ಹಳ್ಳಿಯ ರೈತಾಪಿ ಜನರ ಬದುಕು, ಸಾಮಾಜಿಕ ಸ್ಥಿತಿಗತಿ, ಸ್ನೇಹ-ಪ್ರೀತಿ-ಬಾಂಧವ್ಯದ ಚಿತ್ರಣವಾಗಿ ‘ಶ್ರೀಮಂತ’ ತೆರೆಯ ಮೇಲೆ ಮೂಡಿ ಬಂದಿದೆ.
ಇಂದು ಹಳ್ಳಿಯಲ್ಲಿರುವ ಯುವಕರಿಗೆ ಮದುವೆಯಾಗಲು ಹುಡುಗಿಯರು ಸಿಗೋದು ಕಷ್ಟ ಎನ್ನುವ ಸ್ಥಿತಿ ಇದೆ. ಹಾಗೆಯೇ ಹಳ್ಳಿಯ ಹುಡುಗಿಯರು ಪಟ್ಟಣದ ಹುಡುಗರನ್ನೇ ಬಯಸುವ ಸ್ಥಿತಿ ಇದೆ. ರೈತರು ಹಳ್ಳಿ ಬಿಟ್ಟು ನಗರ ಸೇರುತ್ತಿದ್ದಾರೆ. ಈ ಕಥಾವಸ್ತು ಮೇಲೆ ಶ್ರೀಮಂತ ಸಿನಿಮಾ ನಿಂತಿದೆ.
ಚಿತ್ರಕ್ಕೆ ಹಾಡುಗಳು, ಆ್ಯಕ್ಷನ್, ಲವ್, ಕಾಮಿಡಿ, ಸೆಂಟಿಮೆಂಟ್ ಎಲ್ಲವನ್ನೂ ಹದವಾಗಿ ಸೇರಿಸಿ ಕಲಾತ್ಮಕ ಕಥಾಹಂದರಕ್ಕೆ ಕಮರ್ಷಿಯಲ್ ಟಚ್ ನೀಡುವ ಯತ್ನವನ್ನು ನಿರ್ದೇಶಕ ಹಾಸನ್ ರಮೇಶ್ ಅವರು ಮಾಡಿದ್ದಾರೆ.
ನಟರಾದ ಕ್ರಾಂತಿ, ವೈಷ್ಣವಿ ಮೆನನ್, ವೈಷ್ಣವಿ ಪಟವರ್ಧನ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕಲ್ಯಾಣಿ ಅವರು ಗ್ರಾಮೀಣ ಮಹಿಳೆಯಾಗಿ ತಮ್ಮ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಚಿತ್ರದ ಹೈಲೈಟ್ ಆದ ಸೋನು ಸೂದು ಅವರು ಚಿತ್ತಾರ ಕೊನೆಯಲ್ಲಿ ಹಿತೋಪದೇಶ ಮಾಡಿ ಗಮನ ಸೆಳೆದಿದ್ದಾರೆ.
ಚರಣ್ ರಾಜ್, ಗಿರೀಶ್ ಶಿವಣ್ಣ, ಕುರಿರಂಗ, ರಮೇಶ್ ಭಟ್, ರಾಜು ತಾಳಿಕೋಟೆ, ರವಿಶಂಕರ್ ಗೌಡ, ಸಾಧುಕೋಕಿಲ ಹೀಗೆ ಬೃಹತ್ ಕಲಾವಿದ ದಂಡು ಇಲ್ಲಿದೆ.
ಚಿತ್ರದ ಛಾಯಾಗ್ರಹಣ ದೃಶ್ಯಗಳನ್ನು ಶ್ರೀಮಂತವಾಗಿ ಕಾಣುವಂತೆ ಮಾಡಿದೆ. ಸಿನಿಮಾದ ಹಾಡು, ಹಿನ್ನೆಲೆ ಸಂಗೀತ ಸಿನಿಮಾದ ಹೈಲೈಟ್ಸ್ ಆಗಿದೆ ಎನ್ನಬಹುದು. ಚಿತ್ರದಲ್ಲಿ ಮರಂಜನೆ ಜೊತೆಗೊಂದು ಮೆಸೇಜ್ ನೀಡುವ ಯತ್ನವನ್ನು ಮಾಡಲಾಗಿದೆ. ಚಿತ್ರದ ಅವಧಿ ಕಡಿಮೆ ಆಗಿದ್ದರೆ ಇನ್ನಷ್ಟು ನೋಡಲು ಹಿತ ಆಗುತ್ತಿತ್ತು ಎಂದು ಮೇಲು ನೋಟಕ್ಕೆ ಅನಿಸುತ್ತದೆ.
_______
Be the first to comment