ ಸಿನಿಮಾವನ್ನು ನೋಡಲು ಅಡ್ಡಿ ಇಲ್ಲ. ಈ ರೀತಿಯ ಒಂದು ಪ್ರಯತ್ನಕ್ಕೆ ಕೈಹಾಕಿದಕ್ಕಾಗಿ ಮಧುಸೂದನ್‌ಗೆ ಮೆಚ್ಚುಗೆ ಸಲ್ಲಬೇಕು.
Be the first to comment