Don kumar : ಭೂಗತ ಜಗತ್ತಿನ ನೈಜ ಕಥನ ‘ಡಾನ್ ಕುಮಾರ’ ಇದೇ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆ

ಭೂಗತ ಲೋಕದ ಚಿತ್ರಗಳು ಸಾಕಷ್ಟು ತೆರೆಕಂಡಿವೆ. ಆ ಸಾಲಿಗೆ ’ಡಾನ್ ಕುಮಾರ’ (Don Kumar) ಸಿನಿಮಾ ಹೊಸದಾಗಿ ಸೇರ್ಪಡೆಯಾಗಿದೆ. ಈ ಚಿತ್ರಕ್ಕೆ ರಿಯಲ್ ಸ್ಟೋರಿ, ರಿಯಲ್ ಡಾನ್ ಎನ್ನುವ ಅಡಬರಹವಿದ್ದು, ಎನ್.ನಾಗೇಶ್‌ಕುಮಾರ್ (Nagesh Kumar) ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮಗನ ಸಲುವಾಗಿ ತಂದೆ ಡಿ.ಎಂ.ನರಸೇಗೌಡರು ಬಂಡವಾಳ ಹೂಡಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಟ್ರೈಲರ್  (Trailer)ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ನಿರ್ದೇಶಕರು ಹೇಳುವಂತೆ, ‘ನಮ್ಮ ಸಿನಿಮಾವು ರೆಗ್ಯುಲರ್ ತರಹ ಇರಲ್ಲ. ನಿರೂಪಣೆ ಎಲ್ಲವೂ ವಿಶೇಷವಾಗಿರುತ್ತದೆ. 15 ಸಾಹಸ ದೃಶ್ಯಗಳಿವೆ. ಎಲ್ಲವು ರಿಯಲ್ ಫೈಟ್ಸ್ ಆಗಿದ್ದು, ಸಾಮಾನ್ಯ ಮನುಷ್ಯ ಜಗಳವಾಡಿದರೆ ಹೇಗಿರುತ್ತೋ ಅದೇ ರೀತಿಯಲ್ಲಿ, ನಾಟಕೀಯದಂತೆ ಇರದೆ  ಸಂಯೋಜನೆ ಮಾಡಲಾಗಿದೆ. ಭೂಗತ ಲೋಕದ ಸನ್ನಿವೇಶಗಳು ಇದ್ದರೂ, ಲವ್, ರೋಮ್ಯಾನ್ಸ್, ತಂದೆ ತಾಯಿ ಸೆಂಟಿಮೆಂಟ್ ಎಲ್ಲವು ಇರಲಿದೆ. ರೌಡಿಸಂ ಯಾಕೆ ಆಗುತ್ತೆ. 1990-2000 ನಡೆದಂತಹ ಒಂದಷ್ಟು ಘಟನೆಗಳನ್ನು ಬಳಸಲಾಗಿದೆ. ಆದರೆ ಯಾವುದೇ ವ್ಯಕ್ತಿಗೆ ಅನ್ವಯಿಸುವುದಿಲ್ಲ’ ಎನ್ನುತ್ತಾರೆ.

ಶೀರ್ಷಿಕೆ ಹೆಸರಿನಲ್ಲಿ ಚಂದ್ರಶೇಖರ್ (Chandrasekhar) ನಾಯಕ. ಸಹನಾ (Sahana) ಮತ್ತು ಪ್ರಕೃತಿ (Prakruti) ನಾಯಕಿಯರು. ಐಟಂ ಹಾಡಿಗೆ ನಮೃತಾಮಲ್ಲ ಹೆಜ್ಜೆ ಹಾಕಿದ್ದಾರೆ. ಉಳಿದಂತೆ ಮಿಮಿಕ್ರಿಗೋಪಿ ಅಲ್ಲದೆ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಆರವ್‌ ಋಷಿಕ್ ಸಂಗೀತದ ಐದು ಗೀತೆಗಳಿಗೆ ಅನಿರುದ್‌ ಶಾಸ್ತ್ರಿ, ಅನುರಾಧ ಭಟ್, ನಿಮಿಕಾ ರತ್ನಾಕರ್, ಅವಿನಾಶ್‌ ಛಬ್ಬಿ ಕಂಠದಾನ ಮಾಡಿದ್ದಾರೆ.

ಆನಂದ್‌ ದಿಂಡವಾರ್ ಛಾಯಾಗ್ರಹಣ, ಧನುಕುಮಾರ್ ನೃತ್ಯ, ಶ್ರೀನಿವಾಸ.ಪಿ.ಬಾಬು ಸಂಕಲನವಿದೆ. ಬೆಂಗಳೂರು, ಮೈಸೂರು, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಹಾಗೂ ಸಿಂಗಾಪುರ್ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!