Ayushman kuranha: ಬರಲಿದೆ ಸೌರವ್ ಗಂಗೂಲಿ ಬಯೋಪಿಕ್

ರಜನಿಕಾಂತ್ ಪುತ್ರಿ ಐಶ್ವರ್ಯ ರಜನಿಕಾಂತ್ ಅವರು ಭಾರತ ತಂಡದ ಯಶಸ್ವಿ ನಾಯಕರಲ್ಲಿ ಒಬ್ಬರಾಗಿದ್ದ ಸೌರವ್ ಗಂಗೂಲಿ ಅವರ ಬಯೋಪಿಕ್ ಮಾಡುತ್ತಿದ್ದು, ಆಯುಷ್ಮಾನ್ ಖುರಾನ ಅವರು ಸೌರವ್ ಗಂಗೂಲಿ ಅವರ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಚಿತ್ರ ಸದ್ಯ ಪ್ರಿ ಪ್ರೊಡಕ್ಷನ್ ಹಂತದಲ್ಲಿದೆ. ಸದ್ಯದಲ್ಲೇ ಇದು ಸೆಟ್ಟೇರಲ್ಲಿದ್ದು, ಐಶ್ವರ್ಯ ರಜನಿಕಾಂತ್ ಅವರು ಚಿತ್ರ ನಿರ್ದೇಶನಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ.

ಚಿತ್ರದ ಪ್ರಮುಖ ಪಾತ್ರವಾದ ಸೌರವ್ ಗಂಗೂಲಿ ಪಾತ್ರಕ್ಕೆ ನಟಿಸುವ ಸಂಬಂಧ ಆಯುಷ್ಮಾನ್ ಕುರಾನಾ ಅವರ ಜೊತೆ ನಿರ್ಮಾಪಕರು ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಆಯುಷ್ಮಾನ್ ಅವರು ಈಗಾಗಲೇ ಹಲವು ರೀತಿಯ ಪಾತ್ರಗಳನ್ನು ನಿರ್ವಹಿಸುವ ಮೂಲಕ ಗಮನ ಸೆಳೆದಿದ್ದಾರೆ.

ಗಂಗೂಲಿ ಅವರ ಬಯೋಪಿಕ್ ನಿರ್ದೇಶನಕ್ಕೆ ಸಂಬಂಧಿಸಿದಂತೆ ವಿಕ್ರಮಾದಿತ್ಯ ಮೊಟ್ಟಾನೆ ಅವರನ್ನು ನಿರ್ದೇಶನಕ್ಕೆ ಮೊದಲು ಆಯ್ಕೆ ಮಾಡಲಾಗಿತ್ತು. ಆದರೆ ಅವರು ಒಪ್ಪಿಕೊಳ್ಳದ ಕಾರಣ ಐಶ್ವರ್ಯ ಅವರ ಕೈಗೆ ಈ ಪ್ರೊಜೆಕ್ಟ್ ಸೇರಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!