Sthabda: ಜೂನ್ 9ಕ್ಕೆ ಸ್ತಬ್ಧ ತೆರೆಗೆ

ಪ್ರತಾಪ್ ಸಿಂಹ, ರಾಘವೇಂದ್ರ ರಾಜ್‌ಕುಮಾರ್ ನಟನೆಯ ಸ್ತಬ್ಧ ಸಿನಿಮಾ ಜೂನ್ 9ರಂದು ತೆರೆಗೆ ಬರಲಿದೆ.

ಸಾಯಿ ಸಾಗರ್ ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ವಿದ್ಯಾಸಾಗರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೈಲರ್ ಮತ್ತು ಹಾಡುಗಳನ್ನು ಅನಾವರಣಗೊಳಿಸಲಾಗಿದ್ದು ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ.

ತಮಿಳು ಚಿತ್ರ ಅರಿಯಾಮೈ ನಿರ್ದೇಶಕ ಲಾಲಿ ರಾಘವ್ ಸ್ತಬ್ಧ ಚಿತ್ರದ ಮೂಲಕ ಕನ್ನಡ ಚಲನಚಿತ್ರೋದ್ಯಮಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಸಾಯಿ ಸಾಗರ್ ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣ ಆಗಿದೆ.

ಸ್ತಬ್ಧ ಸಿನಿಮಾ ಸೈಕಲಾಜಿಕಲ್ ಥ್ರಿಲ್ಲರ್ ಆಗಿದ್ದು, ಭ್ರಮೆಯ ಕುರಿತು ಕಥೆ ಹೊಂದಿದೆ. ನಟ ಪ್ರತಾಪ್ ಸಿಂಹ ಅವರ ಚೊಚ್ಚಲ ಚಿತ್ರ ಇದಾಗಿದೆ. ಹರ್ಷಿಕಾ ಪೂಣಚ್ಚ, ರಾಘವೇಂದ್ರ ರಾಜ್ಕುಮಾರ್, ಪ್ರಿಯಾಂಕಾ, ಪ್ರಶಾಂತ್ ಸಿದ್ದಿ ಮತ್ತು ಶ್ರುತಿ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

45 ದಿನ ಚಿತ್ರೀಕರಣಗೊಂಡ ಸ್ತಬ್ಧ ಚಿತ್ರವನ್ನು ಬೆಂಗಳೂರು, ಮಂಗಳೂರು ಮತ್ತು ಉಡುಪಿಯಲ್ಲಿ ಚಿತ್ರೀಕರಿಸಲಾಗಿದೆ.

ಆರವ್ ರಿಷಿ ಅವರ ಸಂಗೀತ, ಪಿವಿಆರ್ ಸ್ವಾಮಿ ಅವರ ಛಾಯಾಗ್ರಹಣ, ಸಂಗೀತ ಸಂಯೋಜಕ ಹಂಸಲೇಖ ಅವರ ಸಾಹಿತ್ಯ ಚಿತ್ರಕ್ಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!