ಸಿನಿಮಾಗಳು ಈಗ ಭಾಷೆಯ ಗಡಿಯನ್ನು ಮೀರುತ್ತಿವೆ. ಬೇರೆ ಬೇರೆ ರಾಜ್ಯಗಳ ಚಿತ್ರರಂಗಗಳು ಡಬ್ಬಿಂಗ್ ಮೊರೆ ಹೋಗುತ್ತಿವೆ. ಗುಜರಾತಿ ಭಾಷೆಯ ಸಿನಿಮಾ ಕೂಡ ಕನ್ನಡಕ್ಕೆ ಡಬ್ ಆಗಿ ತೆರೆಗೆ ಬರಲು ಸಜ್ಜಾಗಿದೆ.
ರಾಯರು ಬಂದರು ಮಾವನ ಮನೆಗೆ’ ಎಂದ ತಕ್ಷಣ ‘ಮೈಸೂರು ಮಲ್ಲಿಗೆ’ ಸಿನಿಮಾ ನೆನಪಾಗುತ್ತದೆ. ಈಗ ‘ರಾಯರು ಬಂದರು ಮಾವನ ಮನೆಗೆ’ ಶೀರ್ಷಿಕೆಯಲ್ಲೊಂದು ಹೊಸ ಸಿನಿಮಾ ಬಿಡುಗಡೆ ಆಗಲು ಸಜ್ಜಾಗಿದೆ. ಹಾಗಂತ ಇದು ಕನ್ನಡದ ಸಿನಿಮಾ ಅಲ್ಲ! ವಿಶೇಷ ಏನಂದರೆ ಇದು ಗುಜರಾತಿ ಸಿನಿಮಾ ‘ವರ್ ಪಧಾರವೋ ಸಾವಧಾನ್’ ಎಂಬುದು ಇದರ ಮೂಲ ಟೈಟಲ್.
ಜುಲೈ 7ರಂದು ಈ ಚಿತ್ರ ಗುಜರಾತಿ ಭಾಷೆಯಲ್ಲಿ ಬಿಡುಗಡೆ ಆಗಲಿದೆ. ಇದೇ ಸಿನಿಮಾ ಕನ್ನಡಕ್ಕೂ ಡಬ್ ಆಗಿದೆ. ಕನ್ನಡದಲ್ಲಿ ಈ ಸಿನಿಮಾಗೆ ‘ರಾಯರು ಬಂದರು ಮಾವನ ಮನೆಗೆ’ ಎಂದು ಶೀರ್ಷಿಕೆ ಇಡಲಾಗಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾಗಳ ಕಾಲ. ಬೇರೆ ಬೇರೆ ಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ಡಬ್ ಆಗುತ್ತಿದೆ. ಅಚ್ಚರಿ ಎಂದರೆ ಇದೇ ಮೊದಲ ಬಾರಿಗೆ ಗುಜರಾತಿ ಭಾಷೆಯ ಸಿನಿಮಾ ಕನ್ನಡಕ್ಕೆ ಡಬ್ ಆಗಿ ತೆರೆಕಾಣುತ್ತಿದೆ.
ಸಿನಿಮಾಗಳು ಈಗ ಭಾಷೆಯ ಗಡಿಯನ್ನು ಮೀರುತ್ತಿವೆ. ಬೇರೆ ಬೇರೆ ರಾಜ್ಯಗಳ ಚಿತ್ರರಂಗಗಳು ಡಬ್ಬಿಂಗ್ ಮೊರೆ ಹೋಗುತ್ತಿವೆ. ಗುಜರಾತಿ ಭಾಷೆಯ ಸಿನಿಮಾ ಕೂಡ ಕನ್ನಡಕ್ಕೆ ಡಬ್ ಆಗುವ ಕಾಲ ಈಗ ಬಂದಿದೆ. ‘ವರ್ ಪಧಾರವೋ ಸಾವಧಾನ್’ ಸಿನಿಮಾವನ್ನು ‘ರಾಯರು ಬಂದರು ಮಾವನ ಮನೆಗೆ’ ಶೀರ್ಷಿಕೆಯಡಿ ಕನ್ನಡಕ್ಕೆ ತರುತ್ತಿರುವುದು ನಿರ್ಮಾಪಕ ಜಾಕ್ ಮಂಜು. ‘ವಿಕ್ರಾಂತ್ ರೋಣ’ ಸಿನಿಮಾ ನಿರ್ಮಾಣ ಮಾಡಿದ್ದ ಜಾಕ್ ಮಂಜು ಅವರು ಕಿಚ್ಚ ಸುದೀಪ್ಗೆ ಆಪ್ತರು. ತಮ್ಮ ‘ಶಾಲಿನಿ ಆರ್ಟ್ಸ್’ ಬ್ಯಾನರ್ ಮೂಲಕ ‘ರಾಯರು ಬಂದರು ಮಾವನ ಮನೆಗೆ’ ಸಿನಿಮಾವನ್ನು ಅವರು ಕನ್ನಡದ ಪ್ರೇಕ್ಷಕರ ಎದುರು ತರುತ್ತಿದ್ದಾರೆ.
‘ರತ್ನಪುರ’, ‘ಜಿತಿ ಲೇ ಜಿಂದಗಿ’ ಎಂಬ ಎರಡು ಹಿಟ್ ಚಿತ್ರಗಳನ್ನು ನೀಡಿರುವ ವಿಫುಲ್ ಶರ್ಮಾ ನಿರ್ದೇಶನದಲ್ಲಿ ‘ರಾಯರು ಬಂದರು ಮಾವನ ಮನೆಗೆ’ ಚಿತ್ರ ತಯಾರಾಗಿದೆ. ಶೈಲೇಶ್ ಧಮೇಲಿಯಾ, ಅನಿಲ್ ಸಂಘವಿ, ಭರತ್ ಮಿಸ್ತ್ರೀ ಬಂಡವಾಳ ಹೂಡಿದ್ದಾರೆ. ಸಾಧು ತುಷಾರ್, ಕಿಂಜಲ್ ರಾಜಪ್ರಿಯಾ, ರಾಗಿ ಜಾನಿ ಮತ್ತು ಕಾಮಿನಿ ಪಾಂಚಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಶಾಂತ್ ಬರೋಟ್, ಜಯ್ ಪಾಂಡ್ಯ, ಜೈಮಿನಿ ತ್ರಿವೇದಿ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.
ರಾಯರು ಬಂದರು ಮಾವನ ಮನೆಗೆ’ ಚಿತ್ರವು ಫ್ಯಾಮಿಲಿ ಡ್ರಾಮಾ ಕಥಾಹಂದರ ಹೊಂದಿದೆ. ಮದುವೆ, ಕುಟುಂಬ, ಸಂಬಂಧಗಳ ಸುತ್ತ ಇಡೀ ಸಿನಿಮಾ ಸಾಗಲಿದೆ. ಗುಜರಾತಿ ಸಿನಿಮಾವೊಂದು ಕನ್ನಡದಲ್ಲಿ ಬಿಡುಗಡೆ ಆಗುತ್ತಿರುವುದು ಇದೇ ಮೊದಲು ಎಂಬ ಕಾರಣಕ್ಕೆ ಸಹಜವಾಗಿಯೇ ಕುತೂಹಲ ಮೂಡಿದೆ. ಈ ಚಿತ್ರಕ್ಕೆ ಕರುನಾಡಿನ ಪ್ರೇಕ್ಷಕರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕು.
Be the first to comment