ಒಂದು ಸಣ್ಣ ಬ್ರೇಕ್‍ನ ನಂತರ ಹಾಡುಗಳ ಬಿಡುಗಡೆ

ಕಲರ್‍ಫುಲ್ ಕ್ರಿಸ್ಟಲ್ ಕಂಬೈನ್ಸ ಲಾಂಛನದಲ್ಲಿ ನಿರ್ಮಾಣವಾಗಿರುವ ಕಾಮಿಡಿ ಹಾಗೂ ಸಸ್ಪೆನ್ಸ ಕಥಾಹಂದರ್ ಹೊಂದಿರುವ ಒಂದು ಸಣ್ಣ ಬ್ರೇಕ್‍ನ ನಂತರ ಚಿತ್ರದ ಹಾಡುಗಳ ಧ್ವನಿಸುರಳಿ ಹಾಗೂ ಟ್ರೈಲರ್ ಬಿಡುಗಡೆ ಸಮಾರಂಭ ಕಳೆದ ಸೋಮವಾರ ಸಂಜೆ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು. ಒಕ್ಕಲಿಗ ಮಹಾ ಸಂಸ್ಥಾನದ ಶ್ರೀ ಕುಮಾರ್ ಚಂದ್ರಶೇಖರನಾಥ ಸ್ವಾಮೀಜಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಚಿತ್ರದ ಹಾಡುಗಳನ್ನು ಬಿಡುಗಡೆಗೊಳಿಸಿದರು. ಲಹರಿ ಸಂಸ್ಥೆಯ ಮುಖ್ಯಸ್ಥರಾದ ವೇಲು ಕೂಡ ಈ ಸಂಧರ್ಬದಲ್ಲಿ ಹಾಜರಿದ್ದರು. ಆಭಿಲಾಷ್ ಗೌಡ ಈ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸರ್ವಶ್ರೀ ಈ ಚಿತ್ರಕ್ಕೆ ಬಂಡವಾಳ ಹಾಕಿ ನಿರ್ಮಾಣ ಮಾಡಿದ್ದಾರೆ. ರವಿ.ಆರ್.ಗsÀರಣಿ ಸೇರಿದಂತೆ ಒಂದಷ್ಟು ನಿರ್ದೇಶಕರ ಜೊತೆ ಸೀರಿಯಲ್‍ಗಳಿಗೆ ಕೆಲಸ ಮಾಡಿದ ಅಭಿಲಾಷ್ ಗೌಡ ಇದೇ ಮೊದಲ ಬಾರಿಗೆ ನಿರ್ದೇಶನಕ್ಕಿಳಿದ್ದಾರೆ. ನಾಲ್ವರು ಹುಡುಗರ ಜೀವನದ ಕಥಾನಕ ಇದಾಗಿದ್ದು ಸರಳವಾಗಿ ಸಾಗಿದ್ದ ಅವರ ಜೀವನದಲ್ಲಿ ಒಂದು ಸಣ್ಣ ಗ್ಯಾಪಿನ ನಂತರ ಸಂಪೂರ್ಣವಾಗಿ ಚೇಂಜ್ ಆಗುತ್ತದೆ.

ಆ ಬದಲಾವಣೆ ಏನು ಅನ್ನುವುದೇ ಒಂದು ಸಣ್ಣ ಬ್ರೇಕ್‍ನ ನಂತರ ಚಿತ್ರದ ಕಥೆ. ಇಡೀ ಸಿನಿಮಾ ಸಸ್ಪನ್ಸ್ ಹಾಗೂ ಕಾಮಿಡಿಯಾಗಿ ಸಾಗುತ್ತದೆ. ಇದೇ ಈ ಚಿತ್ರದ ಹೈಲೈಟ್ ಕೂಡ. ಮಂಡ್ಯ , ಚಿಕ್ಕಮಗಳೂರು ಹಾಗು ಕೊಡಗು, ಸುತ್ತಮುತ್ತ ಈ ಚಿತ್ರಕ್ಕೆ ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿದು ಬಿಡುಗಡೆ ಹಂತ ತಲುಪಿದೆ. ಬರುವ ನವೆಂಬರ್‍ನಲ್ಲಿ ಚಿತ್ರವನ್ನು ರಿಲೀಸ್ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ಈ ಚಿತ್ರದ ನಿರ್ದೇಶಕ ಅಭಿಲಾಶ್ ಗೌಡ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಇಳಿದರು. ಲಹರಿ ವೇಲು ಮಾತನಾಡಿ ಈ ಹೊಸ ಹುಡುಗರ ಹೊಸ ಪ್ರಯತ್ನ ತುಂಬಾ ಚೆನ್ನಾಗಿದೆ. ವಿಶೇಷವಾಗಿ ಫಸ್ಟ್ ಟೈಂ ನಮ್ಮ ಆಫೀಸಿನಲ್ಲಿ ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದರು ಎಂದು ಹೇಳಿದರು. ನಂತರ ಚಿತ್ರದ ಸಂಗೀತ ನಿರ್ದೇಶಕ ಹಾಗು ನಾಲ್ವರು ನಾಯಕರಲ್ಲಿ ಒಬ್ಬರಾಗಿ ಕಾಣಿಸಿಕೊಂಡಿರುವ ಹಿತನ್‍ಹಾಸನ್ ಮಾತನಾಡಿ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ, ಹರ್ಷಪ್ರಿಯ ಹಾಗೂ ಅಭಿಲಾಶ್ ಗೌಡ ಸಾಹಿತ್ಯ ಬರೆದಿದ್ದಾರೆ. ನಾನೂ ಕೂಡ ಎರಡು ಹಾಡುಗಳಿಗೆ ಧನಿಯಾಗಿದ್ದೇನೆ. ಸ್ನೇಹ ಮತ್ತು ಪ್ರೀತಿಯಸುತ್ತ ನಡೆಯುವಂತಹ ಸಸ್ಪೆನ್ಸ್ ಹಾಗೂ ಕಾಮಿಡಿ ಕಥಾನತ ಈ ಚಿತ್ರದಲ್ಲಿದೆ. ಒಂದು ಸಣ್ಣ ಬ್ರೇಕಿನ ನಂತರ ಚಿತ್ರದ ಹೆಸರು ಕೇಳಿದ ಕೂಡಲೇ ಹೇಗೆ ಕುತೂಹಲ ಮಾಡುತ್ತೋ ಅದೇ ರೀತಿ ಚಿತ್ರ ಕೂಡ ಮೂಡಿ ಬಂದಿದೆ. ಸ್ನೇಹಿತರಲ್ಲಿ ಒಬ್ಬನಾಗಿ ನನ್ನ ಪಾತ್ರ ಕೂಡ ಚೆನ್ನಾಗಿ ಮೂಡಿ ಬಂದಿದೆ ಎಂದು ಹೇಳಿದರು. ಈ ಚಿತ್ರದಲ್ಲಿ ನಾಲ್ವರು ನಾಯಕರ ಪಾತ್ರದಲ್ಲಿ ಹಿತನ್‍ಹಾಸನ್, ದೋಸ್ತಿಸೂರ್ಯ, ಕಿರಣ್ ಕೊಡ್ಲಿಪೇಟೆ, ಹಾಗೂ ಅಮ್ಮಣ್ಣಿ ನಟಿಸಿದ್ದಾರೆ. ನಾಯಕಿಯ ಪಾತ್ರದಲ್ಲಿ ಚೈತ್ರ ಮಲ್ಲೀಕಾರ್ಜುನ್ ಅಭಿನಯಿಸಿದ್ದಾರೆ. ಚಿತ್ರದ ನಿರ್ಮಾಪಕರಾದ ಸರ್ವಶ್ರೀ ಮಾತನಾಡಿ ಸಿನಿಮಾ ಮೇಲಿನ ಆಸಕ್ತಿಯಿಂದ ಮೊದಲ ಬಾರಿಗೆ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದೇನೆ. ಕಥೆ ತುಂಬಾ ಇಷ್ಟವಾಯಿತು. ಕುಟುಂಬ ಸಮೇತರಾಗಿ ನೊಡಬಹುದಾದಂತ ಹಾಗೂ ಈಗಿನ ಯುವ ಜನಾಂಗಕ್ಕೆ ಇಷ್ಟವಾಗುವಂತಹ ಕಥೆ ಈ ಚಿತ್ರದಲ್ಲಿದೆ ಎಂದು ಹೇಳಿದರು.

This Article Has 1 Comment
  1. Pingback: scriptless automation tools open source

Leave a Reply

Your email address will not be published. Required fields are marked *

Translate »
error: Content is protected !!