Rajanikanth: ತಲೈವಾ ನಟನೆಗೆ ಗುಡ್‌ಬೈ?

ತಲೈವಾ ರಜನೀಕಾಂತ್ ಸಿನಿಮಾಗೆ ಗುಡ್‌ಬೈ ಹೇಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ರಜನಿಕಾಂತ್‌ ಗೆ ಈಗ 72 ವರ್ಷ ಆಗಿದೆ. ಅವರ ಆರೋಗ್ಯವೂ ಮೊದಲಿನಂತಿಲ್ಲ. ಈ ಕಾರಣದಿಂದ ಅವರು ಸಿನಿಮಾಗಳಿಗೆ ಗುಡ್ ಬೈ ಹೇಳುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಸದ್ಯ ರಜನೀಕಾಂತ್ ಜೈಲರ್, ಲಾಲ್ ಸಲಾಮ್ ಸಿನಿಮಾಗಳಲ್ಲಿ ಒಟ್ಟೊಟ್ಟಿಗೆ ಅಭಿನಯಿಸುತ್ತಿದ್ದಾರೆ. ಈಗ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಿದ ಬಳಿಕ ಅವರು ಸಿನಿಮಾ ನಟನೆಯಿಂದ ದೂರವಿರಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರತೊಡಗಿದೆ.

ಲೋಕೇಶ್ ಕನಗರಾಜು ನಿರ್ದೇಶನದಲ್ಲಿ ರಜನಿಕಾಂತ್ ಸಿನಿಮಾ ಮಾಡಲಿದ್ದು ಇದುವೇ ಅವರ ಕೊನೆಯ ಸಿನಿಮಾವಾಗುವ ಸಾಧ್ಯತೆಯಿದೆ. ಇದು ಅವರ 171 ನೇ ಸಿನಿಮಾ ಆಗಿರಲಿದೆ.

ಸೂಪರ್ ಸ್ಟಾರ್ ರಜನೀಕಾಂತ್ ನಾಯಕರಾಗಿರುವ ಜೈಲರ್’ ಸಿನಿಮಾದ ರಿಲೀಸ್ ಡೇಟ್ ಈಗಾಗಲೇ ಫಿಕ್ಸ್‌ ಆಗಿದೆ.

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಜೈಲರ್ ಸಿನಿಮಾ ಆಗಸ್ಟ್ 10 ರಂದು ಬಿಡುಗಡೆಯಾಗಲಿದೆ. ಇದು ತಲೈವಾ ಅಭಿನಯದ 169 ನೇ ಸಿನಿಮಾವಾಗಲಿದೆ. ಈ ಚಿತ್ರದಲಿ ಶಿವಣ್ಣ ಕೂಡಾ ಅಭಿನಯಿಸುತ್ತಿರುವುದರಿಂದ ಕನ್ನಡದ ಅಭಿಮಾನಿಗಳೂ ಈ ಸಿನಿಮಾ ಬಗ್ಗೆ ಕುತೂಹಲ ಹೊಂದಿದ್ದಾರೆ.
——

Be the first to comment

Leave a Reply

Your email address will not be published. Required fields are marked *

Translate »
error: Content is protected !!