ತಂದೆ – ಮಗನ ಬಾಂಧವ್ಯದ ಕುರಿತಾದ ಚಿತ್ರ “ಪರಂವಃ”ದ ಹಾಡು ಬಿಡುಗಡೆ ಆಗಿದೆ.
ಸಂತೋಷ್ ಕೈದಾಳ ನಿರ್ದೇಶಿಸಿರುವ ಈ ಚಿತ್ರದ, ನಾಗೇಶ್ ಕುಂದಾಪುರ, ಶ್ರೀ ತಲಗೇರಿ, ಶಿವರಾಜ್ ಬರೆದಿರುವ ” ಭೂರಮೆಲಿ ಮತ್ಯಾರು” ಎಂಬ ತಂದೆ – ಮಗನ ಭಾವನಾತ್ಮಕ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ.
ಚಿತ್ರಕ್ಕೆ ಅಪರಾಜಿತ್ ಹಾಗೂ ಜೋಸ್ ಜೋಸ್ಸೆ ಸಂಗೀತ ನೀಡಿದ್ದಾರೆ. ರಾಜೇಶ್ ಕೃಷ್ಣನ್ ಹಾಡಿದ್ದಾರೆ. ನಟ ರಾಕ್ಷಸ ಡಾಲಿ ಧನಂಜಯ ಚಿತ್ರದ ಈ ಮೊದಲ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ಜುಲೈನಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ನಿರ್ದೇಶಕ ಸಂತೋಷ್ ಕೈದಾಳ ತಿಳಿಸಿದ್ದಾರೆ.
ಪೀಪಲ್ ವಲ್ಡ್ ಫಿಲಂಸ್ ಲಾಂಛನದಲ್ಲಿ ಚಿತ್ರ ನಿರ್ಮಾಣವಾಗಿದೆ. ಎ.ಎಸ್ ಶೆಟ್ಟಿ ಛಾಯಾಗ್ರಹಣ, ಅಪರಾಜಿತ್ – ಜೋಸ್ ಜೋಸ್ಸೆ ಸಂಗೀತ ನಿರ್ದೇಶನ, ಪೂರ್ಣಚಂದ್ರ ತೇಜಸ್ವಿ ಹಿನ್ನೆಲೆ ಸಂಗೀತ, ವೆಂಕಿ ಯು ಡಿ ವಿ – ವಿಕಾಸ್ ಚಂದ್ರ ಅವರ ಸಂಕಲನ ಚಿತ್ರಕ್ಕಿದೆ.
ಪ್ರೇಮ್ ಸಿಡ್ಗಲ್, ಮೈತ್ರಿ ಜೆ ಕಶ್ಯಪ್, ಗಣೇಶ್ ಹೆಗ್ಗೋಡು, ನಾಜರ್, ಶೃತಿ, ಮುಕುಂದ್, ಅವಿನಾಶ್, ಶಬರೀಶ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
Be the first to comment