ಮನುಷ್ಯ ಸಂಘಜೀವಿ. ಆತ ಸಮಾಜವನ್ನು ಬಿಟ್ಟರೆ ಜೀವನ ಮಾಡಲು ಸಾಧ್ಯವೇ ಇಲ್ಲ. ಅಂಥಾ ಮನುಷ್ಯ ಕಾಮ, ಕ್ರೋಧ, ಮೋಹ, ಲೋಭ ಹಾಗೂ ಮದ-ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡರೆ ಸಮಾಜ ಹೇಗಿರುತ್ತದೆ ಎಂಬುದನ್ನು ಚಲನಚಿತ್ರದ ಮೂಲಕ ಹೇಳುವ ಪ್ರಯತ್ನವನ್ನು ಮಾಡಲಾಗಿದೆ. ಆ ಚಿತ್ರದ ಹೆಸರೇ ಶ್ರೀಕಾರ. ಆರ್.ಕೆ.ಗಾಂಧಿ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಶ್ರೀಕಾರ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಈಗಾಗಲೇ ಮುಕ್ತಾಯಗೋಂಡಿದೆ. ಕೋಲಾರ, ಬಂಗಾರ ಪೇಟೆ ಹಾಗೂ ಕೆಜಿಎಫ್ ಸುತ್ತಮುತ್ತ ಮಾತಿನ ಭಾಗದ ಹಾಗೂ ಎರಡು ಹಾಡುಗಳ ಚಿತ್ರೀಕರಣ ನಡೆಸಲಾಗಿದೆ. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ. ನೀನಿಲ್ಲದ ಮಳೆ ಚಿತ್ರದ ಖ್ಯಾತಿಯ ರಾಮ್ ಜನಾರ್ಧನ್, ಗಾಯಿತ್ರ್ರಿ ಖ್ಯಾತಿಯ ಶಿವಕುಮಾರ್, ಯಾರ್ ಯಾರ್ ಗೋರಿಮೇಲೆ ಚಿತ್ರದ ನಟರಾದ ಪುಟ್ಟರಾಜು, ಅಭಿಲಾಷ್ ಸಹಾಸ ನಿರ್ದೇಶಕ ಶಂಕರ್, ತೆಲುಗು ನಟ ಷಫಿ ಹಾಗೂ ಕಾಮಿಡಿ ನಟರಾದ ಸುಮನ್ ಶೆಟ್ಟಿ, ನಟಿ ಅನಿತಾ ಭಟ್ ಅಭಿನಯಿಸಿದ್ದಾರೆ.
ಕುಸುಮಾ ಪಿಕ್ಬರ್ಸ್ ಲಾಂಛನದಲ್ಲಿ ಉದ್ಯಮಿ ಕೋಲಾರ ಚಲಪತಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ವಿನುಮನಸು ಸಂಗೀತ, ಕೃಷ್ಣಕುಮಾರ್, ಪ್ರಮೋದ್ ಭಾರತಿ ಛಾಯಾಗ್ರಹಣ, ಸಂಗೀತಾ ಪ್ರಮೋದ್, ಭಾರತಿ, ವಿಜಯ್ ಭರಮಸಾಗರ, ರಾಜೀವ, ಕೃಷ್ಣಗಾಂಧಿ ಸಾಹಿತ್ಯ, ಸಾನ್ವಿ ನೃತ್ಯ ನಿರ್ದೇಶನ, ಶಂಕರ್ ಸಾಹಸ ವಿನಯ್ ಜಿ.ಆಲೂರು ಸಂಕಲನ, ಸಾನ್ವಿ ನಾರಾಯಣ ನಿರ್ಮಾಣ ನಿರ್ವಾಹಣೆ ಇದೆ. ಷಫಿ, ಅನಿತಾ ಭಟ್, ಸುಮನ್, ಶಟ್ಟಿ, ರಾಮ್ ಜನಾರ್ಧನ್, ಶಿವಕುಮಾರ್, ಅಭಿಲಾಷ್, ಪುಟ್ಟರಾಜ್ ಶಂಕರ್ ಮುಂತಾದವರ ತಾರಾಬಳಗವಿದೆ.
Pingback: sex and the city season 6 123