‘ಮಿಂಚುಹುಳು ಮುಹೂರ್ತ

ವರನಟ ಡಾ.ರಾಜ್‍ಕುಮಾರ್ ಅವರ ಕುಟುಂಬದ ಕುಡಿ ಪೃಥ್ವಿ ಮಿಂಚುಹುಳು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಪಡೆದಿದ್ದಾರೆ. ಡಾ.ರಾಜ್‍ರ ಏಳಿಗೆಯಲ್ಲಿ ಪಾತ್ರರಾಗಿರುವ ವರದಪ್ಪ ಅವರ ಮೊಮ್ಮಗ ಪೃಥ್ವಿ ನಟಿಸುತ್ತಿರುವ ಈ ಚಿತ್ರಕ್ಕೆ ಮೊನ್ನೆ ಆರ್.ಟಿ.ನಗರದ ಸಾಯಿಬಾಬಾ ಮಂದಿರದಲ್ಲಿ ಮುಹೂರ್ತ ಆಚರಿಸಿಕೊಂಡಿದ್ದು ರಾಜ್ ಪುತ್ರರಾದ ಶಿವರಾಜ್‍ಕುಮಾರ್, ರಾಘಣ್ಣ, ಪುನೀತ್ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಷೋದ ವಿಜೇತ ಮಾಸ್ಟರ್ ಪ್ರೀತಮ್ ಮತ್ತು ಬೇಬಿ ಪೂರ್ವಿಕಾ ಮಿಂಚುಹುಳು ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪೇಪರ್ ಹುಡುಗನಾಗಿ ಹಾಗೂ ಅಲ್ಲಿನ ಮಕ್ಕಳಿಗೆ ಮೆಂಟರ್ ಆಗಿ ಯುವನಟ ಪೃಥ್ವಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪೃಥ್ವಿ ಈ ಮೊದಲು ಪಾಪು ಕಲಾವಿದರ ಸಂಘದಲ್ಲಿ ಅಭಿನಯದ ಬಗ್ಗೆ ಒಂದಷ್ಟು ಪ್ರಿಪರೇಷನ್ ಮಾಡಿಕೊಂಡಿದ್ದಾರೆ. ಅಲ್ಲದೆ ಕೆಲ ನಾಟಕಗಳಲ್ಲಿ ವೇದಿಕೆ ಹಂಚಿಕೊಂಡಿದ್ದಾರೆ.ಇದು ಮಕ್ಕಳ ಕಥೆ ಹೊಂದಿರುವ ಸಿನಿಮಾ ಎನ್ನುವುದು ಇಲ್ಲಿ ಗಮನಿಸಬೇಕಾದ ವಿಶೇಷ. ಚಿಕ್ಕ ಹುಡುಗನೊಬ್ಬ ಪೋಷಕರ ಬಡತನದಿಂದ ಕರೆಂಟ್ ದೀಪ ಇಲ್ಲದ ಚಿಕ್ಕ ಮನೆಯಲ್ಲಿ ವಾಸ ಮಾಡುತ್ತಿರುತ್ತಾನೆ. ಅವನಿಗೆ ಶಿಕ್ಷಣ ಹೊಂದುವ ಬಯಕೆ ತುಂಬಾ ಇರುತ್ತದೆ. ಆತನಲ್ಲಿ ಮಿಂಚುಹುಳಿವಿನಂತಹ ಗುಣವಿರುವುದರಿಂದ ವಿದ್ಯುತ್‍ನ್ನು ಕಂಡುಹಿಡಿದು ಅಕ್ಕಪಕ್ಕದ ಮನೆಗಳಿಗೆ ಸರಬರಾಜು ಮಾಡುವಲ್ಲಿ ಹೇಗೆ ಯಶಸ್ಸು ಗಳಿಸುತ್ತಾನೆ ಎಂಬುದು ಮಿಂಚುಹುಳು ಚಿತ್ರದ ಪ್ರಮುಖ ಕತೆಯಾಗಿದೆ.

ಡಾ.ರಾಜ್‍ಕುಮಾರ್ ಹಾಗೂ ರಾಜ್‍ಪುತ್ರರ ಅಭಿನಯದ ಚಿತ್ರಗಳನ್ನು ನೋಡುತ್ತಾ ಬೆಳೆದ ಪೃಥ್ವಿ ಮಿಂಚುಹುಳು ಚಿತ್ರದ ಮೂಲಕ ನಟನಾಗಿ ಮಿಂಚಲು ಹೊರಟಿದ್ದರೆ, ಆಟೋ ಚಾಲಕನಾಗಿ ಪರಶಿವಮೂರ್ತಿ, ಶಿಕ್ಷಕಿಯಾಗಿ ರಶ್ಮಿ, ರವಿರೆಡ್ಡಿ, ಮಾದವಮೂರ್ತಿ ಮುಂತಾದವರು ಬಣ್ಣ ಹಚ್ಚುತ್ತಿದ್ದಾರೆ.ಕುಮಾರ್ ಮಹೇಶ್ ನಿರ್ದೇಶನ, ರಾಜ್ ಭಾಸ್ಕರ್ ಸಂಗೀತ, ಪುಷ್ಪರಾಜ್ ಅವರ ಸಂಭಾಷಣೆ, ರಾಘವೇಂದ್ರ ಶಾಸೀ ಅವರ ಛಾಯಗ್ರಹಣ ಮಿಂಚುಹುಳು ಚಿತ್ರಕ್ಕಿದೆ. ರಾಜಗೋಪಾಲ್ ದೊಡ್ಡಹುಲ್ಲೂರು, ನಾರಾಯಣ ಭಟ್ ಜಂಟಿಯಾಗಿ ಈ ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ನಿರ್ಮಾಪಕರಾಗುತ್ತಿದ್ದಾರೆ. ಬೆಳ್ಳಿಲೋಕದಲ್ಲಿ ಮಿಂಚಬೇಕೆಂಬ ಸಣ್ಣ ಆಸೆಯಿಂದ ಮಿಂಚುಹುಳುವಿನ ಮೂಲಕ ಬಣ್ಣ ಹಚ್ಚಿರುವ ಪೃಥ್ವಿ ಅವರು ಮುಂದೊಂದು ದಿನ ವರನಟ ಡಾ||ರಾಜ್‍ಕುಮಾರ್ ಅವರು ರಾಜ್ ಪುತ್ರರ ರೀತಿ ಹೆಸರು ಮಾಡಲಿ ಎಂಬುದೇ ಸಿನಿಸುದ್ದಿಯ ಆಶಯ.

This Article Has 1 Comment
  1. Pingback: visit homepage

Leave a Reply

Your email address will not be published. Required fields are marked *

Translate »
error: Content is protected !!